ಯಲಹಂಕ : ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಅಧ್ಯಕ್ಷರು, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕರು ಹಾಗೂ ಬಿಜೆಪಿ ರಾಷ್ಟ್ರೀಯ ಪರಿಷತ್ತಿನ ಸದಸ್ಯರಾದ ಎ. ರವಿ ರವರ ಹುಟ್ಟು ಹಬ್ಬದ ಆಚರಣೆಯನ್ನು ಯಲಹಂಕ ದೇವನಹಳ್ಳಿ ಹೆದ್ದಾರಿಯಲ್ಲಿರುವ ಹುಣಸಮಾರನಹಳ್ಳಿಯಲ್ಲಿ ಅಭಿಮಾನಿಗಳ ವತಿಯಿಂದ ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಜನ್ಮದಿನ ಆಚರಣೆಗೆ ಸಹಸ್ರಾರು ಸಂಖ್ಯೆಯಲ್ಲಿ ದೂರದೂರದಿಂದಲೂ ಅಭಿಮಾನಿಗಳ ಮಹಾಪೂರವೇ ಹರಿದುಬಂದಿತ್ತು.
ಧಾರ್ಮಿಕ ಕ್ಷೇತ್ರದ ಅನೇಕ ಪೂಜ್ಯ ಮಠಾಧೀಶರು, ಗುರುಗಳು ಸಹ ಆಗಮಿಸಿ ಎ.ರವಿ ರವರಿಗೆ ಆಶೀರ್ವಾದಗಳನ್ನು ನೀಡಿದರು. ಈ ಸಂದರ್ಭದಲ್ಲಿ ಶುಭ ಕೋರಲು ರಾಜ್ಯದ ಮಾಜಿ ಮುಖ್ಯಮಂತ್ರಿಗಳು, ಸಂಸದರು, ರಾಜ್ಯ ಸರ್ಕಾರದಲ್ಲಿನ ಪ್ರಮುಖ ಖಾತೆಗಳನ್ನು ಹೊಂದಿರುವ ಪ್ರಭಾವಿ ಸಚಿವರುಗಳು, ಮಾಜಿ ಪಾಲಿಕೆ ಸದಸ್ಯರುಗಳು, ಬಿಜೆಪಿ ಪಕ್ಷದಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವ ನಾಯಕರುಗಳು, ಆರ್ ಎಸ್ ಎಸ್ ಸಂಘಟನೆಯ ಸ್ವಯಂ ಸೇವಕರುಗಳೂ, ರಂಗಭೂಮಿ ಕಲಾವಿದರು ಈ ಅದ್ಧೂರಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರುಗಳಲ್ಲಿ ಪ್ರಮುಖರಾಗಿ ಸಂಸದರು ಡಿ.ವಿ.ಸದಾನಂದಗೌಡ, ಸಚಿವರುಗಳಾದ ಆರ್.ಅಶೋಕ್, ಮುನಿರತ್ನ, ಡಾ. ಸುಧಾಕರ್, ಮರಿಸ್ವಾಮಿ, ಮಾಜಿ ಪಾಲಿಕೆ ಸದಸ್ಯರುಗಳಾದ ಪಿಳ್ಳಪ್ಪ, ಅಶ್ವತ್ಥನಾರಾಯಣ್, ಸಿಲಿಕಾನ್ ಸಿಟಿ ಕಾಲೇಜ್ ಅಧ್ಯಕ್ಷ ಹೆಚ್.ಎಂ.ಚಂದ್ರಶೇಖರ್, ಹರೀಶ್ ಗೌಡ, ಪ್ರಮೋದ್ ಎಲ್. ಶ್ರೀನಿವಾಸ್, ಕಿರಣ್ ಕುಮಾರ್ (ಹೊಸಕೋಟೆ),
ಸುವರ್ಣ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಅಸಂಘಟಿತ ಕಾರ್ಮಿಕ ಸೇವಾಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಿ. ಪಿಳ್ಳಮರಿಯಪ್ಪ, ಸಂಘಟನಾ ಕಾರ್ಯದರ್ಶಿ ಜಿ.ಟಿ.ಮುನಿರಾಜು, ಬ್ಯಾಟರಾಯನಪುರ ಕ್ಷೇತ್ರದ ಕುವೆಂಪುನಗರ ಬಿಜೆಪಿ ಮೈನಾರಿಟಿ ಮೋರ್ಚಾ ಅಧ್ಯಕ್ಷ ಶೇಖ್ ನಜೀರ್, ಉಪಾಧ್ಯಕ್ಷ ಜಿ.ಎಸ್.ಸನಾವುಲ್ಲಾ, ಮೊಹಮ್ಮದ್ ಸಲೀಮ್ ಸಾಬ್, ಪಾಟೀಲ್, ಸುಶೀಲಾ ಮುಂತಾದವರು ಎ.ರವಿರವರಿಗೆ ಹೂವಿನ ಹಾರಗಳನ್ನು ಹಾಕಿ ಶುಭ ಕೋರಿದರು.
ಈ ವೇಳೆ ಎ.ರವಿ ಹಾಗೂ ಕುಟುಂಬಸ್ಥರಿಂದ ಕಾರ್ಯಕ್ರಮಕ್ಕೆ ಬಂದಿದ್ದ ಮುತ್ತೈದೆಯರಿಗೆಲ್ಲರಿಗೂ ಬಾಗೀನವನ್ನು ನೀಡಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಸಾರ್ವಜನಿಕರೆಲ್ಲರಿಗೂ ಊಟದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿ, ಪ್ರತ್ಯೇಕವಾಗಿ ಸಸ್ಯಹಾರ ಹಾಗೂ ಬಾಡೂಟವನ್ನು ಏರ್ಪಡಿಸಲಾಗಿತ್ತು.
ತಮ್ಮ ನೆಚ್ಚಿನ ನಾಯಕ ಎ.ರವಿರವರಿಗೆ ಶುಭ ಕೋರಲು ಜನಸಾಗರವೇ ಹರಿದುಬಂದಿತ್ತು ಎಂದರೂ ಅತಶಯೋಕ್ತಿಯಾಗಲಾರದು. ನಮ್ಮ ಪತ್ರಿಕಾ ಬಳಗದಿಂದಲೂ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.







0 Comments