Ticker

6/recent/ticker-posts

Ad Code

Responsive Advertisement

ಗಬ್ಬು ನಾರುತ್ತಿರುವ ದೊಡ್ಡಿಂದುವಾಡಿ ಚರ್ಚೆ ರಸ್ತೆ,

 ಕೊಳ್ಳೇಗಾಲ ಸುದ್ದಿ : ಕೊಳ್ಳೇಗಾಲ ತಾಲ್ಲೂಕಿನ ದೊಡ್ಡಿಂದುವಾಡಿಯ ಕೆಲವು ಬೀದಿಗಳಲ್ಲಿ ಚರಂಡಿಗಳಲ್ಲಿ ಹೂಳು ತೆಗೆಸದೆ ಚರಂಡಿಯಲ್ಲಿ ಕೊಳಚೆ ನೀರು ತುಂಬಿಕೊಂಡು ಬೀದಿಯಲ್ಲ ಹರಿಯುತ್ತಿದ್ದೂ ಬೀದಿಗಳಲ್ಲಿ ಅನೈರ್ಮಲ್ಯ ಉಂಟಾಗಿ ರೋಗ ಹರಡುವ ಭೀತಿ ಎದುರಾಗಿದೆ,

 ತಾಲ್ಲೂಕಿನ ದೊಡ್ಡಿಂದುವಾಡಿ ಗ್ರಾಮ ಹನೂರು ಶಾಸಕರ ತವರುರಾಗಿದೆ,

ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ಕೊಡುತ್ತಿದ್ದರು,ಈ ಗ್ರಾಮದಲ್ಲಿ ಪ್ರಧಾನಿಯವರ ಸ್ವಚ್ಛ ಭಾರತ್ ಕನಸು ಕನಸಾಗೇ ಉಳಿದಿದೆ,

ಸ್ವಚ್ಛ ಭಾರತ್ ಅನ್ನೋದು ಬರೇ ಘೋಷಣೆ ಅಷ್ಟೇನ,

ದೊಡ್ಡಿಂದುವಾಡಿಯ ಕೆಲವು ಬೀದಿಗಳು ಗ್ರಾಮ ಪಂಚಾಯಿತಿ ಪಿ.ಡಿ ಓ ರವರ ನಿರ್ಲಕ್ಷಕೊಳಗಾಗಿ ಬೀದಿಗಳಲ್ಲಿ ಅನೈರ್ಮಲ್ಯ ಉಂಟಾಗಿದೆ.

ಚರಂಡಿಗಳಲ್ಲಿ ಕೊಳಚೆ ನೀರು ತುಂಬಿಕೊಂಡು ಬೀದಿಯಲ್ಲಿ ಕೊಳಚೆ ನೀರು ಹರಿಯುತ್ತಿರುವುದರಿಂದ ಪರಿಸರ ಹದಗೆಟ್ಟಿರುವುದರಿಂದ ಅನಾರೋಗ್ಯ ಹರಡುವ ಭೀತಿಯಲ್ಲಿ ಗ್ರಾಮಸ್ಥರು ಕಾಲ ಕಳೆಯುತ್ತಿದ್ದಾರೆ,

ದೊಡ್ಡಿಂದುವಾಡಿ ಗ್ರಾಮದ ಕ್ರಿಶ್ಚಿಯನ್ ರ ಚರ್ಚ್ ಮುಂಭಾಗದ ರಸ್ತೆ  ಚಿಕ್ಕಲ್ಲೂರು, ಕೊಳ್ಳೇಗಾಲ ರಸ್ತೆಯ ಚರಂಡಿಯಲ್ಲಿ ಹಲವು ವರ್ಷಗಳಿಂದ ಹೂಳು ತುಂಬಿಕೊಂಡು ಬೀದಿಗಳಿಂದ ಬರುವ ಕೊಳಚೆ ಚರಂಡಿಯಿಂದ ಮುಂದೆ ಹೋಗಲು ಅವಕಾಶ ಇಲ್ಲದೆ ರಸ್ತೆಯಲ್ಲೆಲ್ಲ ಹರಿದು ಕೊಳಚೆ ನೀರಿನಿಂದ ದುರ್ನಾತ ಬರುತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿ ಆಗುತ್ತಿದೆ,

ಇದರ ಬಗ್ಗೆ ದೊಡ್ಡಿಂದುವಾಡಿ ಗ್ರಾಮಸ್ಥರು ಪಿಡಿಓ ದಯಾನಂದ ಅವರಿಗೆ ತಿಳಿದ್ದರು ಸಹ,  ಸಮಸ್ಯೆ ಬಗ್ಗೆ ಕಂಡು ಕಾಣದಂತೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಸಾರ್ವಜನಿಕರು ತಿಳಿಸಿದ್ದಾರೆ, ಅಲ್ಲದೆ ದೊಡ್ಡಿಂದುವಾಡಿಯ ಮಾರ್ಗ ಸಂಚರಿಸುವ ಪ್ರಯಾಣಿಕರು ಚರಂದಿಯಿಂದ ಬರುವ ಕೆಟ್ಟ ದುರ್ನಾತದಿಂದ ಬೇಸತ್ತು  ಚರಂಡಿ ಸ್ವಚ್ಛತೆಗೆ ಗಮನ ಕೊಡದ ಪಿಡಿಓ ದಯಾನಂದರವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ,

ಗ್ರಾಮದಲ್ಲಿ ಅನೈರ್ಮಲ್ಯ ವಾತಾವರಣ ನಿರ್ಮಾಣವಾಗಿದ್ದು, ಚರಂಡಿಗಳಲ್ಲಿ ಹೂಳು ತೆಗೆಸಿ ಸ್ವಚ್ಛಗೊಳಿಸಿ ಎಂದು ಪಿಡಿಓ ರವರಿಗೆ ತಿಳಿಸಿದ್ದರು ಸಹ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಮನ ಹರಿಸದೆ ಬೇಜವಾಬ್ದಾರಿ ತೋರುತ್ತಿರುವ  ಬಗ್ಗೆ ಗ್ರಾಮದ ಆರ್.ಟಿ. ಐ ಕಾರ್ಯಕರ್ತರೊಬ್ಬರೂ ತಿಳಿಸಿದ್ದಾರೆ

Post a Comment

0 Comments

Ad Code

Responsive Advertisement