ವರದಿ ಮಧು ದೇವನಹಳ್ಳಿ
ವಾರ್ತಾಜಾಲ: ದೇವನಹಳ್ಳಿ ತಾಲ್ಲೂಕು ವಿಜಯಪುರ ಹೋಬಳಿಯ ಹಲವು ಗ್ರಾಮಗಳಿಗೆ ಶಾಸಕರ ವಿಶೇಷ ಅನುದಾನದಲ್ಲಿ ಸಿ.ಸಿ.ರಸ್ತೆಯ ಗುದ್ದಲಿಪೂಜೆ ನಡೆಯಿತು.
ತಾಲ್ಲೂಕಿನ ವಿಜಯಪುರ ಹೋಬಳಿಯ ಧರ್ಮಪುರ, ತಿಮ್ಮನಹಳ್ಳಿ , ಬೈರಾಪುರ, ಯರ್ತಿಗಾನಹಳ್ಳಿ, ಬಿದಲೂರು, ಹಾಗೂ ಇನ್ನು ಹಲವು ಗ್ರಾಮಗಳ ರಸ್ತೆಗಳಿಗೆ ಸಿ.ಸಿ ರಸ್ತೆ ನಿರ್ಮಾಣವನ್ನು ಶಾಸಕರ ವಿಶೇಷ ಅನುದಾನದಲ್ಲಿ ವಿಜಯಪುರ ಹೋಬಳಿಗೆ ೧.೫ ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ನಿಸರ್ಗ ನಾರಾಯಣಸ್ವಾಮಿ ಗುದ್ದಲಿ ಪೂಜೆ ನಡೆಸಿದರು.

ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಗುತ್ತಿಗೆದಾರರು ಯಾವುದೇ ಕಳಪೆ ಕಾಮಗಾರಿ ಮಾಡದೇ ಗುಣಮಟ್ಟದ ಕಾಮಗಾರಿ ಮಾಡಬೇಕು ಇದನ್ನು ಗಮನಿಸಲು ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಿಗೆ ತಿಳಿಸಿದ್ದೇನೆ ಹಾಗೂ ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಕೈಜೋಡಿಸಬೇಕು. ಕಸಬಾ ಹೋಬಳಿ ಮತ್ತು ಕುಂದಾಣ ಹೋಬಳಿಯಲ್ಲೂ ಸಿ.ಸಿ.ರಸ್ತೆ ಕಾಮಗಾರಿಗೆ ಒಟ್ಟು ೫ ಕೋಟಿ ವೆಚ್ಚದ ಕಾಮಗಾರಿಗೆ ಇಂದು ಚಾಲನೆ ನೀಡುತ್ತಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮಗಳ ಪಂಚಾಯತಿ ಸದಸ್ಯರು ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.
0 Comments