ನೃತ್ಯ ದಿಶಾ ಟ್ರಸ್ಟ್, ಬೆಂಗಳೂರು ಹಾಗೂ ಶ್ರೀಮತಿ/ಶ್ರೀ ಧನಲಕ್ಷ್ಮಿ ಶ್ರೀಧರ್ ಇವರುಗಳ ಆಯೋಜನೆಯಲ್ಲಿ, ನವೆಂಬರ್ 13, ಭಾನುವಾರ ಬೆಳಿಗ್ಗೆ 10 ಗಂಟೆಗೆ ನಗರದ ಜೆ.ಸಿ. ರಸ್ತೆಯಲ್ಲಿರುವ ಎಡಿಎ ರಂಗಮಂದಿರದಲ್ಲಿ ಕು|| ಸ್ಫೂರ್ತಿ ಶ್ರೀಧರ್ (ವಿದುಷಿ ಶ್ರೀಮತಿ ದರ್ಶಿನಿ ಮಂಜುನಾಥ್ ಇವರ ಶಿಷ್ಯೆ) ಇವರ "ಭರತನಾಟ್ಯ ರಂಗಪ್ರವೇಶ" ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು,
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ, 'ನೃತ್ಯ ಚೂಡಾಮಣಿ' ಶ್ರೀಮತಿ ವೈಜಯಂತಿ ಕಾಶಿ, ಶ್ರೀಮತಿ ಪದ್ಮಾ ಹೇಮಂತ್, ಡಾ|| ಅನಿಲ್ ಕುಮಾರ್ ಹಾಗೂ ಶ್ರೀಮತಿ ಪದ್ಮಾ (ಪ್ರಿನ್ಸಿಪಾಲ್, ಬಿ.ಎನ್.ಎಸ್. ಪಿಯು ಮಹಿಳಾ ಕಾಲೇಜು) ಆಗಮಿಸುತ್ತಾರೆಂದು ಟ್ರಸ್ಟ್ ನ ಮುಖ್ಯಸ್ಥರಾದ ಶ್ರೀಮತಿ ದರ್ಶಿನಿ ಮಂಜುನಾಥ್ ಅವರು ತಿಳಿಸಿದ್ದಾರೆ.


0 Comments