ಚಿಕ್ಕತೇಕಹಳ್ಳಿ ಡಿ ಶಿವ ಕುಮಾರ
ವಾರ್ತಾಜಾಲ,ಶಿಡ್ಲಘಟ್ಟ : ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಪಿಎಸ್‌ಐ ಹುದ್ದೆಗೆ ೭೦-೮೦ ಲಕ್ಷ,ಉಪ ವಿಭಾಗ ಅಧಿಕಾರಿ ಹುದ್ದೆಗೆ ೧ ಕೋಟಿ ಹಣ ನೀಡಬೇಕಿದೆ. ಹಣ ನೀಡಿ ನೌಕರಿ ಪಡೆಯುತ್ತಿದ್ದಾರೆ. ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಸರ್ಕಾರ ತರೋದು ನಿಮ್ಮ ಕೈಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.
ಶಿಡ್ಲಘಟ್ಟ ನಗರದ ಕೋಟೆ ಸರ್ಕಲ್ ಬಳಿ ಸಾರ್ವಜನಿಕರನ್ನ ಉದ್ದೇಶಿಸಿ ಪಂಚರತ್ನ ಯೋಜನೆಯ ಬಗ್ಗೆ ಅವರು ಮಾತನಾಡಿದರು.
ಅವರು ಪಂಚರತ್ನ ಯೋಜನೆಯ ಯಾತ್ರೆಯಲ್ಲಿ ಪಾಲ್ಗೊಂಡು ಪಂಚ ರತ್ನ ಯೋಜನೆ ಉಪಯೋಗಗಳನ್ನು ಜನರ ಮುಂದಿಟ್ಟು ಮಾತನಾಡಿದ ಅವರು ಪ್ರತಿಯೊಂದು ಬಡ ಕುಟುಂಬದ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಬೇಕು. ಕಟ್ಟಕಡೆಯ ಪ್ರತಿಯೊಬ್ಬ ಬಡ ಕುಟುಂಬದ ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯ ಬೇಕು ಹಾಗೆಯೇ ಕಟ್ಟ ಕಡೆಯ ಕುಟುಂಬ ದವರಿಗೂ ನಿವೇಶನ ಮನೆ ನೀಡಬೇಕೆಂದು ಮಹಿಳಾ ಮತ್ತು ಯುವಕರು ಉದ್ಯೋಗ ಪಡ್ದು ಉದ್ಯೋಗಸ್ಥರಾಗಿ ಆರ್ಥಿಕವಾಗಿ ಅಭಿವೃದ್ಧಿ ಆಗುವುದಕ್ಕೆ ರೈತರಿಗಾಗಿ ರೈತ ಸಿರಿ ಹಾಗೂ ವೃದ್ಧರಿಗೆ ಅವರ ಜೀವನ ಸಾಗಿಸಲು ಅನುಕೂಲವಾಗುವಂತೆ ಪ್ರತಿ ತಿಂಗಳಿಗೆ ೫೦೦೦ ವೃದ್ಧಾಪ್ಯ ವೇತನ ನೀಡು ವುದಾಗಿ ಪಂಚರತ್ನ ಯೋಜನೆಯನ್ನು ರೂಪಿಸಲಾಗಿದೆ ಎಂದರು. ಅದರ ಜೊತೆಗೆ ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡಲಾ ಗುವುದು ಎಂದು ತಿಳಿಸಿದರು.
ಯುಕೆಜಿಯಿಂದ ಪಿಯುಸಿವರೆಗೆ ಪ್ರತಿ ಗ್ರಾಮ ಪಂಚಾಯತಿ ಕೇಂದ್ರದಲ್ಲಿ ಉಚಿತ ಶಿಕ್ಷಣ, ದಿನದ ೨೪ ಗಂಟೆ ಸೇವೆ ನೀಡುವ ೩೦ ಬೆಡ್ ಗಳ ಆಸ್ಪತ್ರೆ ನಿರ್ಮಿಸುವ ಮೂ ಲಕ ಮನೆ ಬಾಗಿಲಿಗೆ ಆರೋಗ್ಯ ಭಾಗ್ಯ, ರೈತರು ಮತ್ತೆ ಮತ್ತೆ ಸಾಲಗಾರರಾಗುವ ಪರಿಸ್ಥಿತಿ ತೊಡೆದು ರೈತರ ಬದುಕು ಅಸನಗೊಳಿಸುವ ಯೋಜನೆ, ಯುವಕರು ೮-೧೦ ಸಾವಿರ ವೇತನಕ್ಕೆ ಮಹಾನಗರಗಳಿಗೆ ಅಥವಾ ಬೆಂಗಳೂರಿಗೆ ಹೋಗದೇ, ಸ್ವಂತ ಉದ್ಯೋಗ ಆರಂಭಿಸಿ ಇತರರಿಗೆ ಉದ್ಯೋಗ ನೀಡುವಂತೆ ಶೇಕಡ ೯೦ರಷ್ಟು ಸಹಾಯಧನದಲ್ಲಿ ಮೂಲಸೌಕರ್ಯ, ನಾಡಿನ ಪ್ರತಿ ಬಡ ಕುಟುಂಬವು ಉಚಿತವಾಗಿ ಸ್ವಂತ ಮನೆ ಹೊಂದುವ ಯೋಜನೆಯನ್ನು ರೂಪಿಸುತ್ತೇನೆ ಎಂದರು. ಶಿಡ್ಲಘಟ್ಟದಲ್ಲಿ ನಿಮ್ಮ ನೆಚ್ಚಿನ ನಾಯಕರಾದ ಬಿ.ಎನ್ ರವಿಕುಮಾರ್ ಅವರನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿಕೊಡಿ ನಿಮ್ಮ ಜನತಾ ಸರ್ಕಾರ ಅಧಿಕಾರಕ್ಕೆ ತರುವ ಜವಾಬ್ದಾರಿ ನಿಮ್ಮದು ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾ ಧ್ಯಕ್ಷರಾದ ಸಿಎಂ ಇಬ್ರಾಹಿಂ, ಚಿಂತಾಮಣಿ ಶಾಸಕರಾದ ಜೆ.ಕೆ ಕೃಷ್ಣಾರೆಡ್ಡಿ, ಬೋಜೇಗೌಡ,ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ರೇವಣ್ಣ,ನಗರ ಸಭೆ ಅಧ್ಯಕ್ಷೆ ಸು ಮಿತ್ರಾ ರಮೇಶ್,ಬಂಕ್ ಮುನಿಯಪ್ಪ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್,ಹಾಗೂ ತಾಲ್ಲೂಕಿನ ಎಲ್ಲಾ ಜೆಡಿಎಸ್ ಕಾರ್ಯ ಕರ್ತರು ಭಾಗವಹಿಸಿದ್ದರು.
0 Comments