ಅಕ್ಟೋಬರ್, 19, 2022 : ಹನೂರು ಕ್ಷೇತ್ರದಲ್ಲಿ ಅಪ್ಪು ಅಭಿಮಾನಿಯ ಮಿಂಚಿನ ಸಂಚಾರ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ, ಬಡವರ ದೀನದಲಿತರ ಪರ ಹೋರಾಟದಲ್ಲೂ ಸಕ್ರಿಯರಾಗಿರುವ ಅಪ್ಪು ಅಭಿಮಾನಿ ಮುಜಮಿಲ್ ಫಾಷ,
ಹೌದು ಗಡಿಜಿಲ್ಲೆ ಚಾಮರಾಜನಗರ ಜಿಲ್ಲೆಯ ಕಟ್ಟಾಕಡೆಯ ತಾಲ್ಲೂಕು ಹನೂರು ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿಯೇ ಅಭಿವೃದ್ಧಿ ವಂಚಿತ ಹಿಂದುಳಿದ ಕ್ಷೇತ್ರವಾಗಿದ್ದು ಮೂಲ ಸೌಕರ್ಯ ವಂಚಿತ ನೂರಾರು ಹಳ್ಳಿಗಳನ್ನು ಹೊಂದಿರುವ ವಿಶಾಲವಾದ ಕ್ಷೇತ್ರವಾಗಿದೆ, ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಅತೀ ಹೆಚ್ಚು ನಿರುದ್ಯೋಗ, ಬಡತನ ತಾಂಡವಾಡುತ್ತಿದ್ದೂ ಇಲ್ಲಿನ ಜನರ ಮುಗ್ದತೆಯನ್ನ ಅರ್ಥ ಮಾಡಿಕೊಂಡು ಹಣ ಹೆಂಡದ ಅಸೆ ತೋರಿಸಿ ಓಟು ಗಿಟ್ಟಿಸಿ ರಾಜಕೀಯ ಅಧಿಕಾರ ಪಡೆದುಕೊಳ್ಳಲು ಹಲವಾರು ಶ್ರೀಮಂತರು ಪೈಪೋಟಿ ನಡೆಸುತ್ತಿರುವಾಗ
ಕ್ಷೇತ್ರದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ಬಡವರ ದೀನ ದಲಿತರ ಪಾಡನ್ನ ಕಷ್ಟಗಳನ್ನ ಹತ್ತಿರದಿಂದ ನೋಡಿ, ಬಡವರ ನಾಡಿ ಮಿಡಿತವನ್ನ ಅರಿತು ತನ್ನದೇ ಕ್ಷೇತ್ರದಲ್ಲಿ ಅಭಿವೃದ್ಧಿಯಿಂದ ವಂಚಿತರಾಗಿರುವ ಜನರ ಸೇವೆಗಾಗಿ ಮೊದಲ ಬಾರಿಗೆ ಇದೆ ಹನೂರು ಕ್ಷೇತ್ರದ ಬಡ ಕುಟುಂಬದವರಾದ ಕೆ. ಗುಂಡಾಪುರ ಗ್ರಾಮದ ಮುಜಮಿಲ್ ಫಾಷರವರು ಸಾಮಾನ್ಯ ಒಬ್ಬ ಟೈಲರ್ ಆಗಿದ್ದ ಇವರು ಕಷ್ಟಪಟ್ಟು ದುಡಿದು ಯಾವುದೇ ಹಣ ಬೆಂಬಲ ಇಲ್ಲದೆ ಕೇವಲ ಜನ ಬೆಂಬಲದಿಂದ ಹನೂರು ಕ್ಷೇತ್ರದಲ್ಲಿ ಹಲವಾರು ಜನಪರ ಸೇವೆಗಳನ್ನು ಮಾಡುವಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ,
ಪುನೀತ್ ರಾಜ್ ಕುಮಾರ್, ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿರುವ ಮುಜಮಿಲ್ ಫಾಷ ರವರು ರಾಜ್ಯದಲ್ಲಿರುವ 224 ಕ್ಷೇತ್ರದಲ್ಲಿಯೆ ಮೊದಲ ಬಾರಿಗೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಅಪ್ಪು ಹೆಸರಿನಲ್ಲಿ ರಾಜಕೀಯ ಪ್ರವೇಶ ಮಾಡುತ್ತಿರುವ ಮೊಟ್ಟ ಮೊದಲ ಅಪ್ಪು ಅಭಿಮಾನಿ ಎಂದು ಹೇಳಬಹುದು,
ಹನೂರು ಕ್ಷೇತ್ರದಲ್ಲಿ ಓಟ್ ಬ್ಯಾಂಕ್ ಗಾಗಿ ಲಕ್ಷಾಂತರ ರೂಪಾಯಿಗಳನ್ನು ಹೂಡಿಕೆ ಮಾಡುತ್ತಿರುವ ಕೋಟ್ಯಧಿಪತಿಗಳನ್ನು ಹಿಂದಿಕ್ಕಿ
ಕ್ಷೇತ್ರದಲ್ಲಿ ಕೇವಲ ಜನರ ಪ್ರೀತಿ ವಿಶ್ವಾಸ ಅಭಿಮಾನವನ್ನು ಪಡೆದು ಜನರಿಂದಲೇ ಗುರುತಿಸಿಕೊಂಡು ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡುತ್ತಿದ್ದಾರೆ,
ಸುಮಾರು ಎರಡು ಮೂರು ವರ್ಷಗಳಿಂದ ಕ್ಷೇತ್ರದ ಹಳ್ಳಿಹಳ್ಳಿಗಳಿಗೆ ಹೋಗಿ ಬಡವರ ಕಷ್ಟಗಳಿಗೆ ನೆರವಾಗಿ, ಅನಾಹುತಕೀಡದ ರೋಗಿಗಳಿಗೆ ಚಿಕಿತ್ಸೆ ಕೊಡಿಸುತ್ತ,
ಬಡಜನರ ಜೊತೆ ಸಮಾಲೋಚನೆ ನಡೆಸಿ ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಿರುವ ಇವರು ಇದೆ ಕ್ಷೇತ್ರದ ಹಿಂದುಳಿದ ವರ್ಗದ ಬಡ ಕುಟುಂಬದ ಸಾಮಾನ್ಯ ಟೈಲರ್ ರಾಗಿ ವೃತ್ತಿ ಜೀವನವನ್ನು ನಡೆಸುತ್ತಿದ್ದ ಅಪ್ಪು ಅಭಿಮಾನಿ ಮುಜಮಿಲ್ ಫಾಷರವರು ಕ್ಷೇತ್ರದ ಅಭಿವೃದ್ಧಿ ಮತ್ತು ಕ್ಷೇತ್ರದ ಜನರ ಅಭಿವೃದ್ಧಿಯ ಕನಸನ್ನು ಹೊತ್ತು ಕ್ಷೇತ್ರದ ಜನತೆಗಾಗಿ ಅಪ್ಪು ಹೆಸರಿನಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತಯಾರಿ ನಡೆಸುತ್ತಿದ್ದಾರೆ, ಎನ್ನಲಾಗಿದೆ,
ಇದರ ಬಗ್ಗೆ ಅಪ್ಪು ಅಭಿಮಾನಿ ಮುಜಮಿಲ್ ಫಾಷರವರು ಮಾತನಾಡಿ ನಾನು ಸ್ವತಃ ಹನೂರು ಕ್ಷೇತ್ರದ ಕೆ. ಗುಂಡಾಪುರ ಗ್ರಾಮದ ಒಂದು ಬಡ ಕುಟುಂಬದವನಾಗಿದ್ದು ಸಾಮಾನ್ಯ ಒಂದು ಟೈಲರ್ ಉದ್ಯೋಗವನ್ನು ಮಾಡಿ ಕಷ್ಟ ಪಟ್ಟು ದುಡಿದು ಜೀವನ ಪ್ರಾರಂಭಿಸಿದ ಸಾಮಾನ್ಯನಾಗಿದ್ದು
ಹನೂರು ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ವಂಚಿತ ಹಳ್ಳಿಗಳು ಇವೆ ಹಾಗೂ ಕಡುಬಡತನದಿಂದ ಕೂಡಿದ ಎಷ್ಟೋ ಕುಟುಂಬಗಳು ಇವೆ,
ನಮ್ಮ ಕ್ಷೇತ್ರದ ಎಷ್ಟೋ ಹಳ್ಳಿಗಳಿಗೆ ಇನ್ನು ಸಹ ಮೂಲ ಸೌಕರ್ಯಗಳು ಇಲ್ಲ, ಕ್ಷೇತ್ರದ ಜನರ ಕಷ್ಟ ಗಳನ್ನು ಹತ್ತಿರದಿಂದ ನೋಡಿರುವ ನನಗೆ ತುಂಬಾ ನೋವಾಗಿದೆ ನಾನು ಒಂದು ಬಡ ಕುಟುಂಬದವನಾಗಿರುವುದರಿಂದ ಜನರ ಕಷ್ಟಗಳನ್ನು ಚನ್ನಾಗಿ ಆರಿತಿದ್ದೇನೆ, ಆದ್ದರಿಂದ ನಾನು ನನ್ನ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದು
ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕು, ಕ್ಷೇತ್ರದಲ್ಲಿರುವ ನಿರುದ್ಯೋಗವನ್ನ ನಿವಾರಣೆ ಮಾಡಬೇಕು ಅರೋಗ್ಯ ಕೇಂದ್ರಗಳನ್ನ ತೆರೆಸಿ ಜನರಿಗೆ ಅರೋಗ್ಯ ಸೇವೆಗಳು ಹತ್ತಿರದಲ್ಲಿ ಸಿಗವಂತೆ ಮಾಡಬೇಕು ಹಾಗೂ ಅತೀ ಹೆಚ್ಚು ಸರ್ಕಾರಿ ಶಾಲಾ ಕಾಲೇಜುಗಳನ್ನ ತೆರೆಸಿ ಬಡವರ ಹಿಂದುಳಿದವರ, ದಲಿತರ, ಅಲ್ಪ ಸಂಖ್ಯಾತರ, ಮಕ್ಕಳಿಗೆ ಉಚಿತ ಶಿಕ್ಷಣ ಸಿಗುವಂತೆ ವ್ಯವಸ್ಥೆಯನ್ನು ಮಾಡಬೇಕು ಎಂಬ ಮಹದಾಸೆಯನ್ನು ಇಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಮೊಟ್ಟ ಮೊದಲ ಬಾರಿಗೆ ಅಪ್ಪು ಅಭಿಮಾನಿಯಾದ ನಾನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದರು,
ಕ್ಷೇತ್ರದಲ್ಲಿ ಅತೀ ಹೆಚ್ಚು ಪುನೀತ್ ರಾಜ್ ಕುಮಾರ್ ಅಪ್ಪು ಅಭಿಮಾನಿಗಳು ಹೆಚ್ಚು ಸಂಖ್ಯೆಯಲ್ಲಿ ಇದ್ದು,ಮುಂದಿನ ಚುನಾವಣೆಯಲ್ಲಿ ಅಪ್ಪು ಅಭಿಮಾನಿಯನ್ನು ಕೈ ಹಿಡಿಯುತ್ತಾರ ಕಾದು ನೋಡಬೇಕಿದೆ

0 Comments