Ticker

6/recent/ticker-posts

Ad Code

Responsive Advertisement

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆ

 ಕೊಳ್ಳೇಗಾಲ ನಗರದ ಬಸ್ತೀಪುರ ರಸ್ತೆಯಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ಚುನಾವಣೆಯನ್ನು ನಡೆಸಲಾಯಿತು,

ಹಿಂದಿನ ಅಧ್ಯಕ್ಷರ ರಾಜೀನಾಮೆ ಹಿನ್ನೆಲೆ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ  ಪಿ. ಸೋಮಶೇಖರ್ ರವರು ಅವಿರೋದವಾಗಿ ಅಧ್ಯಕ್ಷರಾಗಿ ಆಯ್ಕೆಯಾದರೆ , ಶೀಲಾ ರವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ , ಚುನಾವಣೆ ಅಧಿಕಾರಿ ನಾಗೇಶ್ ರವರು ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿ  ಅಧ್ಯಕ್ಷ ಉಪಾಧ್ಯಕ್ಷರನ್ನು ಹೆಸರನ್ನು ಘೋಷಿಸಿದರು,

ನಂತರ ನೂತನ ಅಧ್ಯಕ್ಷರಾದ ಪಿ ಸೋಮಶೇಖರ್ ರವರು ಮಾತನಾಡಿ ನನ್ನನು ಆಯ್ಕೆ ಮಾಡಿದ ಸದಸ್ಯರಿಗೆ ಧನ್ಯವಾದಗಳನ್ನ ಅರ್ಪಿಸುತ್ತೇನೆ ಹಾಗೂ ನನ್ನ ಅವಧಿಯಲ್ಲಿ ರೈತರಿಗೆ ಅಗತ್ಯ ಇರುವ ಕೃಷಿ ಪರಿಕರಗಳನ್ನ ಟ್ಯಾಕ್ಟರ್ ಹಾಗೂ ಟಿಲ್ಲಾರ್ ಮಿಷನ್, ಇನ್ನಿತರ ಕೃಷಿ ಸಂಬಂಧ ಪಟ್ಟ ಪರಿಕರಗಳನ್ನು ಕೊಡಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ, ಹೀಗಾಗಲೇ ಕಸಬಾ ಸಂಘದ ರೈತರಿಗೆ 11 ಕೋಟಿ ಸಾಲ ಸೌಲಭ್ಯವನ್ನು ನೀಡಲಾಗಿದೆ, ನಮ್ಮ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಹರೀಶ್ ಗೌಡರ ಜೊತೆ ಮಾತುಕತೆ ನಡೆಸಿ ಇನ್ನು ಹೆಚ್ಚಿನ ಸಾಲ ಸೌಲಭ್ಯಗಳನ್ನ ಪಡೆದುಕೊಂಡು ನಮ್ಮ ಸದಸ್ಯರಿಗೆ ನೀಡಲಾಗುತ್ತದೆ, ಹೀಗ ಯಶಶ್ವಿನಿ ಯೋಜನೆ ಜಾರಿಯಾಗಿದೆ  ನಮ್ಮ ರೈತರಿಗೆ ಯಶಶ್ವನಿ ಕಾರ್ಡ್ ಗಳನ್ನ ಮಾಡಿಸಿ ಕೊಡಲಾಗುತ್ತಿದೆ ಈ ಕಾರ್ಡ್ ಮಾಡಿಸಿಕೊಂಡರೆ ಸಾಲ ಸೌಲಭ್ಯಗಳನ್ನು ಪಡೆದುಕೊಳ್ಳಲು, ಹಾಗೂ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಹಕಾರವಾಗಲಿದೆ ಆದ್ದರಿಂದ ಸದಸ್ಯರುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ನಮ್ಮ ಎಸ್. ಸಿ. ಎಸ್ ಟಿ. ಸಂಘಗಳಿಗೆ ಎರಡು ಲಕ್ಷ ಬರುತ್ತಿತ್ತು ಹೀಗ ಐದು ಲಕ್ಷ ಆಗಿದೆ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಮುಂದಿನ ದಿನಗಳಲ್ಲಿ ಸರ್ಕಾರದಿಂದ ಬರುವ ಸೌಲಭ್ಯಗಳನ್ನ ರೈತರಿಗೆ ಸಕಾಲಕ್ಕೆ ಸಿಗುವಂತೆ ವ್ಯವಸ್ಥೆ ಮಾಡಿ ನಮ್ಮ ಸಹಕಾರ ಸಂಘದ ಅಭಿವೃದ್ಧಿಗಾಗಿ ಶ್ರಮ ವಹಿಸಿ ದುಡಿಯುತ್ತೇನೆ ಎಂದರು,


ಈ ಸಂದರ್ಭದಲ್ಲಿ ಚುನಾವಣೆ ಅಧಿಕಾರಿ ನಾಗೇಶ್, ಕಾರ್ಯನಿರ್ವಹಣಾಧಿಕಾರಿ ನಾಗರಾಜು, ಕ್ಯಾಸಿಯಾರ್ ಮಣಿ, ಅಟೆಂಡರ್ ಶಿವಕುಮಾರ್, ಮಧು, ಪ್ರದೀಪ್, ಪ್ರಸನ್ನಮೂರ್ತಿ, ಹಾಗೂ ಇನ್ನಿತರರು ಇದ್ದರು.

Post a Comment

0 Comments

Ad Code

Responsive Advertisement