Ticker

6/recent/ticker-posts

Ad Code

Responsive Advertisement

News: ಪ್ರೆಸ್ ಕ್ಲಬ್ ಕೌನ್ಸಿಲ್ನಿಂದ ಪತ್ರಿಕಾ ದಿನಾಚರಣೆ ಹಾಗೂ ಸಾಧಕರಿಗೆ ಸನ್ಮಾನ

ಸೆ. 06, ಬೆಂಗಳೂರು: ದಿನಾಂಕ 04/09/2022 ಭಾನುವಾರ ಬೆಳಗ್ಗೆ 11 ಘಂಟೆಯಿಂದ ಮಧ್ಯಾಹ್ನ 3 ಘಂಟೆವರೆಗೂ ಬೆಂಗಳೂರಿನ ಶೇಷಾದ್ರಿಪುರಂನ ಗಾಂಧಿ ಭವನದಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್ ವತಿಯಿಂದ ಪತ್ರಿಕಾ ದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮವನ್ನು ಪ್ರೆಸ್ ಕ್ಲಬ್ ಕೌನ್ಸಿಲಿನ ರಾಜ್ಯಾಧ್ಯಕ್ಷರಾದ ರಾಘವೇಂದ್ರಾಚಾರ್, ಸ್ವತಃ ಪತ್ರಕರ್ತರು ಹಾಗೂ ಸಂಪಾದಕರು ಆಗಿರುವ ಕಾರಣ, ಪತ್ರಕರ್ತರ ಆಗುಹೋಗುಗಳ, ಕಷ್ಟನಷ್ಟಗಳನ್ನು, ಹತ್ತಿರದಿಂದ ಬಲ್ಲವರಾಗಿದ್ದು, ಈ ಕಾರ್ಯಕ್ರಮವನ್ನು ಬಹಳ ಅಚ್ಚುಕಟ್ಟಾಗಿ ಶಿಸ್ತಿನಿಂದ, ಸಂಯಮದಿಂದ ಹಾಗೂ ಯಾವುದೇ ರೀತಿಯ ಕುಂದುಕೊರತೆ ಬಾರದ ಹಾಗೆ ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು. 

ಸಮಾರಂಭಕ್ಕೆ ಗಣ್ಯಾತಿಗಣ್ಯರು, ಸಾಹಿತಿಗಳು, ಪತ್ರಕರ್ತರು, ಉದ್ಯಮಿಗಳು ಹಾಗೂ ಮತ್ತಿತರ ಸಾಧಕರುಗಳು, ಮುಖ್ಯ ಅತಿಥಿಗಳಾಗಿ - ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಶ್ರೀ ಶ್ರೀ ಬಾಲಮಂಜುನಾಥ ಸ್ವಾಮೀಜಿರವರಿಂದ (ಶ್ರೀ ವಿದ್ಯಾ ಚೌಡೇಶ್ವರಿ ಮಹಾ ಸಂಸ್ಥಾನ ಮಠ) ನೆರೆವೇರಿಸಲ್ಪಟ್ಟಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಯುತ ನಾಡೋಜ ಡಾ. ವೊಡ ಪಿ ಕೃಷ್ಣರವರು  (ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಕಾರ್ಯದರ್ಶಿಗಳು ಹಾಗೂ ಗಾಂಧಿ ಭವನದ ಅಧ್ಯಕ್ಷರು) ವಹಿಸಿಕೊಂಡಿದ್ದು ವಿಶೇಷವಾಗಿತ್ತು. 

ಮುಖ್ಯ ಅತಿಥಿಗಳಾಗಿ ಡಾ. ಸಿ ಸೋಮಶೇಖರ್ (ಐಎಎಸ್, ಅಧ್ಯಕ್ಷರು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ), ಗಿರೀಶ್ ಸಿ ಹೊಸೂರ (ಐಎಫ್ಎಸ್, ಬಿಎಮ್ಆರ್‌ಡಿ, ಆಯುಕ್ತರು), ವಿವೇಕ ಸುಬ್ಬಾರೆಡ್ಡಿ (ವಕೀಲರ ಸಂಘದ ಅಧ್ಯಕ್ಷರು), ಡಾಕ್ಟರ್ ರಾಮಚಂದ್ರ (ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ನಿರ್ದೇಶಕರು), ಡಾ. ಎ ಎನ್ ಪ್ರಕಾಶ್ ಗೌಡ (ಐಪಿಎಸ್, ಆಂತರಿಕ ಭದ್ರತಾ ವಿಭಾಗ), ಡಾ. ಎಂ ಎಸ್ ಅನುಚೇತ್ (ಐಪಿಎಸ್, ಸಿಸಿಡಿ, ಸಿಐಡಿ ಎಸ್ಪಿ), ಶ್ರೀಮತಿ ಪ್ರೊಫೆಸರ್ ಸಮತ ಬಿ ದೇಶಮಾನೆ (ಕವಯತ್ರಿ ಹಾಗೂ ಪ್ರಾಧ್ಯಾಪಕರು, ಬೆಂಗಳೂರು ವಿವಿ), ಶ್ರೀಮತಿ ಡಾ. ಪದ್ಮ ನಾಗರಾಜ್ (ಸಂಪಾದಕರು, ಇಂದು ಸಂಜೆ ಪತ್ರಿಕೆ), ಸುನಿಲ್ ಧರ್ಮಸ್ಥಳ (ದಿಗ್ವಿಜಯ ನ್ಯೂಸ್), ಡಾಕ್ಟರ್ ದಿನೇಶ್ ಬೈರೇಗೌಡ (ಖ್ಯಾತ ಮಕ್ಕಳ ತಜ್ಞ ಹಾಗೂ ಸಮಾಜಸೇವಕರು), ಡಾ. ಸುನಿಲ್ ಕುಮಾರ್ ಹೊಸಮನಿ (ಕರ್ನಾಟಕ ಗ್ರಂಥಾಲಯ ಇಲಾಖೆಯ ನಿರ್ದೇಶಕರು), ಸಂದೀಪ್ (ಯುವ ಉದ್ಯಮಿ ಹಾಗೂ ಸಮಾಜಸೇವಕರು) ಮತಿತರ ಗಣ್ಯರು ಆಗಮಿಸಿ ಕಾರ್ಯಕ್ರಮದ ಯಶಸ್ವಿಗೆ ನಾಂದಿಯಾದರು.

ವಿಶೇಷ ಸನ್ಮಾನಿತರಾಗಿ ಪ್ರಸನ್ನ ಬಿ ಕೆ (ವಾರ್ತಾಜಾಲ ದಿನಪತ್ರಿಕೆಯ ಸಂಪಾದಕರು), ಬಿ ಆರ್ ನರಸಿಂಹಮೂರ್ತಿ (ಹಿರಿಯ ಪತ್ರಕರ್ತರು, ವಾರ್ತಾಜಾಲ ದಿನಪತ್ರಿಕೆ), ಗಂಡಸಿ ಸದಾನಂದ ಸ್ವಾಮಿ (ಭಾರತ ಸಾರಥಿ ಪತ್ರಿಕೆಯ ಸಂಪಾದಕರು), ಕುಮಾರಸ್ವಾಮಿ ಬಸರಾಳು (ಪತ್ರಕರ್ತರು,ಪಬ್ಲಿಕ್ ಆಪ್, ಮಂಡ್ಯ), ಶಂಕರ್ ಬೆನ್ನೂರು (ಸಂಚಾರಿ ಸತ್ಯ ಪತ್ರಿಕೆಯ ಸಂಪಾದಕರು), ನೀಲಕಂಠ ದಾತಾರ (ದಧಲ್ ಬಾಜಿ ನ್ಯೂಸ್, ಸಂಪಾದಕರು), ಥಾಮಸ್ (ಪತ್ರಕರ್ತರು, ಪ್ರಜಾ ಟಿವಿ), ನಾಗರಾಜ ಎನ್ (ವೀರಭದ್ರ ಎಲೆಕ್ಟ್ರಿಕಲ್ಸ್), ಅನಿಲ್ (ಪತ್ರಕರ್ತರು, ಶಿಡ್ಲಘಟ್ಟ), ನಿಂಗರಾಜೇಗೌಡ (ಸಮಾಜ ಸೇವಕರು), ಸಿ ಎಸ್ ನಾಗೇಂದ್ರ (ವಕೀಲರು), ಎಸ್ ವಿನಯ್ ಕುಮಾರ್ (ಸಂಪಾದಕರು, ಕರ್ನಾಟಕ ಹಿಂದಿ ಸಭಾ ಪತ್ರಿಕೆ, ಮಂಡ್ಯ), ವಿಜಯಕುಮಾರ್ (ಸಂಪಾದಕರು, ಒಡೆಯರ್ ಪತ್ರಿಕೆ, ರಾಮನಗರ), ಲೋಕೇಶ್ ಎನ್ (ವಕೀಲರು), ಶಿವಾನಂದ (ಸೂರ್ಯವಂಶಿ ಪತ್ರಿಕೆಯ ಸಂಪಾದಕರು), ವೇಣುಗೋಪಾಲ್ (ಮೈಸೂರು), ಸುಧೀಂದ್ರ ಕುಮಾರ್ (ಆಲದ ಮರ ಪತ್ರಿಕೆಯ ಸಂಪಾದಕರು), ಡಾಕ್ಟರ್ ಶಂಕರ್ (ಸಿ ಎಂ ಓ, ಬೌರಿಂಗ್ ಆಸ್ಪತ್ರೆ), ಕೆ ಎಸ್ ಗಣೇಶ್ (ಛಾಯಾಗ್ರಾಹಕರು, ವಿಜಯ ಕರ್ನಾಟಕ), ಅರುಣ್ (ಮಂಡ್ಯ ನಗರಸಭೆಯ ಮಾಜಿ ಅಧ್ಯಕ್ಷರು), ಅಮರ್ನಾಥ್ (ರಾಜ್ಯಾಧ್ಯಕ್ಷರು, ಕ ಕಾ ಪ ಸ), ಶಿವಕುಮಾರ್ (ಪತ್ರಕರ್ತರು), ಡಿ ಎಲ್ ಹರೀಶ್ (ಪತ್ರಕರ್ತರು), ರಾಮ್ರಾವ್ (ಜಿನಿ ನ್ಯೂಸ್, ಸಂಪಾದಕರು), ಸುಗಟೂರು ಮಂಜುನಾಥ್ (ಡ್ರೈವರ್ಸ್ ಅಂಡ್ ಓನರ್ಸ್ ಅಸೋಸಿಯೇಷನ್,ಅಧ್ಯಕ್ಷರು), ಎಮ್ ಗುರುನಾಥ್ (ವಕೀಲರು), ಎಮ್ ಶಿವಕುಮಾರ್ (ಸಂಯುಕ್ತ ಕರ್ನಾಟಕ, ಮಂಡ್ಯ ಜಿಲ್ಲಾ ವರದಿಗಾರರು), ಶ್ರೀಮತಿ ಡಾಕ್ಟರ್ ಲೀಲಾವತಿ (ಚರ್ಮರೋಗ ತಜ್ಞರು, ಬೌರಿಂಗ್ ಆಸ್ಪತ್ರೆ) ಹಾಗೂ ಮತ್ತಿತರರು ಆಗಮಿಸಿದ್ದರು.

ಕಾರ್ಯಕ್ರಮವು ಬಹಳ ಅದ್ದೂರಿಯಾಗಿ ಹಾಗೂ ಅಚ್ಚುಕಟ್ಟಾಗಿ ನಡೆಯಲು ಪ್ರಮುಖವಾಗಿ ಪ್ರೆಸ್ ಕ್ಲಬ್ ಕೌನ್ಸಿಲಿನ ರಾಜ್ಯ ಅಧ್ಯಕ್ಷರಾದ ರಾಘವೇಂದ್ರಾಚಾರ್ ಮತ್ತು ಪದಾಧಿಕಾರಿಗಳ ಹಾಗೂ ಸದಸ್ಯರ ಪಾತ್ರವೂ ಪ್ರಮುಖವಾಗಿ ಎದ್ದು ಕಾಣುತ್ತಿತ್ತು. ಸಮಾರಂಭಕ್ಕೆ ಬಂದಿದ್ದ ಮುಖ್ಯ ಅತಿಥಿಗಳು ಹಾಗೂ ಅತಿಥಿಗಳಿಗೆ ಪ್ರಶಸ್ತಿ ಪುರಸ್ಕಾರವನ್ನಿಟ್ಟು ಸನ್ಮಾನಿಸಲಾಯಿತು.

ನೆರದಿದ್ದ ಪತ್ರಕರ್ತ ಬಂಧುಗಳಿಗೆ ಭೋಜನ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಪ್ರೆಸ್ ಕ್ಲಬ್ ಕೌನ್ಸಿಲಿನ ಚಿನ್ಹೆಯುಳ್ಳ ಬ್ಯಾಗುಗಳನ್ನು ಪತ್ರಕರ್ತರಿಗೆ ಸಂಘದ ಕಾರ್ಯಕ್ರಮದ ನೆನಪಿಗಾಗಿ ನೀಡಲಾಯಿತು. ಸಭೆಯನ್ನು ಉದ್ದೇಶಿಸಿ ಮುಖ್ಯ ಅತಿಥಿಗಳು ಹಾಗೂ ಅತಿಥಿಗಳು ಮಾತನಾಡಿದ್ದು ಮನಮುಟ್ಟುವಂತಿತ್ತು. 

ಪ್ರೆಸ್ ಕ್ಲಬ್ ಕೌನ್ಸಿಲಿನ ರಾಜ್ಯ ಅಧ್ಯಕ್ಷರಾದ ರಾಘವೇಂದ್ರಾಚಾರ್ ಅವರು ಸಭೆಯಲ್ಲಿ ಪತ್ರಕರ್ತರ ಕಷ್ಟ - ನೋವು, ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿ, ಪತ್ರಕರ್ತರಿಗೆ ಸರಕಾರದಿಂದ ಆರ್ಥಿಕ ಸಹಾಯ, ವೈದ್ಯಕೀಯ ಸೌಲಭ್ಯಗಳು ಮತ್ತು ಇತರೆ ಸೌಲಭ್ಯಗಳನ್ನು ಮುಂದಿನ ದಿನಗಳಲ್ಲಿ ಕೊಡಿಸುವಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್ ಪ್ರಮುಖ ಪಾತ್ರ ವಹಿಸುವಲ್ಲಿ ಎಂದೆಂದಿಗೂ ಮುಂದೆ ಇರುತ್ತದೆ ಹಾಗೂ ಪ್ರೆಸ್ ಕ್ಲಬ್ ಕೌನ್ಸಿಲ್ ಸಂಘಟನೆಯು ಪತ್ರಕರ್ತರಿಂದ ಪತ್ರಕರ್ತರಿಗಾಗಿಯೇ ಎಂದು ಹೇಳಿದರು.

ಅಧ್ಯಕ್ಷರಾದ ರಾಘವೇಂದ್ರ ಅವರಿಗೆ ಬೆಂಬಲವಾಗಿ ನಿಂತ ಪ್ರಧಾನ ಕಾರ್ಯದರ್ಶಿಯಾದ ಆಶಾ,  ಪ್ರಶಾಂತ್ ಗೌಡ, ಉಪ ಅಧ್ಯಕ್ಷರು ಮತ್ತಿತರ ಸದಸ್ಯರ ಕಾರ್ಯವು ಶ್ಲಾಘನೀಯ. ಇದೇ ರೀತಿ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮವನ್ನು ರಾಜ್ಯಾದ್ಯಂತ ಪ್ರೆಸ್ ಕ್ಲಬ್ ಕೌನ್ಸಿಲ್ ನಡೆಸಿಕೊಡಲು ಶಕ್ತಿ, ಚೈತನ್ಯ ಪಡೆಯಲಿ ಎಂದು ಪತ್ರಕರ್ತರ ಆಶಯ.

Varthajala bilingual daily, Malleshwaram, Bengaluru

Post a Comment

0 Comments

Ad Code

Responsive Advertisement