ಇತ್ತೀಚಿಗೆ ಮಧುಗಿರಿ ತಾಲೂಕಿನಲ್ಲಿ ಹೆಚ್ಚುತ್ತಿರುವ ಕಳ್ಳತನಗಳು:
ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಗೊಂದಿಹಳ್ಳಿ ಹಾಗೂ ಹಳೇ ತಿಮ್ಮನಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಕಳ್ಳತನ.
ವಾರ್ತಾ ಜಾಲ ಸುದ್ದಿ ಮಧುಗಿರಿ:ತಾಲೂಕಿನ ಪುರವರ ಹೋಬಳಿಯ ಹಳೆತಿಮ್ಮನಹಳ್ಳಿಯ ಅಂಗನವಾಡಿ ಕೇಂದ್ರ ಹಾಗೂ ಗೊಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನೆನ್ನೆ ರಾತ್ರಿ ಕಳ್ಳತನವಾಗಿದ್ದು ಅಂಗನವಾಡಿ ಕೇಂದ್ರದಲ್ಲಿ ಬಾಗಿಲು ಮುರಿದು ಎರಡು ಗ್ಯಾಸ್ ಸಿಲಿಂಡರ್ ಹಾಗೂ ಸ್ಟೌವನ್ನು ಕಳ್ಳತನ ಮಾಡಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆ ನಾಗರತ್ನಮ್ಮ ತಿಳಿಸಿದ್ದಾರೆ.
ಹಾಗೂ ಶಾಲೆಯಲ್ಲಿ ಅಡುಗೆ ಕೋಣೆ ಬಾಗಿಲು ಮುರಿದು ಕಳ್ಳತನ ಮಾಡಲು ನೋಡಿದ್ದಾರೆ ಆದರೆ ಅದರಲ್ಲಿ ಯಾವುದೇ ತರಹದ ಉಪಕರಣಗಳು ಸಿಗದ ಕಾರಣ ಬಾಗಿಲು ಬೀಗ ಮಾತ್ರ ಮುರಿದು ಹೋಗಿದ್ದಾರೆ ಎಂದು ಅಲ್ಲಿನ ಮುಖ್ಯ ಶಿಕ್ಷಕ ತಿಳಿಸಿದ್ದಾರೆ.
ನಂತರ ಎಸ್ಡಿಎಂಸಿ ಉಪಾಧ್ಯಕ್ಷೆ ಗಾಯತ್ರಿ ಮಾತನಾಡಿ ರಾತ್ರಿ ಶಾಲೆಯಲ್ಲಿ ಕಳ್ಳತನವಾಗಿದ್ದು ಯಾವುದೇ ರೀತಿ ಉಪಕರಣಗಳು
ಇಲ್ಲಿ ಇಲ್ಲದ ಕಾರಣ ಬರೀ ಬಾಗಿಲು ಮಾತ್ರ ಮರಿದು ಹೋಗಿದ್ದಾರೆ ಆದ್ದರಿಂದ ಈಗ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗುವುದು ಎಂದರು.
ಸ್ಥಳಕ್ಕೆ ಕೊಡಿಗೇನಹಳ್ಳಿ ಆರಕ್ಷಕ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಮಾಹಿತಿಯನ್ನು ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ತಾಲೂಕಿನಾದ್ಯಂತ ಅಲ್ಲಲ್ಲಿ ಕಳ್ಳತನದ ವರದಿಗಳು ವರದಿಯಾಗುತ್ತಲೇಯಿದ್ದು
ಈ ಹಿಂದಿನ ವಾರ ಕೂಡ ಪುರವರದ ಮುದುಡಮ್ಮ ದೇವಸ್ಥಾನದಲ್ಲಿ ಕೂಡ ಕಳ್ಳತನವಾಗಿದ್ದು ಆರಕ್ಷಕ ಠಾಣೆ ಸಿಬ್ಬಂದಿಗಳು ದಯವಿಟ್ಟು
ಈ ಕಳ್ಳತನಗಳ ಜಾಡು ಹಿಡಿದು ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ವರದಿ:ನಾಗೇಶ್ ಜೀವಾ ಮಧುಗಿರಿ.




0 Comments