Ticker

6/recent/ticker-posts

Ad Code

Responsive Advertisement

ಬಿಹಾರ ಮೂಲದ ವಿಶ್ವಕರ್ಮ ಸಮಾಜದಿಂದ ಛತ್ ಪೂಜಾ ಆಯೊಜನೆಗೆ ಸಿದ್ಧತೆ

ಬೆಂಗಳೂರು : ತ್ರೇತಾಯುಗ ಹಾಗೂ ದ್ವಾಪರಯುಗಗಳ ಕಾಲದಿಂದಲೂ, ಹಿಂದೂಗಳ ಮಹಾಗ್ರಂಥಗಳಾದ  ರಾಮಾಯಣ ಹಾಗೂ ಮಹಾಭಾರತದಲ್ಲೂ ಉಲ್ಲೇಖಗೊಂಡಿರುವ ಛತ್ ಪೂಜಾ ಆಚರಣೆಯನ್ನು ನಮ್ಮ ಭಾರತ ದೇಶದಲ್ಲಿ ಅದರಲ್ಲೂ ವಿಶೇಷವಾಗಿ ಬಿಹಾರ, ಉತ್ತರಪ್ರದೇಶ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಬಹುಮುಖ್ಯ ಹಬ್ಬಗಳಲ್ಲೊಂದಾಗಿ ಆಚರಿಸಿಕೊಂಡು ಬರಲಾಗುತ್ತಿದ್ದು, ಇದರ ಐತಿಹ್ಯವೇನಂದರೆ ಸೂರ್ಯದೇವನ ಸಹೋದರಿಯಾದ ಚಟೀ ಮಾತಾ ದೇವಿಯ ಆರಾಧನೆ ಯನ್ನು ಮಹಿಳೆಯರು ಪ್ರಾಮುಖ್ಯವಾಗಿ ಆಚರಿಸುವ ಈ ಮೂರು ದಿನಗಳ ಹಬ್ಬದಾಚರಣೆಯು, ದೀಪಾವಳಿ ಮುಗಿದ ಆರನೇ ದಿನ ಸಂಪನ್ನಗೊಳ್ಳುತ್ತದೆ. 


ಈ ಹಬ್ಬದ ಆಚರಣೆಯ ಬಹುಮುಖ್ಯ ಸಂಪ್ರದಾಯವೆಂದರೆ ಭಗವಾನ್ ಸೂರ್ಯ ದೇವನಿಗೆ ಉದಯ ಹಾಗೂ  ಅಸ್ತ ಉಭಯ ಕಾಲಗಳಲ್ಲೂ ವ್ರತಾಚರಣೆ ಮಾಡುವ ಸ್ತ್ರೀಯರು ನೀರಿನಲ್ಲಿ ನಿಂತು ಸಂಧ್ಯಾವೇಳೆ ಸೂರ್ಯ ದೇವನಿಗೆ ನೀರಿನಿಂದ ಹಾಗೂ ಸೂರ್ಯೋದಯದ  ವೇಳೆ ಹಾಲಿನಿಂದ ಅರ್ಘ್ಯವನ್ನು ನೀಡಿ ತಮ್ಮ ಕುಟುಂಬ ಹಾಗೂ ಸಮಸ್ತ ಲೋಕಕ್ಕೂ ಮಂಗಳವನ್ನುಂಟು ಮಾಡಲು ಸೂರ್ಯ ದೇವನನ್ನು ಪ್ರಾರ್ಥನೆ ಮಾಡುವ ಆಚರಣೆಯಲ್ಲಿ ಸಮಸ್ತ ಹಿಂದೂ ಬಾಂಧವರು ಜಾತಿ-ಮತ, ಮೇಲು-ಕೀಳು, ಬಡವ-ಶ್ರೀಮಂತ ಎಂಬ ಬೇಧಬಾವಗಳಿಗೆ ಈ ಹಬ್ಬದ ವೃತಾಚರಣೆಯಲ್ಲಿ ಆಸ್ಪದ ನೀಡದೆ, ಹಿಂದೂ ಸಂಪ್ರದಾಯವನ್ನು ಪಾಲಿಸುವ ಸರ್ವರೂ ಒಗ್ಗೂಡಿ ಒಂದೆಡೆ ಸೇರಿ ಸಂಭ್ರಮ ಹಾಗೂ ಸಡಗರದಿಂದ ಆಚರಿಸುವ ಹಬ್ಬ ಇದಾಗಿದೆ.

   ರಾಜರಾಜೇಶ್ವರಿ ನಗರ ವಿಧಾನ ಸಭಾ ಕ್ಷೇತ್ರದ ಯಶವಂತಪುರದ ಮತ್ತೀಕೆರೆಯ ಜೆ.ಪಿ.ಪಾರ್ಕ್‌  ನ ಆಟದ ಮೈದಾನದಲ್ಲಿ ಮೂರನೇ ಬಾರಿಗೆ ಶ್ರೀ ವಿಶ್ವಕರ್ಮ ಬಿಹಾರ್ ಸಮಾಜ ಸೇವಾ ಟ್ರಸ್ಟ್ (ರಿ) ನ ವತಿಯಿಂದ ಇದೇ  ಅಕ್ಟೋಬರ್ ತಿಂಗಳ 30 ಹಾಗೂ 31 ರಂದು ಸಂಪ್ರದಾಯಾಚರಣೆಗೆ ಅಗತ್ಯವಿರುವ ತಾತ್ಕಾಲಿಕ ಮಂಟಪ ನಿರ್ಮಾಣ ಕಾರ್ಯವು ಪ್ರಗತಿಯಲ್ಲಿದ್ದು, ಇಲ್ಲಿ ನೀರಿನ ತಾತ್ಕಾಲಿಕ ಕೊಳವನ್ನು ನಿರ್ಮಿಸಿ, ವ್ರತಾಚರಣೆ ಮಾಡಲು ಅನುವು ಮಾಡಿಕೊಡಲಾಗುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳಾದ ಮತ್ತೀಕೆರೆ, ಎಂ.ಎಸ್.ಆರ್.ನಗರ, ಜಾಲಹಳ್ಳಿ, ಸುಭೇದಾರ ಪಾಳ್ಯ, ಮುತ್ಯಾಲನಗರ, ಮೋಹನ್ ಕುಮಾರ ನಗರ ಹಾಗೂ ಇತರೆ ಭಾಗಗಳಲ್ಲಿ ವಾಸಿಸುತ್ತಿರುವ ಬಿಹಾರ ರಾಜ್ಯ ಮೂಲದ ಸುಮಾರು ನಾಲ್ಕೈದು ಸಾವಿರ ಕುಟುಂಬಗಳ ಒಂದೆರಡು ದಶಕಗಳಿಂದ ಈ ಭಾಗದಲ್ಲಿ ಖಾಯಂ ಆಗಿ ನೆಲೆಸಿರುವ ಆ ಮೂರು ರಾಜ್ಯಗಳವರ ಪ್ರಮುಖ ಧಾರ್ಮಿಕ ಆಚರಣೆ ಸಂಪ್ರದಾಯಗಳಲ್ಲಿ ಮುಖ್ಯ ವಾಗಿರುವ ಈ ಹಬ್ಬವನ್ನು ಇಲ್ಲಿ ಮುಕ್ತವಾಗಿ ಆಚರಿಸುವಂತಾಗಬೇಕೆಂದು ಅಗತ್ಯ ಕ್ರಮಗಳನ್ನು ಸ್ಥಳೀಯ ಶಾಸಕರು ಹಾಗೂ ಸಚಿವರೂ ಆಗಿರುವ ಮುನಿರತ್ನರವರ ಸಲಹೆ ಸಹಕಾರದೊಂದಿಗೆ ಇಲ್ಲಿ ಏರ್ಪಡಿಸಲಾಗಿದ್ದು, ಛತ್ ಪೂಜೆಯಲ್ಲಿ ಸರ್ವರೂ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಂಘದ ಉಪಾಧ್ಯಕ್ಷ ರಾಜನ್ ಕುಮಾರ್ ಶರ್ಮಾ ಮಾಹಿತಿಯನ್ನು ನೀಡಿದರು.

 ಕಳೆದ ಹಲವಾರು ವರ್ಷಗಳಿಂದ ಬೆಂಗಳೂರಿನ ಈ ಭಾಗದಲ್ಲಿ ಹೆಬ್ಬಾಳ ಕೆರೆ, ಸ್ಯಾಂಕಿ ಕೆರೆಗಳಲ್ಲಿ ಆಚರಿಸುತ್ತಾ ಬಂದಿದ್ದ ಈ ಹಬ್ಬವನ್ನು ಕಳೆದ ಮೂರು ವರ್ಷಗಳಿಂದ ಹೆಚ್ಚು ಸೌಕರ್ಯಗಳನ್ನು  ಹೊಂದಿರುವ ಹಾಗೂ ವಾಹನಗಳ ನಿಲುಗಡೆಗೆ ಸ್ಥಳಾವಕಾಶವಿರುವ ಜೆ.ಪಿ. ಪಾರ್ಕ್‌ನಲ್ಲಿ ಆಯೋಜಿಸಲು ಸ್ಥಳೀಯ  ಮುಖಂಡರಾದ ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲೆ ಉಪಾಧ್ಯಕ್ಷರಾದ ಸುನಂದ ಕೆ. ಬೋರೇಗೌಡರ  ಸಹಕಾರವನ್ನು ಸಂಘದ ಪದಾಧಿಕಾರಿಗಳು ಪ್ರಶಂಸಿದರು. ಅಕ್ಟೋಬರ್ 30 ಹಾಗೂ 31 ರಂದು ಸಾರ್ವಜನಿಕರು ಸಹ ಛತ್ ಪೂಜೆಯಲ್ಲಿ ಭಾಗವಹಿಸಲು ಈ ಮೂಲಕ ಸರ್ವರಿಗೂ ಆಮಂತ್ರಣವನ್ನು ನೀಡಿದ್ದಾರೆ ಅಧ್ಯಕ್ಷ ಬ್ರಿಜೇಶ್ ಶರ್ಮಾರವರು. ಈ ಸಂದರ್ಭದಲ್ಲಿ  ಖಜಾಂಚಿ ಪ್ರದೀಪ್ ಕುಮಾರ್ ಶರ್ಮಾ,  ಕಾರ್ಯದರ್ಶಿ ಸಂತೋಷ್ ಶರ್ಮಾ, ಅಕೌಂಟೆಂಟ್ ಶಶಿ ಭೂಷಣ್ ಶರ್ಮಾ ಮುಂತಾದವರು ಉಪಸ್ಥಿತರಿದ್ದರು.

Post a Comment

0 Comments

Ad Code

Responsive Advertisement