ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್. (ರಿ.) ವತಿಯಿಂದ ಅಕ್ಟೋಬರ್ 29 ಮತ್ತು 30 ಎರಡು ದಿನಗಳ ಕಾಲ ನಾಲ್ಕನೇ ಸಂಗೀತ ಸಮ್ಮೇಳನವನ್ನು ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಹಮ್ಮಿಕೊಂಡಿದ್ದು, ಅದರ ವಿವರಗಳು ಈ ರೀತಿ ಇವೆ :
ಅಕ್ಟೋಬರ್ 29, ಶನಿವಾರ : ಸಂಜೆ 5 ಗಂಟೆಗೆ, ಉದ್ಘಾಟನೆ--ಶ್ರೀ ಎಂ. ಅನಂತ್ (ಅಧ್ಯಕ್ಷರು, ಮಲ್ಲೇಶ್ವರಂ ಸಂಗೀತ ಸಭಾ ಟ್ರಸ್ಟ್) ಹಾಗೂ ಶ್ರೀ ಎಂ.ವಿ. ಸತ್ಯನಾರಾಯಣ (ಉಪಾಧ್ಯಕ್ಷರು, ಶ್ರೀ ತ್ಯಾಗರಾಜ ಗಾನ ಸಭಾ). ಸಮ್ಮೇಳನದ ಅಧ್ಯಕ್ಷತೆ : ಡಾ|| ಹೆಚ್.ಎಸ್. ಅನುಸೂಯ ಕುಲಕರ್ಣಿ, ಯುವ ಸಂಗೀತ ಸಮ್ಮೇಳನದ ಅಧ್ಯಕ್ಷತೆ : ಶ್ರೀ ಬಿ.ಕೆ. ರಘು. ನಂತರ ಜುಗಲ್ ಬಂದಿ : ಸುಮಾ ಹೆಗ್ಡೆ (ಸಂತೂರ್), ವಿ|| ಜಾನ್ಹವಿ ಬಿ. ಸಿಂಗ್ (ಅಂಕ್ಲುಂಗ್) ಮತ್ತು ಸಂಗಡಿಗರು. 6-45ಕ್ಕೆ ಡಾ|| ಹೆಚ್. ಎಸ್. ಅನುಸೂಯ ಕುಲಕರ್ಣಿ ಮತ್ತು ಸಂಗಡಿಗರಿಂದ ಅಂಕ್ಲುಂಗ್).
ಸಂಜೆ 5:00 ಗಂಟೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿ ಶ್ರೀ ಪಟ್ಟಾಭಿರಾಂ ಪಂಡಿತ್ (ಗಾಯನ), ವಿ|| ಬಿ ಕೆ ರಘು (ಪಿಟೀಲು), ವಿ|| ಕೆ ಯು ಜಯಚಂದ್ರ ರಾವ್ (ಮೃದಂಗ), ವಿ|| ಗಿರಿಧರ್ ಉಡುಪ ಯು ಎನ್ (ಘಟ).
ಪ್ರಶಸ್ತಿ ಪ್ರದಾನ : ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮದಲ್ಲಿ ಶ್ರೀ ಎಂ ಅನಂತ್ ಅವರ ಅಧ್ಯಕ್ಷತೆಯಲ್ಲಿ, ಸಂಗೀತ ಸಮ್ಮೇಳನದ ಅಧ್ಯಕ್ಷರಾದ ಡಾ|| ಹೆಚ್. ಎಸ್. ಅನುಸೂಯ ಕುಲಕರ್ಣಿ ಅವರಿಗೆ "ಶೃತಿಲಯ ಭಾರತಿ" ಪ್ರಶಸ್ತಿ ಪ್ರದಾನ ಹಾಗೂ ಯುವ ಕಲಾವಿದರ ಸಂಗೀತ ಸಮ್ಮೇಳನದ ಅಧ್ಯಕ್ಷರಾದ ವಿ|| ಬಿ. ಕೆ. ರಘು ಅವರಿಗೆ "ಸ್ವರಲಯ ಭಾರತಿ" ಪ್ರಶಸ್ತಿ ಪ್ರದಾನ. ಈ ಸಮಾರಂಭದಲ್ಲಿ ಭಾಗವಹಿಸುವ ಮುಖ್ಯ ಅತಿಥಿಗಳು : ಡಾ|| ಟಿ. ಎಸ್. ಸತ್ಯವತಿ (ಸಂಗೀತ ಮತ್ತು ಸಂಸ್ಕೃತ ವಿದುಷಿ), ಎಲ್. ಎಸ್. ಶ್ಯಾಮಸುಂದರ ಶರ್ಮ. (ರಾಷ್ಟ್ರ ಪ್ರಶಸ್ತಿ ವಿಜೇತರು, ಅಧ್ಯಕ್ಷರು : ಸ್ಮಾರ್ಟ್ ಸ್ಕೂಲ್, ಮಾಚೋಹಳ್ಳಿ. ನಂತರ ಸಮಾರೋಪ ಸಮಾರಂಭ.


0 Comments