ವಾರ್ತಾ ಜಾಲ ಸುದ್ದಿ ಮಧುಗಿರಿ: ತಾಲೂಕಿನಲ್ಲಿ
ಮಧುಗಿರಿ ವಿಕಾಸ ಸಮಿತಿ ವತಿಯಿಂದ ಕನ್ನಡರಾಜ್ಯೋತ್ಸವ ಮತ್ತು ಪುನೀತ್ ಪುಣ್ಯಸ್ಮರಣೆ ಅಂಗವಾಗಿ ನ.13ರಂದು ಭಾನುವಾರ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10 ರಿಂದ 2 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಮಧುಗಿರಿ ವಿಕಾಸ ಸಮಿತಿ ಅಧ್ಯಕ್ಷ ಭೀಮನಕುಂಟೆ ಹನುಮಂತೇಗೌಡ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ನಡ ರಾಜ್ಯೋತ್ಸವ ಮತ್ತು ಕನ್ನಡರತ್ನ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆಯ ಅಂಗವಾಗಿ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾದ್ದು ಆರೋಗ್ಯ ತಪಾಸಣೆಯನ್ನು ಸಿದ್ದಗಂಗಾ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನ ಸಂಸ್ಥೆಯ ಮೂಲಕ ನಡೆಸಲಾಗುತ್ತದೆ.
ಈ ತಪಾಸಣೆಯಲ್ಲಿ ಮಧುಮೇಹ ತಜ್ಞರು, ಮೂಳೆ ಮತ್ತು ಕೀಲು ತಜ್ಞರು
ಸ್ತ್ರೀರೋಗ ತಜ್ಞರು, ಇಎನ್‌ಟಿ ತಜ್ಞರು ಮತ್ತು ಜನರಲ್ ಸರ್ಜನ್ ಆಗಮಿಸಲಿದ್ದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜೊತೆಗೆ ಎಲ್ಲಾ ಕನ್ನಡಪರ ಸಂಘಟನೆಗಳು ಕೂಡ ಇದಕ್ಕೆ ಸಹಕರಿಸಬೇಕೆಂದು ತಿಳಿಸಿದರು
ಈ ವೇಳೆಯಲ್ಲಿ ಟವರ್ ರಾಜಣ್ಣ, ಕನ್ನಡಪರ ಸಂಘಟನೆಗಳ ತಾಲೂಕ ಅಧ್ಯಕ್ಷ ಚಿಕ್ಕಮಲ್ಲೂರು ಶಿವಕುಮಾರ್, ಕರುನಾಡ ವಿಜಯ ಸೇನೆಯ ತಿಮ್ಮರಾಜು ಕನ್ನಡ ಜಾಗೃತಿ ವೇದಿಕೆಯ ರಾಘವೇಂದ್ರ, ರೋಹಿತ್ ಸೈಯದ್, ಜಲಾಲ್ ಪಾಷ, ಮತ್ತಿತರರಿದ್ದರು
ವರದಿ:ನಾಗೇಶ್ ಜೀವಾ ಮಧುಗಿರಿ.


0 Comments