ಕೊಳ್ಳೇಗಾಲ ತಾಲ್ಲೂಕಿನ ಮಧುವನಹಳ್ಳಿ ಗ್ರಾಮದ ಉದ್ಭವ ಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಡೆಯ ಕಾರ್ತೀಕ ಸೋಮವಾರದ ಅಂಗವಾಗಿ ಮಹದೇಶ್ವರ ಸತ್ತಿಗೆ ಹಾಗೂ ಬಸವನ ಉತ್ಸವ ಮೆರವಣಿಗೆಯನ್ನು ನಡೆಸಲಾಯಿತು,
ಗ್ರಾಮದ ಅಂಜನಯನಪುರದಿಂದ ದೇವಸ್ಥಾನದಿಂದ ಸತ್ತಿಗೆಗೆ ಅಲಂಕಾರ ಮಾಡಿಕೊಂಡು ದೇವರ ಕಳಸ ಹೊತ್ತ ಬಾಲೆಯರ ಹಾಗೂ ಸತ್ತಿಗೆ ಮತ್ತು ಬಸವನನ್ನು ಮೆರವಣಿಗೆಯ ಮೂಲಕ ಮಧುವನಹಳ್ಳಿ ಬಸ್ ನಿಲ್ದಾಣದಲ್ಲಿರುವ ಮಹದೇಶ್ವರ ದೇವಸ್ಥಾನಕ್ಕೆ ತರಲಾಯಿತು ಮಹಾಮಂಗಳಾರತಿ ಮಾಡಿ ಸತ್ತಿಗೆಯನ್ನು ದೇವಾಲಯದೊಳಗೆ ಇರಿಸಲಾಯಿತು,
ಈ ಕಾರ್ಯಕ್ರಮಕ್ಕೆ ಹನೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಬಿ. ವೆಂಕಟೇಶ್ ರವರು ಭೇಟಿ ನೀಡಿದ್ದು, ಮೆರವಣಿಗೆಯಲ್ಲಿ ಪಾಲ್ಗೊಂಡು ದೇವರ ಆಶೀರ್ವಾದ ಪಡೆದರು,
ನಂತರ ಬಿ. ವೆಂಕಟೇಶ್ ರವರು ಗ್ರಾಮಸ್ಥರೊಡನೆ ಮಾತನಾಡಿ, ದೇವಾಲಯದ ಅಭಿವೃದ್ಧಿಗೆ ಹಾಗೂ ಗ್ರಾಮದಲ್ಲಿ ನಡೆಯುವ ದೇವತಾ ಕಾರ್ಯಗಳಿಗೆ ನಮ್ಮ ಜನಾಶ್ರಯ ಟ್ರಸ್ಟ್ ಮೂಲಕ ಅಗತ್ಯ ಸಹಕಾರ ನೀಡುವುದಾಗಿ ಗ್ರಾಮದಲ್ಲಿ ಯಾರಿಗೆ ಏನೇ ಕಷ್ಟ ಕಾರ್ಪುಣ್ಯಗಳು ಬಂದಂತ ಸಂದರ್ಭದಲ್ಲಿ ನಾನು ನಿಮ್ಮ ಜೊತೆ ಕೊನೆವರೆಗೂ ನಿಂತು ಸಮಸ್ಯೆಗಳನ್ನು ಬಗೆಹರಿಸುತ್ತೇನೆ,
ಅಲ್ಲದೆ ಗ್ರಾಮದಲ್ಲಿ ನನ್ನಿಂದ ಏನಾದರು ಸೇವಾ ಕಾರ್ಯಗಳು ನಡೆಯಬೇಕಾದರೆ ಹಾಗೂ ನನ್ನಿಂದ ಏನಾದರು ಕೆಲಸಗಳು ಆಗಬೇಕಾದರೆ ಯಾವುದೇ ಸಂದರ್ಭದಲ್ಲಿಯು ನೀವುಗಳು ನನ್ನನ್ನು ಭೇಟಿ ಆಗಬಹುದು ನಿಮ್ಮ ಸೇವೆಗೆ ನಾನು ಸದಾ ಸಿದ್ದನಿದ್ದೇನೆ ಎಂದು ಹೇಳಿದರು ,

0 Comments