Ticker

6/recent/ticker-posts

Ad Code

Responsive Advertisement

"ಕಾರ್ತಿಕ ಸಂಗೀತೋತ್ಸವ" ಮತ್ತು "ಕನಕ ಜಯಂತಿ"



ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್ (ರಿ.) ವತಿಯಿಂದ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮ ಮಂದಿರದಲ್ಲಿ, ನವೆಂಬರ್ 11 ರಿಂದ 13 ರವರೆಗೆ ಕಾರ್ತಿಕ ಸಂಗೀತ ಸಂಭ್ರಮ, ಶ್ರೀ ಕನಕದಾಸ ಜಯಂತಿ ಮತ್ತು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಲವಾರು ಸಾಂಸ್ಕೃತಿಕ/ ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :

ನವೆಂಬರ್ 11,  ಶುಕ್ರವಾರ :--  ಸಂಜೆ 6-00 ಗಂಟೆಗೆ, ವಿ|| ವೈ. ಜಿ. ಶ್ರೀಲಲಿತಾ (ಅನನ್ಯ-ನಾದಜ್ಯೋತಿ ಪುರಸ್ಕೃತೆ) ಇವರಿಂದ ಗಾಯನ ವಿ|| ಕಾರ್ತಿಕೇಯ ರಾಮಚಂದ್ರ (ಪಿಟೀಲು), ವಿ|| ನಿಕ್ಷಿತ್  ಪುತ್ತೂರು (ಮೃದಂಗ).


ನವೆಂಬರ್ 12, ಶನಿವಾರ :--  ಸಂಜೆ 6 ಗಂಟೆಗೆ ವಿ|| ಸಾಯಿತೇಜಸ್ ಚಂದ್ರಶೇಖರ್ ಇವರಿಂದ ಹಾರ್ಮೋನಿಯಂ ವಾದನ, ಕು|| ಹ್ರಿಷಿತಾ ಕೇದಗೆ (ಪಿಟೀಲು), ವಿ|| ಕೆ.ಕೆ. ಹರಿನಾರಾಯಣ್ (ಮೃದಂಗ), ವಿ|| ಶ್ರೀನಿಧಿ ಆರ್. ಕೌಂಡಿನ್ಯ (ಘಟ).

ನವೆಂಬರ್ 13, ಭಾನುವಾರ :-- ಸಂಜೆ 5 ಗಂಟೆಗೆ ಹರಿದಾಸ ರೂಪಕ : "ಹರಿದಾಸರು ಕಂಡ ಶ್ರೀಕೃಷ್ಣ" ಶೀರ್ಷಿಕೆಯಲ್ಲಿ ಶ್ರೀಕೃಷ್ಣನನ್ನು ಕುರಿತು ಹರಿದಾಸರುಗಳು ರಚಿಸಿದ ಕೃತಿಗಳ  ನಿರೂಪಣೆ ಸಹಿತ ಗಾಯನ. ನಿರೂಪಣೆ : ಡಾ|| ವಿನಾಯಕಾಚಾರ್, ಗಾಯನ : ವಿ|| ಶ್ರೀಮತಿ ದಿವ್ಯಾ ಗಿರಿಧರ್, ವಿ|| ದೀಪಕ್ ಮೂರ್ತಿ (ಪಿಟೀಲು), ವಿ|| ಪೃಥ್ವಿಕೃಷ್ಣ (ಮೃದಂಗ). ಸಂಜೆ 7ಕ್ಕೆ ಶ್ರೀ ಪುರಂದರದಾಸರ ನವರತ್ನ ಮಾಲಿಕಾ ಗೋಷ್ಠಿ ಗಾಯನ : ವಿ|| ರೇಖಾ ಪ್ರಸಾದ್ (ಗಾಯನ), ವಿ|| ಸಿಂಧೂ ಪುತ್ತೂರಾಯ (ಪಿಟೀಲು), ವಿ|| ವೆಂಕಟಸುಬ್ಬು (ಮೃದಂಗ),  ವಿ|| ಕಾರ್ತೀಕ್ ರಾಜನ್ (ಘಟ). ಈ ವಿಶೇಷ ಕಾರ್ಯಕ್ರಮದಲ್ಲಿ ಸಂಗೀತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಸ್ಥೆಯ ಪದಾಧಿಕಾರಿಗಳು ವಿನಂತಿಸಿದ್ದಾರೆ.

Post a Comment

0 Comments

Ad Code

Responsive Advertisement