Ticker

6/recent/ticker-posts

Ad Code

Responsive Advertisement

ಬ್ಯಾಂಕ್ ಆಫ್ ಬರೋಡ ವತಿಯಿಂದ ನಡೆದ ಬೃಹತ್ ರೈತ ಮೇಳ,

 ಕೊಳ್ಳೇಗಾಲ ಸುದ್ದಿ : ರೈತ ದಿನಾಚರಣೆಯ ಅಂಗವಾಗಿ  ಬ್ಯಾಂಕ್ ಆಫ್ ಬರೋಡ ವತಿಯಿಂದ ಕಿಸಾನ್ ರೈತ ಪಾಕ್ಷಿಕ ಮತ್ತು ಬೃಹತ್ ರೈತ ಮೇಳ ಕಾರ್ಯಕ್ರಮವನ್ನು ಕೊಳ್ಳೇಗಾಲ ತಾಲ್ಲೂಕಿನ ಕೆಂಪನಪಾಳ್ಯ ಬಳಿ ಆಯೋಜಿಸಲಾಗಿತ್ತು,


ಈ ಕಾರ್ಯಕ್ರಮವನ್ನು ಗೌರವ ಅತಿಥಿಗಳಾದ ಮುಂಬೈನ ಬಿ. ಸಿ. ಸಿ  ಜನರಲ್ ಮ್ಯಾನೇಜರ್ ಆದ ಎಂ. ಜಗನ್ ಮೋಹನ್  ರವರು ದೀಪ ಬೆಳಗುವ ಮೂಲಕ ಚಾಲನೆ ನೀಡಿದರು,

ಈ ಕಾರ್ಯಕ್ರಮದಲ್ಲಿ ರೈತರಿಗೆ ಟ್ರಾಕ್ಟರ್ ಕೊಂಡುಕೊಳ್ಳಲು, ಹಾಗೂ ಬೆಳೆ ಸಾಲ ಹಾಗೂ ಕೃಷಿಗೆ ಸಂಬಂಧಿಸಿದಂತೆ 5 ಲಕ್ಷದಿಂದ 25  ಲಕ್ಷದವರೆಗೂ  ಸಾಲವನ್ನು ವಿತರಿಸಲಾಯಿತು,

ಹಾಗೂ ಬ್ಯಾಂಕ್ ಆಫ್ ಬರೋಡದಲ್ಲಿ ಸಕ್ರಿಯವಾಗಿ ವ್ಯವಹಾರ ನಡೆಸುತ್ತಿರುವ ಗ್ರಾಹಕರಿಗೆ ಸನ್ಮಾನಿಸಲಾಯಿತು,

ಇದೆ ವೇಳೆ ಕೊಳ್ಳೇಗಾಲದ ಕೃಷಿ ಅಧಿಕಾರಿ ಸುಂದ್ರಮ್ಮ ಮಾತನಾಡಿ ಬ್ಯಾಂಕ್ ಆಫ್ ಬರೋಡದಿಂದ ಕೃಷಿ ಅವಲಂಬಿತ ರೈತರಿಗೆ  ಸಾಕಷ್ಟು ಅನುಕೂಲಗಳು ಆಗುತ್ತಿದೆ, ಕೃಷಿ ಅವಲಂಬಿತ ರೈತರಿಗೆ ಕೃಷಿಗೆ ಅಗತ್ಯವಾದ ಪರಿಕರಗಳನ್ನು ಕೊಂದುಕೊಳ್ಳಲು ಹಾಗೂ ಬೆಳೆ ಸಾಲ ಹಾಗೂ ಇನ್ನಿತರ ಸಾಲ ಸೌಲಭ್ಯಗಳನ್ನು ಒದಗಿಸಿ ರೈತರಿಗೆ ಸಹಕಾರಿಯಾಗಿದೆ

ಅದೇ ರೀತಿ ನಮ್ಮ ಕೃಷಿ ಇಲಾಖೆ ವತಿಯಿಂದನು ಸಹ ರೈತರಿಗೆ ಅಗತ್ಯವಾದ ಪರಿಕರಗಳನ್ನ ಕೊಡಿಸಿವುದರ ಜೊತೆಗೆ ಬಿತ್ತನೆ ಬೀಜ ಹಾಗೂ ರಾಸಾಯನಿಕ ಗೊಬ್ಬರಗಳ ಕೊಡಿಸಿ ರೈತರು ಯಾವ ಯಾವ ಬೆಳೆಗಳನ್ನ ಹೇಗೆ ಬೆಳೆಯ ಬೇಕು ವ್ಯವಸಾಯದಲ್ಲಿ ಏನೆಲ್ಲಾ ನಿಯಮಗಳನ್ನ ಪಾಲಿಸಬೇಕು ಬೆಳೆಯಲ್ಲಿ ಇಳುವರಿ ಬರಬೇಕಾದರೆ ಯಾವ ಕ್ರಮಗಳನ್ನ ಅನುಸರಿಸಿ ವ್ಯವಸಾಯ ಮಾಡಬೇಕು ಎಂಬುದರ ಬಗ್ಗೆ ತರಭೇತಿಗಳನ್ನ ಕೊಡಿಸುವಂತ ಕೆಲಸವನ್ನು ಮಾಡಲಾಗುತ್ತಿದೆ ಎಂದರು, 

ಇದೆ ಸಂದರ್ಭದಲ್ಲಿ  ಕೊಳ್ಳೇಗಾಲ ಪಟ್ಟಣದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ ಮಾಡಿಸಿರುವ  ಗ್ರೇಡ್ ಒನ್ ಗುತ್ತಿಗೆದಾರ ವಾಲೆ ಮಹಾದೇವ ಅವರನ್ನ ಬ್ಯಾಂಕ್ ಆಫ್ ಬರೋಡ ವತಿಯಿಂದ ಸನ್ಮಾನಿಸಲಾಯಿತು, 

ಈ ಸಂದರ್ಭದಲ್ಲಿ ಬ್ಯಾಂಕ್ ಆಫ್ ಬರೋಡ ಜನರಲ್ ಮ್ಯಾನೇಜರ್ ಸುಧಾಕರ್ ಡಿ. ನಾಯಕ್ ಎ, ಕೊಳ್ಳೇಗಾಲ ತಾಲ್ಲೂಕು ಪಂಚಾಯಿತಿ ಇ ಒ ಮಹೇಶ್, ಬೆಂಗಳೂರು ವಲಯ ವ್ಯವಸ್ಥಾಪಕರ ಶಿವರಾಮು, ಚಾಮರಾಜನಗರ ಕೃಷಿ ಅಧಿಕಾರಿ ಮಧುಸೂದನ್.ಕೆ ಹಾಗೂ ಇನ್ನಿತರರು ಇದ್ದರು

Post a Comment

0 Comments

Ad Code

Responsive Advertisement