Ticker

6/recent/ticker-posts

Ad Code

Responsive Advertisement

ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಹಾಗೂ ಕಾನೂನು ಅರಿವು ಜಾಥಾ

 ಕೊಳ್ಳೇಗಾಲ ಸುದ್ದಿ : ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ  ಪ್ರಾಧಿಕಾರ, ಚಾಮರಾಜನಗರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ಕೊಳ್ಳೇಗಾಲ ವಕೀಲರ ಸಂಘ  ಕಂದಾಯ ಇಲಾಖೆ, ತಾಲ್ಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಅರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸರ್ಕಾರಿ ಮತ್ತು ಅರೆ ಸರ್ಕಾರಿ ಇಲಾಖೆ, ಮತ್ತು ವಿವಿಧ ಸಂಘ ಸಂಸ್ಥೆಗಳು ಕೊಳ್ಳೇಗಾಲ ಇವರ ಸಹಯೋಗದಲ್ಲಿ 2022 ರ  ರಾಷ್ಟ್ರೀಯ ಕಾನೂನು ಸೇವೆಗಳ  ದಿನಾಚರಣೆ ಹಾಗೂ ಕಾನೂನು ಅರಿವು ಜಾಥಾ ನಡೆಸಲಾಯಿತು,

ಈ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯದೀಶರಾದ ಎಂ. ಆನಂದ್ ರವರು ಮಾತನಾಡಿ ಪ್ರತಿ ವರ್ಷ ನವಂಬರ್ 9ನೇ ತಾರೀಕಿನಂದು ಕಾನೂನು ಅರಿವು ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ರಚನೆಯಾಗಿದೆ, ಜಿಲ್ಲೆಗಳಲ್ಲಿಯೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿಯೂ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ರಚನೆಯಾಗಿದೆ, ತಾಲ್ಲೂಕು ಕಾನೂನು ಸೇವಾ ಸಮಿತಿ , ವಕೀಲರ ಸಂಘ ಹಾಗೂ ತಾಲ್ಲೂಕು ಆಡಳಿತ, ಮತ್ತು ತಾಲ್ಲೂಕಿನ ಎಲ್ಲ ಇಲಾಖೆಗಳ ಸಹಯೋಗದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಅಂಗವಾಗಿ ಕಾನೂನು ಅರಿವು  ಮತ್ತು ನೆರವು ಪ್ರದರ್ಶನ ಹಾಗೂ ಜಾತಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಇದರ ಮುಖ್ಯ ಉದ್ದೇಶ ಎಲ್ಲರಿಗೂ ನ್ಯಾಯ ದೊರಕಿಸಿ ಕೊಡಬೇಕು ಸಮಾಜದ ಕಟ್ಟಾಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿ ಕೊಡುವಂತ ವ್ಯವಸ್ಥೆ ಮಾಡುವಂತದಾಗಿದೆ, ನಾನು ಬಡವ ನನ್ನತ್ರ ದುಡ್ಡಿಲ್ಲ ನಮಗೆ ನ್ಯಾಯ ಎಲ್ಲಿ ಸಿಗುತ್ತದೆ ಎಂಬ ಮನೋಭಾವ ಯಾರಿಗೂ ಬರಬಾರದು ಅ ನಿಟ್ಟಿನಲ್ಲಿ ಕಾನೂನಿನ ಬಗ್ಗೆ ಅರಿವನ್ನು ನೀಡಿ ಅಂತವರಿಗೆ ನ್ಯಾಯ ದೊರಕಿಸಿ ಕೊಡುವ ಸಲುವಾಗಿ ಇಂತಹ ಅರಿವು ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ, ಬಡವನಾಗಿರಲಿ ಬಲ್ಲಿದನಾಗಿರಲಿ ಕಾನೂನಿನ ದೃಷ್ಟಿಯಲ್ಲಿ ಎಲ್ಲರು ಒಂದೇ,

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಎಲ್ಲ ಇಲಾಖೆಗಳು ಅ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬರುತ್ತಿದೆ, ಎಲ್ಲ ಇಲಾಖೆಗಳು ಹಾಗೂ ಪತ್ರಿಕಾ ಮಾದ್ಯಮದವರು ಸಾರ್ವಜನಿಕರಿಗೆ ಕಾನೂನು ಅರಿವನ್ನು ಮೂಡಿಸಲು ಸಹಕರಿಸಬೇಕು ಎಂದು ತಿಳಿಸಿದರು,

ಈ ಕಾರ್ಯಕ್ರಮದಲ್ಲಿಪ್ರಧಾನ ಸಿವಿಲ್ ನ್ಯಾಯಧೀಶ ಎಂ. ಎನ್. ನಂದಿನಿ, ಅಪರ ಸಿವಿಲ್ ನ್ಯಾಯಧೀಶ ಸಿ. ಜೆ. ರಘು, ಎ.ಸಿ. ಗೀತಾ ಉಡೆದ, ತಹಸೀಲ್ದಾರ್ ಮಂಜುಳಾ, ಡಿ. ತಾಲ್ಲೂಕು ಪಂಚಾಯಿತಿ ಇ ಒ ಮಹೇಶ್, ಸಿಡಿಪಿಒ ನಾಗೇಶ್, ವೈ. ಎಸ್. ಪಿ, ನಾಗರಾಜು, ಎಸ್ ಐ ಚೇತನ್, ವಕೀಲ ಸಂಘದ ಅಧ್ಯಕ್ಷರು ಡಿ. ಎಸ್. ಬಸವರಾಜು, ಉಪಾಧ್ಯಕ್ಷ ಸೀಮಾ ತಾಸಿನ್ ಸುಲ್ತಾನ್, ಹಾಗೂ ಇನ್ನಿತರರು ಇದ್ದರು

Post a Comment

0 Comments

Ad Code

Responsive Advertisement