Ticker

6/recent/ticker-posts

Ad Code

Responsive Advertisement

*ದುಡಿಯುವ ವರ್ಗ ದೇವರ ಸಮಾನ*: *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಬೀದರ್, ಅಕ್ಟೋಬರ್ 18: ನಮ್ಮ ಸರ್ಕಾರಕ್ಕೆ  ದುಡಿಯುವ ವರ್ಗವೇ ದೇವರ ಸಮಾನ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಅವರು ಇಂದು ಹುಮ್ನಾಬಾದಿನಲ್ಲಿ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದರು.

 ಮುಖ್ಯಮಂತ್ರಿಯಾದ ಕೇವಲ 4 ಗಂಟೆಗಳಲ್ಲಿ ರೈತ ವಿದ್ಯಾನಿಧಿ ಘೋಷಣೆ ಮಾಡಿದ್ದು,  6 ಲಕ್ಷ ಕೃಷಿ ಕೂಲಿ ಕಾರ್ಮಿಕ ಮಕ್ಕಳಿಗೂ ಈ ಸೌಲಭ್ಯ ವಿಸ್ತರಣೆ ಆಗಿದೆ. ಮೀನುಗಾರರು, ನೇಕಾರರು, ಆಟೋ-ಟ್ಯಾಕ್ಸಿ ಡ್ರೈವರ್ ಮಕ್ಕಳಿಗೂ ವಿದ್ಯಾನಿಧಿ ವಿಸ್ತರಣೆ ಮಾಡಲಾಗಿದೆ. ಅಲ್ಲದೇ ಈ ವರ್ಷ 4 ಸಾವಿರ ಹೆಚ್ಚುವರಿ ಅಂಗನವಾಡಿಗಳನ್ನು ಪ್ರಾರಂಭ ಮಾಡುತ್ತಿದ್ದೇವೆ. ಅದರಲ್ಲಿ 1200 ಕಲ್ಯಾಣ ಕರ್ನಾಟಕದಲ್ಲಿ ಶುರು ಮಾಡುತ್ತಿದ್ದೇವೆ. ದುಡಿ *ದುಡಿಯುವ ವರ್ಗ ದೇವರ ಸಮಾನ*: *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*


ಯುವ ವರ್ಗಕ್ಕೆ ಶಕ್ತಿ ತುಂಬುವ ಸಲುವಾಗಿ ಈ ಸೌಲಭ್ಯ ನೀಡುತ್ತಿದ್ದೇವೆ ಎಂದರು.

*ಎಲ್ಲಾ ವರ್ಗಗಳ ಅಭಿವೃದ್ಧಿ*

ಮರಾಠ ಜನಾಂಗ, ಬೋವಿ ಜನಾಂಗಕ್ಕೆ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಎಲ್ಲ ವರ್ಗದ ಅಭಿವೃದ್ಧಿಯೇ ಈ ನಾಡಿನ ಅಭಿವೃದ್ಧಿ. ಇಂತಹ ಒಂದು ಅಭಿವೃದ್ಧಿ ಭಾರತೀಯ ಜನತಾ ಪಕ್ಷದ ಸರ್ಕಾರದಿಂದ ಮಾತ್ರ ಆಗುತ್ತಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕೆ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಮಾತುಗಳನ್ನು ಹೇಳಿದ್ದಾರೆ. ಅವರ ಈ ಮಂತ್ರವನ್ನು ನಾವು ಪರಿಪಾಲನೆ ಮಾಡುತ್ತಿದ್ದೇವೆ. ಕೃಷಿ ಸಮ್ಮಾನ್, ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಆವಾಸ್, ಉಜ್ವಲ್ ಯೋಜನೆ, ಪ್ರಧಾನ ಮಂತ್ರಿ ಸಡಕ್ ಯೋಜನೆ, ಮುದ್ರಾ ಯೋಜನೆಗಳನ್ನು ದೇಶದ ಸಮಗ್ರ ಅಭಿವೃದ್ಧಿಗೆ ನರೇಂದ್ರ ಮೋದಿಯವರು ಕೊಟ್ಟಿದ್ದಾರೆ ಎಂದರು.


*ಮಾನ ಮತ್ತು ಸನ್ಮಾನಗಳನ್ನು ಕೊಡುವುದೇ ನಮ್ಮ ಗುರಿ*

ಇದು ಬಸವಣ್ಣನವರ ನಾಡು. ಇಲ್ಲಿಂದ ನಾವು ಅಧ್ಯಾತ್ಮಿಕ ವಿಚಾರ ಹಾಗೂ ಸತ್ಸಂಗವನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ವಚನಕಾರರ ವಿಚಾರಗಳು ನಮ್ಮ ಸರ್ಕಾರದ ಕಾರ್ಯಕ್ರಮಗಳು. ಇಷ್ಟು ವರ್ಷ ಯಾರು ಅಪಮಾನವನ್ನು ಸಹಿಸಿದ್ದಾರೆ, ಅವರಿಗೆ ಮಾನ ಮತ್ತು ಸನ್ಮಾನಗಳನ್ನು ಕೊಡುವುದೇ ನಮ್ಮ ಗುರಿ. 

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಕ್ರಾಂತಿಯನ್ನು ಕರ್ನಾಟಕದಲ್ಲಿ ಮತೊಮ್ಮೆ ತರಬೇಕು ಎಂದು ಆಡಳಿತ ಚುಕ್ಕಾಣಿ ಹಿಡಿದಿದ್ದು,  ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡುವುದೇ ನಮ್ಮ ಸಂಕಲ್ಪ ಮತ್ತು ಗುರಿ. ಇದು ಯಶಸ್ವಿಯಾಗಲು ನಿಮ್ಮ ಆಶಿರ್ವಾದ ಎಲ್ಲ ಬಿಜೆಪಿ ಅಭ್ಯರ್ಥಿಗಳ ಮೇಲೆ ಇರಲಿ ಎಂದು  ಮುಖ್ಯಮಂತ್ರಿಗಳು ಹೇಳಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಭಗವಂತ್ ಖೂಬಾ, ಸಚಿವ ಸಂಪುಟದ ಸದಸ್ಯರುಗಳಾದ ಗೋವಿಂದ ಕಾರಜೋಳ, ಶ್ರೀರಾಮುಲು, ಬೈರತಿ ಬಸವರಾಜು, ಬೀದರ್ ಜಿಲ್ಲಾ ಉಸ್ತುವಾರಿಗಳಾದ ಶಂಕರಗೌಡ ಮುನೇನಕೊಪ್ಪ ಹಾಗೂ ಇನ್ನೂ ಹಲವಾರು ಮುಖಂಡರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement