Ticker

6/recent/ticker-posts

Ad Code

Responsive Advertisement

ಮಲ್ಲೇಶ್ವರ: ವಿಶ್ವ ಕನ್ನಡಿಗರ ಸಮ್ಮಿಲನ'ಕ್ಕೆ ಅನೂಪ್ ಅಯ್ಯಂಗಾರ್ ಚಾಲನೆ

ಬೆಂಗಳೂರು : ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ 8 ನೇ ಮುಖ್ಯ ರಸ್ತೆಯ 16 ನೇ ಆಡ್ಡರಸ್ತೆಯಲ್ಲಿರುವ ಜಯ ಕರ್ನಾಟಕ ಮಲ್ಲೇಶ್ವರಂ ಶಾಖೆಯ ಕಛೇರಿಯಿಂದ ಇಂದು ಅರಮನೆ ಮೈದಾನದ ಶೀಷ ಮಹಲ್‌ ನಲ್ಲಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ನಡೆಯುತ್ತಿರುವ ವಿಶ್ವ ಕನ್ನಡಿಗರ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟ ಕಾರ್ಯಕರ್ತರ ಮೆರವಣಿಗೆ ಕಾರ್ಯಕ್ರಮವನ್ನು ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಅನೂಪ್ ಅಯ್ಯಂಗಾರ್ ರವರು ಕನ್ನಡ ಧ್ವಜಾರೋಹಣವನ್ನು ನೆರವೇರಿಸಿ ಬೃಹತ್ ಮೆರವಣಿಗೆಗೆ ಚಾಲನೆ ನೀಡಿದರು.



ಈ ಮೆರವಣಿಗೆಯ ಮುಂಚೂಣಿಯಲ್ಲಿ  'ಗಜರಾಜ'ನ ಪ್ರತಿಮೆ ಹಾಗೂ ಜೊತೆಯಲ್ಲಿ ಕರ್ನಾಟಕ ರತ್ನ  ಡಾ. ಪುನೀತ್ ರಾಜಕುಮಾರ್ ಅವರ ಅಲಂಕೃತವಾದ ಬೃಹತ್‌‌ ಚಿತ್ರ ಪಟ ಹೊತ್ತ ವಾಹನಗಳ ಜೊತೆ

ಹೆಚ್ಚಿನ ಸಂಖ್ಯೆಯಲ್ಲಿದ್ದ ಸಂಘಟನೆಯ ಕಾರ್ಯಕರ್ತರುಗಳು ಆಟೋರಿಕ್ಷಾದಲ್ಲಿ ಹಾಗೂ ದ್ವಿಚಕ್ರ ವಾಹನಗಳಲ್ಲಿ ಮಲ್ಲೇಶ್ವರಂನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ಸಾಗುವ  ಮೂಲಕ ಅರಮನೆ ಮೈದಾನದತ್ತ ತೆರಳಿದರು. ಈ ಸಂದರ್ಭದಲ್ಲಿ ಸಂಘಟನೆಯ ಗೌರವಾಧ್ಯಕ್ಷರಾದ ಆರ್.ಕೆ.ರಾಜು, ಕಾರ್ತಿಕ್ ಗೌಡ, ಸೈಯದ್ ಅತೀಫ್, ರವಿಕುಮಾರ್ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement