ಬೆಂಗಳೂರು : ಬೆಂಗಳೂರು ಉತ್ತರದ ಯಲಹಂಕ ದೇವನಹಳ್ಳಿ ಹೆದ್ದಾರಿಯಲ್ಲಿರುವ ವಿದ್ಯಾನಗರ ಕ್ರಾಸ್ ಡಾ. ರಾಜಕುಮಾರ್ ವೃತ್ತದಲ್ಲಿ, ಶ್ರೀ ಕರಿಮಾರಿಯಮ್ಮ ಆಟೋ ನಿಲ್ದಾಣದ ಗೆಳೆಯರ ಬಳಗದವರು ಒಂಬತ್ತನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರು.
ಈ ವೇಳೆ ಸುಮಾರು ಐವತ್ತಕ್ಕೂ ಹೆಚ್ಚು ಆಟೋಗಳಲ್ಲಿ ಕರ್ನಾಟಕ ರತ್ನ ಡಾ. ಪುನೀತ್ ರಾಜಕುಮಾರ್ ಅವರ ಭಾವಚಿತ್ರದೊಂದಿಗೆ ಅಧ್ಯಕ್ಷ ನರಸಿಂಹರವರ ನೇತೃತ್ವದಲ್ಲಿ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹೊರಟತಿತು.
ಕನ್ನಡ ನಾಡು ನುಡಿಯ ವೈಭವವನ್ನು ಸಾರುವ ಹಾಡುಗಳನ್ನು ಮೆರವಣಿಗೆಯ ಉದ್ದಕ್ಕೂ ಜನರಿಗೆ ಕೇಳಿಸಿಕೊಂಡು ಬರುತ್ತಾ ಎಲ್ಲರಲ್ಲೂ, ಕನ್ನಡದ ಜಾಗೃತಿಯನ್ನು ಮೂಡಿಸುವ ನಾಡಾಭಿಮಾನದ ಈ ಆಚರಣೆಯಲ್ಲಿ ಲೋಕಿ, ಮಂಜಪ್ಪ, ರವಿ, ದೇವರಾಜ, ಕಿರಣ್, ಸೂರಿ, ದಾಸ್ ಹಾಗೂ ಇನ್ನೂ ಮುಂತಾದ ಆಟೋ ಚಾಲಕ ಮಿತ್ರರು ಸಕ್ರಿಯವಾಗಿ ಪಾಲ್ಗೊಂಡಿದ್ದರು.

0 Comments