Ticker

6/recent/ticker-posts

Ad Code

Responsive Advertisement

ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಹಾಗು ಸಾಧನಾ ಸಮಾವೇಶ

ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಸಿದ್ದಯ್ಯನಪುರ ವಲಯ  ಪರಮ ಪೂಜ್ಯ ವೀರೇಂದ್ರ ಹೆಗಡೆಯವರು ಮತ್ತು ಹೇಮಾವತಿ ಅಮ್ಮನವರ ಆಶೀರ್ವಾದಗಳೊಂದಿಗೆ  ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಹಾಗು ಸಾಧನಾ ಸಮಾವೇಶ ಕಾರ್ಯಕ್ರಮವನ್ನ ಪಟ್ಟಣದ ನ್ಯಾಷಿನಲ್ ಶಾಲಾ ಆವರಣದ ಮಾತೆ ಸಾವಿತ್ರಿಬಾಯಿ ಪುಲೆ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು,

ಈ ಕಾರ್ಯಕ್ರಮವನ್ನ ಕೊಳ್ಳೇಗಾಲ ಮಾಜಿ ಶಾಸಕರ ಜಿ.ಎನ್. ನಂಜುಂಡಸ್ವಾಮಿ ಹಾಗೂ ಎಚ್ ಕೆ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ ಹಾಗೂ ಮಹಾನಂದ್ರವರು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಚಾಲನೆಯನ್ನು ನೀಡಿದರು.

ನಂತರ ಮಾಜಿ ಶಾಸಕ ಜಿ. ಎನ್. ನಂಜುಂಡಸ್ವಾಮಿ ಯಾವರು ಮಾತನಾಡಿ ಧರ್ಮಸ್ಥಳದ ವೀರೇಂದ್ರ ಹೆಗಡೆಯವರು ಸಮಾಜದ ಏಳಿಗೆಗಾಗಿ ಅನೇಕ ಒಕ್ಕೂಟಗಳನ್ನ ಮಾಡಿಕೊಂಡು ಮಹಿಳೆಯರ ಸಬಲೀಕರಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ,

ಚಾಮರಾಜನಗರ ಜಿಲ್ಲೆಯಲ್ಲಿ ಒಡಿ ಪಿ ಒಂದು ಕರ್ತವ್ಯವನ್ನು ನಿರ್ವಹಿಸುತ್ತಿತ್ತು, ನಾನು ಶಾಸಕನಾಗಿ ಅಧಿಕಾರದಲ್ಲಿ ಇದ್ದಾಗ ಚಾಮರಾಜನಗರ ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಭಿವೃದ್ದಿ ಸಂಘವನ್ನು ಪ್ರಾರಂಭ ಮಾಡುವ ಸಲುವಾಗಿ ಶ್ರೀ ವೀರೇಂದ್ರ  ಹೆಗಡೆಯವರನ್ನ ಸಂಪರ್ಕ ಮಾಡಿ ಅವರೊಡನೆ ಚರ್ಚಿಸಿ ಈ ಭಾಗದಲ್ಲಿ ಸಂಘವನ್ನು ಸ್ಥಾಪನೆ ಮಾಡುವಂತೆ ಕೇಳಿಕೊಂಡಿದ್ದೇ ಅದರಂತೆ ಶ್ರೀ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ನಮ್ಮ ಜಿಲ್ಲೆಯಲ್ಲಿ ಅದರಲ್ಲೂ ಕೊಳ್ಳೇಗಾಲ ತಾಲ್ಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವನ್ನು ಸ್ಥಾಪನೆ ಮಾಡಿ ಜಿಲ್ಲೆಯ ಉದ್ದಗಲಕ್ಕೂ ಮಹಿಳಾ ಸಬಲೀಕರಣ  ಹಾಗೂ ಬಡವರ ಅಭಿವೃದ್ಧಿಗಾಗಿ ಸಾಲ ಸೌಲಭ್ಯಗಳನ್ನು ಒದಗಿಸಿ ಹಾಗು ಸ್ವ ಉದ್ಯೋಗವನ್ನ  ಮಾಡಿಸಿ ಅವರ ಅಭಿವೃದ್ಧಿಗೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ಮಾಡಿದ್ದಾರೆ, ಹಾಗೂ ಕೃಷಿಗೆ ಅನುಕೂಲವಾಗುವಂತೆ ಟ್ರಾಕ್ಟರ್ ಹಾಗೂ ಇನ್ನಿತರ ಕೃಷಿ ಪರಿಕರಗಳನ್ನ ಕೊಡಿಸಿದ್ದಾರೆ, ಹಾಗ ಧರ್ಮಸ್ಥಳದ ಗ್ರಾಮಾಭಿವೃದ್ದಿ ಸಂಘದ ಮೂಲಕ ಹಲವಾರು ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ಕೊಡುವಂತ ಕೆಲಸವನ್ನು ಮಾಡುತ್ತಿದೆ ಮತ್ತು ಶಾಲಾ ಕಟ್ಟಡಗಳನ್ನು ಕಟ್ಟಿಸಿ ಕೊಡುವ ಅರೋಗ್ಯ ಕೇಂದ್ರ ಸ್ಥಾಪನೆ ಹಾಗೂ ಶೌಚಾಲಯಗಳ ನಿರ್ಮಾಣ ಹಾಗು ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಧನ ಕೊಡುವ ಕೆಲಸವನ್ನು ಮಾಡಿದೆ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಸಂಘ ಸಂಸ್ಥೆಗಳಿಗೆ ಬಡವರಿಗೆ ಆರ್ಥಿಕವಾಗಿ ಸಹಕಾರವನ್ನು ಮಾಡಿದ್ದಾರೆ ಹೀಗೆ ಶ್ರೀ ಕ್ಷೇತ್ರದ ವೀರೇಂದ್ರ ಹೆಗಡೆಯವರನ್ನ ಬುದ್ದಿವಂತರನ್ನಾಗಿ ಮಾಡಿ ನಿಮ್ಮ ಮಕ್ಕಳು ಒಳ್ಳೆಯ ವಿಚಾರವಂತರಾದರೆ ಅ ಒಂದು ಸಂತೋಷ ನಿಮಗೆ ಸಿಗುತ್ತದೆ ಮಕ್ಕಳ ಅಭಿವೃದ್ಧಿಗೆ ಸರ್ಕಾರ ಹಲವಾರು ಯೋಜನೆಗಳನ್ನ ಮಾಡುತ್ತಿದೆ ಎಲ್ಲರು ಸರ್ಕಾರದ ಸೌಲಭ್ಯಗಳನ್ನ ಪಡೆದುಕೊಳ್ಳಿ ಈ ದಿನ ಪದಾಧಿಕಾರಿಗಳ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳು ಹಳೆಯ ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಂಸ್ಥೆಯನ್ನ ಅಭಿವೃದ್ಧಿ ಪತದತ್ತ ನಡೆಸಿಕೊಂಡು ಹೋಗಬೇಕೆಂದು ಕೇಳಿಕೊಂಡರು, 


ನಂತರ ಬೆಂಗಳೂರು ಡಿ.ವೈ. ಎಸ್.ಪಿ ಮಹಾನಂದ್ ರವರು ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಮಹಿಳೆಯಾರ ಅಭಿವೃದ್ಧಿಗೆ  ಮತ್ತು ಮಹಿಳಾ ಶಿಕ್ಷಣಕ್ಕೆ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಮಹತ್ವವನ್ನು ನೀಡಿದ್ದರು ಅದರಂತೆ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಸಂಘದ ಮೂಲಕ ಮಹಿಳಾ ಸಬಲೀಕರಣ ಕೆಲಸವನ್ನು ಮಾಡುತ್ತಿದೆ, ಸಂಘದ ಮೂಲಕ ಹಲವಾರು ಯೋಜನೆಗಳನ್ನು ಮಾಡಿ ಬಡವರಿಗೆ ಸಾಲ ಸೌಲಭ್ಯಗಳನ್ನು ಒದಗಿಸುವ ಮೂಲಕ ಮಹಿಳೆಯರ ಮತ್ತು ಬಡವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ ಎಂದರು,

ಈ ಸಂದರ್ಭದಲ್ಲಿ ಕೊಳ್ಳೇಗಾಲ ನಗರಸಭೆ ಅಧ್ಯಕ್ಷೆ ಗೀತಾ ರಮೇಶ್, ಎಚ್ ಕೆ ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ಮಹಾನಂದ್, ವೆಂಕಟಾಚಲ, ಸಾಹಿತಿ ಅರುಣ್,

Post a Comment

0 Comments

Ad Code

Responsive Advertisement