Ticker

6/recent/ticker-posts

Ad Code

Responsive Advertisement

ಪೌಷ್ಠಿಕ ಆಹಾರ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಪ್ರಧಾನ ಹಿರಿಯ ಸಿವಿಲ್‌ ನ್ಯಾll ಶಿಲ್ಪ.ಹೆಚ್.ಎ.

 ವಾರ್ತಾ ಜಾಲ ಸುದ್ದಿ ಮಧುಗಿರಿ: ಪೌಷ್ಠಿಕ ಆಹಾರ ಸೇವಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಶಿಲ್ಪ.ಹೆಚ್.ಎ. ತಿಳಿಸಿದರು.


ತಾಲೂಕಿನ ದೊಡ್ಡರಿ ಹೋಬಳಿ ದದ್ದೇಘಟ್ಟ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಶಿಶು ಅಭಿವೃದ್ಧಿ ಯೋಜನಾ ಇಲಾಖೆ, ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪೌಷ್ಟಿಕ ಆಹಾರ ದಿನಾಚರಣೆ ಮತ್ತು ಮಾದಕ ವ್ಯಸನಗಳ ದಿನ ಅ೦ಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅದ ಷ್ಟಿಕತೆಯಿಂದ ಗರ್ಭಿಣಿಯರು ಮಕ್ಕಳು ಅನಾರೋಗ್ಯಕ್ಕೀಡಾಗುತ್ತಿದ್ದು, ಅಪೌಷ್ಟಿಕತೆ ನಿವಾರಣೆ ಮಾಡುವ ಉದ್ದೇಶದಿಂದ ಸರ್ಕಾರವು ಪೋಷಣ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಮೊಳಕೆ ಕಾಳು, ತರಕಾರಿಯಂತಹ ವಿಧವಿಧದ ಆಹಾರಗಳ ಸೇವನೆಯಿಂದ ಕಡಿಮೆ ತೂಕದ ಸಮಸ್ಯೆ, ಇನ್ನಿತರ ಅನಾರೋಗ್ಯ ತೊಂದರೆ ದೂರವಿಡಬಹುದು, ಗರ್ಭಿಣಿಯರಿಗೆ ಅಂಗನವಾಡಿಯಿಂದಲೇ ಪೌಷ್ಟಿಕಯುಕ್ತ ಆಹಾರ ನೀಡುವ ಯೋಜನೆ ಜಾರಿಯಲ್ಲಿದ್ದು ಗ್ರಾಮೀಣ ಭಾಗದಲ್ಲಿ ಯೋಜನೆಯ ಸದುಪಯೋಗ

ಪಡಿಸಿಕೊಳ್ಳಬೇಕು ಎಂದರು. ಫಾಸ್ಟ್‌ ಫುಡ್‌ ಗಳ ಸೇವನೆಯಿಂದ ನಾಲಿಗೆ ರುಚಿ ಸಿಗಬಹುದು, ಆದರೆ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಜೊತೆಗೆ ಯುವಕರು ಮಾದಕ ವಸ್ತುಗಳ ಸೇವನೆ ಮಾಡುವುದರಿಂದ ಜೀವನ ಹಾಳಾಗುತ್ತದೆ, ಯುವಕರು ದಾರಿ ತಪ್ಪಬಾರದು ಎಂದು ತಿಳಿಸಿದರು.

ಪ್ರಧಾನ ಸಿವಿಲ್‌ ನ್ಯಾಯಾಧೀಶರಾದ ರಘುನಾಥ್ ಗೌಡ. ಕೆ.ಟಿ. ಮಾತನಾಡಿ ಆಧುನಿಕ ಆಹಾರ ಪದ್ಧತಿಯಿಂದ ಆರೋಗ್ಯ ಹಾಳಾಗುತ್ತದೆ, ಹಿಂದಿನವರು ಬಳಸುತ್ತಿದ್ದ ಆಹಾರ ಪದ್ಧತಿಯಿಂದ ದೇಹದ ಪೌಷ್ಟಿಕತೆ ಹೆಚ್ಚಿಸಿಕೊಳ್ಳಬಹುದು, ಜೊತೆಗೆ ಜನರಿಗೆ ಸಾಮಾನ್ಯ ಕಾನೂನುಗಳ ಅರಿವಿರಬೇಕು, ಪ್ರತಿಯೊಬ್ಬರೂ ವಾಹನ ಚಾಲನಾ ಪರವಾನಗಿ ಹೊಂದಿರಬೇಕು, ಅಪಘಾತವಾದರೆ ಸೂಕ್ತ ದಾಖಲೆಗಳಿಲ್ಲದಿದ್ದರೆ ನಿಮ್ಮ ಕುಟುಂಬಗಳು ಸಂಕಷ್ಟಕ್ಕೀಡಾಗುವ ಪ್ರಕರಣ ನೋಡಿದ್ದೇವೆ, ಆದ್ದರಿಂದ ಪ್ರತಿಯೊಬ್ಬರೂ ತಮ್ಮ ವಾಹನಗಳಿಗೆ ಕಡ್ಡಾಯವಾಗಿ ವಿಮೆ ಹೊಂದಿರಬೇಕು, ಜನನ ಪ್ರಮಾಣ ಪತ್ರಗಳ ನೋಂದಣಿ ಮಾಡಿಸಬೇಕು ಎಂದು ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ರಮೇಶ್ ಬಾಬು ಮಾತನಾಡಿ, 2017- 18 ನೇ ಸಾಲಿನಲ್ಲಿ ಪೋಷಣೆ ಅಭಿಯಾನ ಯೋಜನೆ ಜಾರಿಗೆ ಬಂತು, ಅಪೌಷ್ಟಿಕತೆಯಿಂದ ಬಳಲುತ್ತಿದ್ದತಾಯಂದಿರು ಮಕ್ಕಳನ್ನು ಆರೋಗ್ಯವಂತರನ್ನಾಗಿ ಮಾಡುವ ಉದ್ದೇಶದಿಂದ ಜಾಗೃತಿ ಮೂಡಿಸುವ ಈ ಯೋಜನೆ ಅಂಗನವಾಡಿಗಳ ಮೂಲಕ ಜಾರಿಗೆ ಬಂದಿತು, ಅನ್ನಪೂರ್ಣ ಯೋಜನೆಯಡಿ ಮಕ್ಕಳಿಗೆ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಣೆ ಮಾಡಲಾಗುತ್ತಿದೆ, ರಕ್ತಹೀನತೆ, ಜ೦ತು ಹುಳುಗಳ ನಿವಾರಣಾ ಕಾರ್ಯಕ್ರಮ, ಅತಿಸಾರ ಬೇಧಿ ನಿಯಂತ್ರಣ ಕಾರ್ಯಕ್ರಮ, ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಗಳ ಮೂಲಕ ಅಪೌಷ್ಟಿಕತೆ ನಿವಾರಿಸಲು ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೆ ತಂದದ್ದು ಸದ್ಬಳಕೆಯಾಗಬೇಕು, ನಾವು ತಿನ್ನುವ ಆಹಾರ

ಪೌಷ್ಟಿಕಯುಕ್ತವಾಗಿರಬೇಕು ಎಂಬ ಮಾಹಿತಿ ನೀಡುವುದೇ ಪೋಷನ್ ಅಭಿಯಾನ ಕಾರ್ಯಕ್ರಮ ಎಂದರು.

ಕೋವಿಡ್ ಮಹಾಮಾರಿಯ ಬಗ್ಗೆ ಎಲ್ಲರೂ ಎಚ್ಚರದಿಂದ ಇರಬೇಕು, ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ತಿಳಿಸಿದರು.

ವಕೀಲರ ಸಂಘದ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ ಮಾತನಾಡಿ, ಆರೋಗ್ಯ ಪೂರ್ಣ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿದ್ದು ಯುವಕರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವಿದ್ಯಾವಂತರಾಗಬೇಕು, ಉತ್ತಮ ಆರೋಗ್ಯ ಮತ್ತು ವಿದ್ಯೆ ಇರುವವನೆ ನಿಜವಾದ ಶ್ರೀಮಂತ ಎಂದರು.

ಸಿಡಿಪಿಒ ಅನಿತಾ ಪ್ರಾಸ್ತಾವಿಕ ವಾಗಿ ಮಾತನಾಡಿ ಗರ್ಭಿಣಿ ಬಾಣಂತಿಯರಿಗೆ ಮಾತೃಪೂರ್ಣ ಯೋಜನೆ ಜಾರಿಯಲ್ಲಿದ್ದು, 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸಲಾಗುತ್ತಿದೆ, ಮನೆಗಳಲ್ಲಿ ಪೌಷ್ಟಿಕ ಆಹಾರ ಪದ್ಧತಿ ಅನುಷ್ಠಾನವಾದಾಗ ಮಾತ್ರ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಈಡೇರಿದಂತಾಗುತ್ತದೆ ಎಂದರು. 

ಕಾರ್ಯಕ್ರಮದಲ್ಲಿ ಪ್ರಭಾರ ಪ್ರಾಂಶುಪಾಲ ಈಶ್ವರಯ್ಯ, ಉಪನ್ಯಾಸಕ ಗೋವಿಂದರಾಜು, ವಕೀಲರ ಸಂಘದ ಉಪಾಧ್ಯಕ್ಷ ಈ.ರಂಗನಾಥ್, ವಕೀಲ ಎಂ.ಎನ್.ಬಾಬು, ಅಂಗನವಾಡಿ ಕಾರ್ಯಕರ್ತೆಯರಾದ ಲಕ್ಷ್ಮೀನರಸಮ್ಮ, ರಾಜೇಶ್ವರಿ, ನಾಗಮಣಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement