Ticker

6/recent/ticker-posts

Ad Code

Responsive Advertisement

ಕೊಳ್ಳೇಗಾಲ ಪಶು ವೈದ್ಯಕೀಯ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕೆ ಅಭಿಯಾನ

 ಕೊಳ್ಳೇಗಾಲ ಸುದ್ದಿ

ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಅಭಿಯಾನದಡಿ ಕಾಲುಬಾಯಿ ಜ್ವರ ನಿಯಂತ್ರಣ ದಿನಾಚರಣೆಯ ಅಂಗವಾಗಿ ಕೊಳ್ಳೇಗಾಲ ಪಶು ವೈದ್ಯಕೀಯ ಕೇಂದ್ರದ ಆವರಣದಲ್ಲಿ ರಾಷ್ಟ್ರೀಯ ಕಾಲುಬಾಯಿ ಜ್ವರ ನಿಯಂತ್ರಣ  ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು, 

ಕಾರ್ಯಕ್ರಮವನ್ನು ಉದ್ಘಾಟಿಸಿ ಕೊಳ್ಳೇಗಾಲ ಶಾಸಕ ಎನ್. ಮಹೇಶ್ ರವರು  ಮಾತನಾಡಿ  ಇದೊಂದು ಕೇಂದ್ರ ಸರ್ಕಾರದ ಮಹತ್ವ ಪೂರ್ಣ  ಯೋಜನೆಯಾಗಿದ್ದು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಅಭಿಯಾನದಡಿಯಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ,

ಈ ಕಾರ್ಯಕ್ರಮ 2019 ರಿಂದ ಇಲ್ಲವವರೆಗೆ 3 ಸುತ್ತು ಕಾರ್ಯಕ್ರಮ ನಡೆದಿದೆ,

ಇದರ ಉದ್ದೇಶ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಬಂದಿದೆ ಅಂತ ಮಾಡೋದಲ್ಲ,  ಏನು ಧನಗಳು ಎಮ್ಮೆಗಳಿಗೆ ಬರುವಂತ ಕಾಲು ಬಾಯಿ ಜ್ವರವನ್ನ ನಿಯಂತ್ರಣ ಮಾಡುವ ಹಾಗೂ ರೋಗ ಬಾರದಂತೆ ತಡೆಗಟ್ಟುವಂತೆ ಅರಿವನ್ನ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ನಮ್ಮ ಜಿಲ್ಲೆಯಲ್ಲಿ ಒಟ್ಟು 2.52 ಲಕ್ಷ ಜಾನುವಾರುಗಳು ಇವೆ,

ಮೊದಲಿಗೆ ಕೊಳ್ಳೇಗಾಲದಲ್ಲಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಗಿದೆ, ಈ ಅಭಿಯಾನ ಡಿಸೆಂಬರ್, 7 ರ ತನಕ ನಡೆಯಲಿದೆ ಇದರ ಉದ್ದೇಶ ಪ್ರತಿ ಗ್ರಾಮಗಳ ಮನೆ ಮನೆಗೆ ತೆರಳಿ ಕಾಲುಬಾಯಿ ನಿಯಂತ್ರಣದ  ಬಗ್ಗೆ ಅರಿವನ್ನ ಮೂಡಿಸುವಂತ ಕಾರ್ಯಕ್ರಮ ಇದಾಗಿದೆ, ಎಂದರು,

ಈ ಸಂದರ್ಭದಲ್ಲಿ   ಪಶು ವೈದ್ಯಾಧಿಕಾರಿ ಮುತ್ತುರಾಜು,

ಹಾಗೂ ಸಿಬ್ಬಂದಿ ವರ್ಗದವರು ಇದ್ದರು

Post a Comment

0 Comments

Ad Code

Responsive Advertisement