Ticker

6/recent/ticker-posts

Ad Code

Responsive Advertisement

ಎಐಸಿಸಿ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಸರ್ವರಿಗೂ ನನ್ನ ನಮಸ್ಕಾರಗಳು

************"**************

15ನೇ ಪಿ.ಜಿ.ಡಿ. ಪಾಡ್ ಕಾಸ್ಟ್ 

ವಿತ್ ಟೆಕ್ಸ್ಟ್

ಪ್ರಸ್ತುತಪಡಿಸುತ್ತಿರುವವರು

ಪಂಚನಹಳ್ಳಿ ಜಿ.ದಯಾನಂದಸಾಗರ ಮೂರ್ತಿ, 

ಕಾನೂನು ಮತ್ತು ಪತ್ರಿಕಾ ಕ್ಷೇತ್ರ

**************************

ಪ್ರಪ್ರಥಮ ಬಾರಿಗೆ ಕರ್ನಾಟಕದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದವರು ಸಿದ್ದವನಹಳ್ಳಿ ನಿಜಲಿಂಗಪ್ಪ. ಅದೇ ರೀತಿ ಕರ್ನಾಟಕದ ದಲಿತ ಸಮುದಾಯದಿಂದ ಪ್ರಪ್ರಥಮವಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಆದವರು ಎಂ ಮಲ್ಲಿಕಾರ್ಜುನ  ಖರ್ಗೆ.

ಬೀದರ್ ಜಿಲ್ಲೆಯ ಬಾಲ್ಕಿ ತಾಲ್ಲೂಕಿನ  ವರವಟ್ಟಿ ಎಂಬ ಊರಲ್ಲಿ ಹುಟ್ಟಿ ಮಾಪಣ್ಣಾ ಸೈಬವ್ವಾ ಎಂಬುವರ ಮಗನಾಗಿ ಜನಿಸಿದವರು ಎಂ. ಮಲ್ಲಿಕಾರ್ಜುನ ಖರ್ಗೆ.

ಗುಲಬರ್ಗಾದ ನೂತನ ವಿದ್ಯಾಲಯ ಎಂಬ  ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಓದಿದವರು. ಗುಲಬರ್ಗಾದ ಸರಕಾರಿ ಕಾಲೇಜಿನಲ್ಲಿ ಬಿಎ ಪದವಿ ಮತ್ತು   ಗುಲಬರ್ಗಾದ ಸೇಠ ಶಂಕರಲಾಲ ಲಾಹೋಟಿ  ಕಾಲೇಜ್ ನಲ್ಲಿ ಕಾನೂನು ಪದವಿ ಓದಿದವರು. ಅಲ್ಲದೆ ಗುಲಬರ್ಗಾದ ಸರಕಾರಿ ಕಾಲೇಜ್ ನಲ್ಲಿ  ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ರಾಜಕೀಯ ಕ್ಷೇತ್ರಕ್ಕೆ ಧುಮುಕಿದವರು.

ಗಾಂಧಿ ಕುಟುಂಬದ ನಿಷ್ಠಾವಂತ ನಾಯಕ. ಯುಪಿಎ ಸರ್ಕಾರದ ಅವಧಿಯಲ್ಲಿ ರೈಲ್ವೆ ಮತ್ತು  ಕಾರ್ಮಿಕ ಖಾತೆ  ಸೇರಿದಂತೆ ವಿವಿಧ ಖಾತೆಗಳ ಮಂತ್ರಿ ಆಗಿದ್ದವರು.

ನಲವತ್ತು ವರ್ಷ ಚುನಾವಣೆ ಇತಿಹಾಸದಲ್ಲಿ ಸೋಲಿಲ್ಲದ ಸರದಾರ ಎಂದು ಖ್ಯಾತಿ ಪಡೆದಿದ್ದ ಮಲ್ಲಿಕಾರ್ಜುನ ಖರ್ಗೆ 2019ರ ಲೋಕಸಭೆ ಚುನಾವಣೆಯಲ್ಲಿ ಸೋಲಿನ ರುಚಿ ಅನುಭವಿಸಿದ್ದನ್ನು ಬಿಟ್ಟರೆ,  9 ಬಾರಿ ಎಂ ಎಲ್ ಎ ಚುನಾವಣೆಗಳಲ್ಲಿ ಗೆದ್ದವರು.

ಕಾನೂನು ಪದವಿ ಪಡೆದ ನಂತರ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ  ಕಚೇರಿಯಲ್ಲಿ ಜ್ಯುನಿಯರ್ ಲಾಯರ್  ಆಗಿ ವಕೀಲ ವೃತ್ತಿ ಆರಂಭಿಸಿದವರು.

ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತು ಅವರ ಬೆಂಬಲಿಗರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗುವ ಆಸೆ ಇದೆ. ಆದರೆ  ಆ  ಕಾಲ ಇನ್ನೂ ಕೂಡಿ ಬಂದಿಲ್ಲ.  ಇವರ ಪುತ್ರ  ಪ್ರಿಯಾಂಕ್‌ ಖರ್ಗೆ ಸದ್ಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಕ್ಷೇತ್ರದ ಶಾಸಕರು ಹಾಗೂ ಮಾಜಿ ಮಂತ್ರಿಯಾಗಿದ್ದವರು. 

1969ರಲ್ಲಿ ಕಾಂಗ್ರೆಸ್  ಪಕ್ಷ ಸೇರಿದ ಖರ್ಗೆ ಗಾಂಧಿ ಕುಟುಂಬಕ್ಕೆನಿಯತ್ತಿನ  ನಿಷ್ಠರು. 2 ಬಾರಿ ಸಂಸದರಾಗಿ ಆಯ್ಕೆ ಆದವರು. ಲೋಕಸಭೆ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ಈಗ ರಾಜ್ಯಸಭಾ ಸದಸ್ಯರು .

ಎಲ್ಲದಕ್ಕಿಂತಲೂ ಮುಖ್ಯವಾಗಿ ಕೇರಳದ ತಿರುವನಂತಪುರದ ಸಂಸದ ವಿರುದ್ದ ಗೆದ್ದು ಅಖಿಲ ಭಾರತ ಕಾಂಗ್ರೆಸ್ ಸಮಿತಿ ( ಐ ಸಿ ಸಿ ) ಅಧ್ಯಕ್ಷರಾಗುವ ಮೂಲಕ ಕರ್ನಾಟಕದ ಮಾನ ಉಳಿಸಿದ ಮಾಪಣ್ಣ ರವರ ಹೆಮ್ಮೆಯ ಮಗ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ (ಕೆಪಿಸಿಸಿ) ಅಧ್ಯಕ್ಷರು ಆಗಿದ್ದವರು. ಎರಡು ಬಾರಿ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿ ನೇಮಕವಾದವರು.

ಇವರು ಕೆಪಿಸಿಸಿ  ಅಧ್ಯಕ್ಷರಾದ ಕೆಲವೇ ತಿಂಗಳಲ್ಲಿ ನಡೆದ ಪಂಚಾಯಿತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಎದುರಾಳಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗಿಂತಲೂ ಅತಿ ಹೆಚ್ಚು ಸ್ಥಾನಗಳನ್ನು ಪಡೆದಿತ್ತು. ಈ ಜಯದಿಂದ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ಮತ್ತೆ ಚೇತರಿಸಿಕೊಳ್ಳಲು ಸಹಕಾರಿಯಾಗಿತ್ತು.

ಈಗ ಇವರು ಎ ಐ ಸಿ ಸಿ ಅಧ್ಯಕ್ಷ ಆಗಿರುವುದರಿಂದ ಇದುವರೆಗೆ ಕಾಂಗ್ರೆಸ್ ಪಕ್ಷ ಮುಂದಿನ ವಿಧಾನಸಭೆಯಲ್ಲಿ ಗೆಲ್ಲಲ್ಲ ಅಂದುಕೊಂಡಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರಲ್ಲಿ ನಡುಕ ಪ್ರಾರಂಭವಾಗಿ ಬಿಟ್ಟೀರುವಂತೆ ಮೇಲ್ನೋಟಕ್ಕೆ ಭಾಸವಾಗುತ್ತಿದೆ.

ಕಾರಣ ಕಾಂಗ್ರೆಸ್ ಪಕ್ಷದ ಹಿಂದುಳಿದ, ದಲಿತ ಮತಗಳು ಇದುವರೆಗೆ ಬಿಜೆಪಿ ಪಾಲಾಗಿದ್ದವು. ಕಾರಣ ಕಾಂಗ್ರೆಸ್ ಇದುವರೆಗೆ ಇವರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ಉನ್ನತ ಸ್ಥಾನಮಾನ ಗಳಿಂದ ವಂಚಿತರನ್ನಾಗಿ ಮಾಡಿದ್ದು.

ಇದರ ಲಾಭವನ್ನು ಬಿಜೆಪಿ ಪಡೆಯುವ ಮೂಲಕ 8 ಮೀಸಲು ಲೋಕಸಭಾ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷ ದಿಂದ ಈ ವರ್ಗದ ಮತದಾರರನ್ನು ಕಾಂಗ್ರೆಸ್ ನಿಂದಾ ವಿಮುಖರನ್ನಾಗಿ ಮಾಡಿ ಬಿಟ್ಟಿದ್ದರು.

ಅಲ್ಲದೆ ಮೊನ್ನೆ ಮೊನ್ನೆ ತಾನೆ ಎಸ್ಸಿ ಮತ್ತು ಎಸ್ಟಿ ವರ್ಗಗಳಿಗೆ ಮೀಸಲಾತಿ ಘೋಷಿಸುವ ಮೂಲಕ ಈ ವರ್ಗದ ಮತಗಳು ಬಿಜೆಪಿ ಬಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಹೋಗದಂತೆ ಮಾಡಿಕೊಂಡು ಬಿಟ್ಟೆವು ಎಂದು ಬೀಗುತ್ತಿದ್ದ ರು.

ಆದರೆ ಖರ್ಗೆ ಎ ಐ ಸಿ ಸಿ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಈ ಪರಿಸ್ಥಿತಿ ಉಲ್ಟಾ ಆಗುವ ಎಲ್ಲಾ ಸಾಧ್ಯತೆಗಳೂ ಕಂಡುಬರುತ್ತಿವೆ.

ಕಾರಣ ಬಿಜೆಪಿ ಎಸ್ಸಿ ಎಸ್ಟಿ ಗಳಿಗೆ ಮೀಸಲಾತಿಯನ್ನು ಕೇವಲ ಕೊಡುತ್ತೇನೆಂದು ಘೋಷಿಸಿದೆ ಹೊರತು ಇನ್ನೂ ಅಧಿಕೃತವಾಗಿ ಜಾರಿಗೆ ಬಂದಿಲ್ಲ ಎಂದು ಖರ್ಗೆಯವರು ಒತ್ತಿ ಒತ್ತಿ ಹೇಳುವುದಕ್ಕೆ ಕಾರಣವಾಗಿ ಬಿಟ್ಟಿರುವುದು.

ಅಲ್ಲದೆ ಮುಂದಿನ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ ಶಿವಕುಮಾರ್ ಗೆ ಟಿಕೆಟ್ ಕೊಡುವ ಅಧಿಕಾರ ಇದ್ದರೂ ಸಹ, ಯಾರಿಗೆ ಕೊಡಬೇಕು, ಯಾರಿಗೆ ಕೊಡಬಾರದು ಎಂಬ ಡಿಕೆಶಿ ಅಧಿಕಾರಕ್ಕೆ ಕಡಿವಾಣ ಹಾಕುವ ಅಧಿಕಾರ ಖರ್ಗೆ ಅವರಲ್ಲಿ ಇರುವುದು. ಅದೂ ಅಲ್ಲದೆ ಯಾರು ಮುಖ್ಯಮಂತ್ರಿ ಆಗಬೇಕೆಂಬ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವೂ ಖರ್ಗೆ ಅವರಲ್ಲಿ ಇರುವುದು.

ಆದ್ದರಿಂದ ಖರ್ಗೆಯವರ ಈ ಗೆಲುವು ಸಿದ್ದರಾಮಯ್ಯ ಆಗಲಿ, ಡಿ.ಕೆ. ಶಿವಕುಮಾರ್ ಆಗಲಿ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಬಿಂಬಿಸಿಕೊಳ್ಳುವುದಕ್ಕು ಕಡಿವಾಣ ಬಿದ್ದಿದೆ.

ಬಿಜೆಪಿ ಪಕ್ಷದಲ್ಲಿ ಈಗಾಗಲೇ ಶಾಸಕರು, ಮಂತ್ರಿ, ಸಂಸದರು ಆಗಿರುವ ಹಿಂದುಳಿದ, ದಲಿತ ರಾಜಕಾರಣಿಗಳು ತಮ್ಮ ಹಿತಕ್ಕಾಗಿ, ತಾವು ಅಧಿಕಾರ ಪಡೆದಿರುವ ಪಕ್ಷದ ಕಾರಣಕ್ಕಾದರೂ ತಮ್ಮ ಹಿಂದುಳಿದ ಮತ್ತು ದಲಿತ ಮತದಾರರನ್ನು ಕಾಂಗ್ರೆಸ್ ಗೆ ವಾಪಾಸ್ ಹೋಗಬೇಡಿ ಎಂದರು ಸಹ, ಕೇಳುವ ಸ್ಥಿತಿಯಲ್ಲಿ ಈ ವರ್ಗಗಳ ಮತದಾರರು ಇಲ್ಲ.

ಕಾರಣ ಖರ್ಗೆ ಸಾಹೇಬರನ್ನು ಬೆಂಬಲಿಸಿ, ಖರ್ಗೆ ಸಾಹೇಬರು ಹೇಳುವ ಮಾತನ್ನು ಕೇಳಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಗೆಲ್ಲಿಸಿದ್ದರೆ, ಬಿಜೆಪಿ ಪಕ್ಷ ಘೋಷಿಸಿರುವ ಮೀಸಲಾತಿ ಮಾತ್ರ ಅಲ್ಲ ಇತರೆ ಎಲ್ಲ ಅರ್ಹ ಸೌಲಭ್ಯಗಳು ದೊರೆಯುತ್ತವೆ ಎಂದು ನಂಬಿ ಕಾಂಗ್ರೆಸ್ ಕಡೆ ವಾಲುತ್ತಿದ್ದಾರೆ.

ಕೇವಲ ಖರ್ಗೆ ಮಾತ್ರ ಅಲ್ಲದೆ ಅಹಿಂದ ನಾಯಕ ಸಿದ್ದರಾಮಯ್ಯರಿಗೆ ಗುಪ್ತವಾಗಿ ಖರ್ಗೆ ಬೆಂಬಲ ಇರುವುದರಿಂದ ಅಹಿಂದ ಮತಗಳು ಸಹ ಕಾಂಗ್ರೆಸ್ ಗೆ ಬೀಳಲಿವೆ. ಅದು ಅಲ್ಲದೆ ಡಿ.ಕೆ ಶಿವಕುಮಾರ್ ಸಹ ಮುಖ್ಯಮಂತ್ರಿ ಅಭ್ಯರ್ಥಿ ಆಕಾಂಕ್ಷಿ ಆಗಿರುವುದರಿಂದ ಒಕ್ಕಲಿಗರ ವೋಟುಗಳು ಸಹ ಕಾಂಗ್ರೆಸ್ ಗೆ ಬೀಳುವ ಸಾಧ್ಯತೆಗಳಿವೆ.

ಒಟ್ಟಿನಲ್ಲಿ ಹಿಂದುಳಿದ, ದಲಿತ, ಒಕ್ಕಲಿಗ ಕಾಂಬಿನೇಶನ್ ನಲ್ಲಿ ಮುಂದಿನ ವಿಧಾನ ಸಭೆ ಚುನಾವಣೆ ಮೇಲೆ ಕಾಂಗ್ರೆಸ್ ಕೆಂದ್ರಿ ಕರಿಸಿರುವುದರಿಂದ ಖರ್ಗೆ ಸಾಹೇಬರು ಇದಕ್ಕೆ  ಬಲ ನೀಡು ಟ್ಟಿರುವುದರಿಂದ ಸತ್ತೆ ಹೋಗುತ್ತಿದೆ ಮತ್ತೆ ಕಾಂಗ್ರೆಸ್  ಎನ್ನುತ್ತಿದ್ದವರಿಗೆ ಅಚ್ಚರಿಯಾಗುವಂತೆ ಮತ್ತೆ ಫೀನಿಕ್ಸ್ ಪಕ್ಷಿಯಂತೆ ಎದ್ದು ಬಂದು ರಾಜ್ಯದ ಅಧಿಕಾರ ಚುಕ್ಕಾಣಿಯನ್ನು ಹಿಡಿಯುವ ಎಲ್ಲಾ ಸಾಧ್ಯತೆಗಳೂ ಗೋಚರಿಸುತ್ತಿವೆ.

ಇತ್ತ ಬಿಜೆಪಿಯಲ್ಲಿ ತಮ್ಮ ಸ್ವಾರ್ಥಕ್ಕಾಗಿ, ಹೊಟ್ಟೆ ಉರಿಗಾಗಿ ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿ ಇಳಿಸಿ ದ್ದರ ಬಗ್ಗೆ ಅವರ ಬೆಂಬಲಿಗರು, ನಮಗೆ ಯಡಿಯೂರಪ್ಪ ಬಗ್ಗೆ ಮಾತ್ರ ಬೇಸರ ಇಲ್ಲ. ಆದರೆ ಯಡಿಯೂರಪ್ಪ ಬಿಜೆಪಿಗೆ ವೋಟ್ ಹಾಕಿ ಅಂತ ಹೇಳಿದರು, ಅವರ ಬೆಂಬಲಿಗರು ಮಾತ್ರ ಸ್ಸಾರಿ ಯಡಿಯೂರಪ್ಪ ಅವರೇ ಇದೊಂದು ಬಾರಿ ನಮ್ಮನ್ನು ಕ್ಷಮಿಸಿ, ಇನ್ನೊಂದು ಬಾರಿ ಬೇಕಾದರೆ ಬಿಜೆಪಿ ನಿಮ್ಮ ವಿಷಯದಲ್ಲಿ ಸುಧಾರಿಸಿಕೊಂಡ ರೆ ನೋಡೋಣ.

ಈ ಬಾರಿ ಮಾತ್ರ ನಾವು ನಿಮಗೆ ಕಿರುಕುಳ ಕೊಟ್ಟ ನಿಮ್ಮ ವಿರೋಧಿಗಳಿಗೆ  ಬುದ್ಧಿ ಕಲಿಸಬೇಕು ಎಂದರೆ. ನಮಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಬಿಟ್ಟರೆ. ಬೇರೆ ದಾರಿಯಿಲ್ಲ ಎಂದು ನಿರ್ಧಾರ ಮಾಡಿರುವಂತೆ ಕಾಣುತ್ತಿದೆ.

ಆದರೂ ಬಿಜೆಪಿ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನ ಖರ್ಗೆ ಎಂಬ ಭೀಮ ಬಲದ ವಿರುದ್ಧ,ಮತ್ಯಾವ ಅನೆ ಬಲ ಪ್ರಯೋಗಿಸುತ್ತೋ ಗೊತ್ತಿಲ್ಲ.

ಒಟ್ಟಾರೆ ಬಿಜೆಪಿಯ ರಾಷ್ಟ್ರೀಯ ತ್ರಿಮೂರ್ತಿಗಳಾದ ಮೋದಿ, ನಡ್ಡಾ, ಶಾ ಬಂದು ಕರ್ನಾಟಕದಲ್ಲಿ ಠಿಕಾಣಿ ಹಾಕಿದರು ಸಹ, ಕರ್ಣಾಟ ಕದ ಕಾಂಗ್ರೆಸ್ ಪಕ್ಷದ ತ್ರಿಮೂರ್ತಿಗಳಾದ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ದು ಕೆ ಶಿವಕುಮಾರ್ ಆಟದ ಮುಂದೆ  ಬಿಜೆಪಿಯ ಯಾವುದೇ ಜೂ ಟಾ ಟ ನಡೆಯುವ ಸಾಧ್ಯತೆಗಳೇ ಇಲ್ಲ ಎಂಬ ಸನ್ನಿವೇಶ ಸೃಷ್ಟಿಯಾಗುವ ಎಲ್ಲಾ ಸಾಧ್ಯಸಾಧ್ಯತೆಗಳು ಖರ್ಗೆ ಕಾರಣದಿಂದ ಕಂಡುಬರುತ್ತಿವೆ.

ಆದರೆ, 2024 ರ ಚುನಾವಣೆಯಲ್ಲಿ ಮಾತ್ರ ಮಲ್ಲಿಕಾರ್ಜುನ ಖರ್ಗೆ ಇಡೀ ದೇಶ ಸುತ್ತಿದರು ಬಿಜೆಪಿ ಪಕ್ಷಕ್ಕೆ. ಮತ್ತು ಪ್ರಧಾನಿ ಮೋದಿ ಗೆಲುವಿಗೆ ಕಡಿವಾಣ ಹಾಕುವುದು ಅಷ್ಟು ಸುಲಭ ಸಾಧ್ಯವಲ್ಲ. ರಾಜ್ಯದ ಮಟ್ಟಿಗೆ ಮಾತ್ರ ಖರ್ಗೆ ಬಲ ಕಾಂಗ್ರೆಸ್ ಗೆ ಉಸಿರು ನೀಡಬಹುದು.

ದಿನಾಂಕ 20-10-2020

ಕೃಪೆ: what's app

Post a Comment

0 Comments

Ad Code

Responsive Advertisement