ಬೆಂಗಳೂರು : ನಗರದ ಶೇಷಾದ್ರಿಪುರಂ ಮುಖ್ಯರಸ್ತೆಯ ಕಿನೋ ಅಪಾರ್ಟಮೆಂಟ್ ಸಮೀಪದಲ್ಲಿ ಮುರುಗನ್ ಆರ್ಟ್ಸ್ ವತಿಯಿಂದ ಹದಿನೈದನೆ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಪ್ರದೇಶ ಜನತಾದಳ (ಜಾ) ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಹಾಗೂ ಕೋರ್ ಕಮಿಟಿ ಸದಸ್ಯರಾದ ವಿ.ನಾರಾಯಣಸ್ವಾಮಿ, ಸುಭಾಷ್ ನಗರ ವಾರ್ಡ್ ನ ಮಾಜಿ ಪಾಲಿಕೆ ಸದಸ್ಯ ಟಿ.ಮಲ್ಲೇಶ್ ಆಗಮಿ ಸಿದ್ದರು ಮುರುಗನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗ ಚಿರಸ್ಮರಣೀಯರಾದ ಪದ್ಮಭೂಷಣ ಡಾ. ರಾಜಕುಮಾರ್ ರವರ ಹೋಲಿಕೆಯ ವಿಜಯಕುಮಾರ್ ಹಾಗೂ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರನ್ನು ಹೋಲುವ ಮೊಹಮದ್ ಅಲಿರವರಿಂದ ಜನಪ್ರಿಯ ಕನ್ನಡ ಚಲನಚಿತ್ರ ಹಾಡುಗಳ ರಸಮಂಜರಿಯು ನೋಡುಗರನ್ನು ಕನ್ನಡ ನಾಡು ನುಡಿಯ ಹೆಮ್ಮೆಯ ಭವ್ಯ ಪರಂಪರೆಯ ಗತಕಾಲ ವೈಭವವನ್ನು ಕಣ್ಣ ಮುಂದೆ ತರಿಸಿತು. ಇದೇ ವೇದಿಕೆಯಲ್ಲಿ ಟಿ.ಮಲ್ಲೇಶ್ ರವರು ಅಣ್ಣಾವರ ಹಾಡನ್ನು ಹಾಡುವ ಮೂಲಕ ರಾಜ್ಯೋತ್ಸವ ಆಚರಣೆಯ ಮೆರಗನ್ನು ಹೆಚ್ಚಿಸಿದರು. ಆ ಇಬ್ಬರೂ ಕಲಾವಿದರ ಭಾವಾಭಿನಯ ಎಲ್ಲರಿಂದ ಪ್ರಶಂಸೆಗೆ ಪಾತ್ರವಾಯಿತು.


0 Comments