Ticker

6/recent/ticker-posts

Ad Code

Responsive Advertisement

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಉಚಿತ ಯಾತ್ರೆ ಸೇವೆ

ಬೆಂಗಳೂರು : ಗಾಂಧಿನಗರ ವಿಧಾನ ಸಭಾ ಕ್ಷೇತ್ರದ ಸಾರ್ವಜನಿಕರನ್ನು ಈ ಕಾರ್ತಿಕ ಮಾಸದ ಕಡೆಯ ಸೋಮವಾರದಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಒಂದು ಸಾವಿರಕ್ಕೂ ಅಧಿಕ ಕ್ಷೇತ್ರದ ಸಂಖ್ಯೆಯ ಶ್ರದ್ಧಾಳು ಭಕ್ತಾದಿಗಳಿಗೆ ಉಚಿತವಾಗಿ ಶ್ರೀ ಕ್ಷೇತ್ರಕ್ಕೆ ಹೋಗಿ ಬರಲು ಬಿಜೆಪಿ ಮುಖಂಡರಾದ ಮಾಲೂರು ಎಸ್.ಎನ್. ಕೃಷ್ಣಯ್ಯ ಶೆಟ್ಟರು ಹಾಗೂ ತಂಡದವರು ವ್ಯವಸ್ಥೆಯನ್ನು ಕಲ್ಪಿಸಿ, ಭಾನುವಾರ ರಾತ್ರಿ ಸ್ವಾತಂತ್ರ್ಯ ಉದ್ಯಾನದಿಂದ  ಬಸ್ಸುಗಳ ಮೂಲಕ ಹೊರಟ ಜನರನ್ನು ಬೀಳ್ಕೊಟ್ಟರು. 

ಶೆಟ್ಟರ ಈ ಧರ್ಮಕಾರ್ಯವು ಉಳ್ಳವರಿಗೆ ಮಾದರಿಯಾಗಬೇಕು, ಕಾರ್ತಿಕ ಮಾಸದಲ್ಲಿ ಇಂತಹ ಪುಣ್ಯ ಕ್ಷೇತ್ರಗಳಿಗೆ ತೆರಳಿ ದರ್ಶನ ಮಾಡಬೇಕೆಂಬ ಆಶಯ ಮನದಲ್ಲಿ ಇದ್ದವರಾಗಿ, ಯಾತ್ರೆಗೆ ಹೋಗಲು ಇಚ್ಛೆಯುಳ್ಳಂತಹವರೆಲ್ಲರಿಗೂ ಖರ್ಚು ವೆಚ್ಚವನ್ನು ಭರಿಸಲು ಸ್ವಲ್ಪ ಕಷ್ಟಸಾಧ್ಯ ವಾಗುವಂತಹವರಿಗೆ, ಇಂತಹ ದಾನಿಗಳು ಮುಂದೆ ಬಂದು ವ್ಯವಸ್ಥೆ ಹಾಗೂ ತಿಂಡಿ ಊಟೋಪಚಾರದ ಅನುಕೂಲ ಮಾಡುತ್ತಿರುವುದು ಪರಮ ಪುಣ್ಯದ ಕೆಲಸ ಎಂದು ಜನ ತಮ್ಮ  ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 ಶೆಟ್ಟರ ಈ ಸಮಾಜ ಸೇವೆಯಲ್ಲಿ ಶರವಣ, ವೆಂಕಟೇಶ ರಾಜು, ಮುಖಂಡರಾದ ಪ್ರಕಾಶ ನೇತೃತ್ವದಲ್ಲಿ ಇನ್ನೂ ಮುಂತಾದ ಸಮಾಜ ಸೇವಕರು ನೆರವಾದರು.

Post a Comment

0 Comments

Ad Code

Responsive Advertisement