Ticker

6/recent/ticker-posts

Ad Code

Responsive Advertisement

ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಕಾಂಗ್ರೆಸ್ ಕಾರ್ಮಿಕ ಸಮಿತಿ ಮಹತ್ವವಾದ ಕೊಡುಗೆ

 ಬೆಂಗಳೂರುನಗರ: ರೇಸ್ ಕೋರ್ಸ್ ರಸ್ತೆ ಕಾಂಗ್ರೆಸ್ ಭವನದಲ್ಲಿ ನೇಮಕಾತಿ ಆದೇಶ ಸಮಾರಂಭ.


ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗ *ರಾಜ್ಯಾಧ್ಯಕ್ಷರಾದ ಪುಟ್ಟಸ್ವಾಮಿಗೌಡರು  ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ವಿ.ಮಂಜುನಾಥ್ ರವರು* ನೇಮಕಾತಿ ಮಾಡಿ ಆದೇಶ ಪತ್ರ ವಿತರಿಸಿದರು.

*ಇದೇ ಸಂದರ್ಭದಲ್ಲಿ ಪುಟ್ಟಸ್ವಾಮಿಗೌಡರವರು* ಮಾತನಾಡಿ ದೇಶಕ್ಕೆ ರೈತ ಮತ್ತು ಕಾರ್ಮಿಕ ಎರಡು ಕಣ್ಣುಗಳು ಇದ್ದಂತೆ .

ಕಾರ್ಮಿಕ ಶ್ರಮಿಕ ವರ್ಗದವರು, ದೇಶ ಕಟ್ಟುವಲ್ಲಿ ಕಾರ್ಮಿಕರ ಕೊಡುಗೆ ಅಪಾರ.

ಕೆ.ಪಿ.ಸಿ.ಸಿ.ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಮಿಕ ವಿಭಾಗ ಕಾರ್ಮಿಕರ ಸಂಕಷ್ಟಕ್ಕೆ ನೆರವು ನೀಡುವ ಮತ್ತು ಸಂಘಟನೆಯಲ್ಲಿ ಮಹತ್ವವಾದ ಪಾತ್ರವಹಿಸುತ್ತಿದೆ.

ಶ್ರಮಿಕವರ್ಗ ಕಾರ್ಮಿಕರು ಕಟ್ಟಡ,ಹೋಟೆಲು ಮತ್ತು ಕಾರ್ಖಾನೆ,ಗಾರ್ಮೆಂಟ್ಸ್ ಎಲ್ಲ ಉದ್ಯಮದಲ್ಲಿ ಇದ್ದಾರೆ ಈ ಹಿಂದೆ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ಕಾರ್ಮಿಕರಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಕಾರ್ಮಿಕರು ಆರ್ಥಿಕವಾಗಿ ಸಬಲರಾಗಲು ಕಾರಣವಾಗಿದೆ.

ಕೊರೋನ ಸಂಕಷ್ಟ ಕಾಲದಲ್ಲಿ ಕಾಂಗ್ರೆಸ್ ಕಾರ್ಮಿಕ ವಿಭಾಗದಿಂದ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು.

ಕಾಂಗ್ರೆಸ್ ಪಕ್ಷದ ಯುವ ನಾಯಕ ರಾಹುಲ್ ಗಾಂಧಿ ರವರ ನೇತೃತ್ವದಲ್ಲಿ ಭಾರತ ಐಕ್ಯತಾ ಪಾದಯಾತ್ರೆಯಲ್ಲಿ ಕಾರ್ಮಿಕರ ವಿಭಾಗದ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

ಉಪಾಧ್ಯಕ್ಷರಾದ ಶ್ರೀ ನಖ ಅಹಮದ್ ಶರೀಫ್, ಕೆ ಜಿ ಮೋಹನ್ ಕುಮಾರ್ ರವರು,ಕಾರ್ಯಕರ್ತರು ಪಾಲ್ಗೊಂಡಿದ್ದರು.

Post a Comment

0 Comments

Ad Code

Responsive Advertisement