ಸೆ. 06, ಹೈದರಾಬಾದ್: ತೆಲುಗಿನ ಖ್ಯಾತ ನಟ ಪವನ್ ಕಲ್ಯಾಣ್ ಅವರ ಮಾಜಿ ಪತ್ನಿ ಹಾಗೂ ನಟಿ ರೇಣು ದೇಸಾಯಿ ಮದುವೆ ವಿಚಾರ ಮತ್ತೊಮ್ಮೆ ಬಯಲಾಗಿದೆ. ಪವನ್ ಕಲ್ಯಾಣ್ ಅವರಿಂದ ವಿಚ್ಛೇದನೆ ಪಡೆದ ನಂತರ ರೇಣು ತಮ್ಮೆರಡು ಮಕ್ಕಳೊಂದಿಗೆ ಪುಣೆಯಲ್ಲಿ ವಾಸವಾಗಿದ್ದರು. ಮಕ್ಕಳೊಂದಿಗೆ ರಾಜ್ಯ - ದೇಶ ಸುತ್ತುತ್ತಾ, ಆ ಕ್ಷಣಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾ ಹಾಯಾಗಿದ್ದರು. ಬಹುಶಃ ಒಂಟಿ ಜೀವನ ಸಾಕಾಗಿರಬಹದು, ಜೊತೆಗಾರನೊಬ್ಬ ಬೇಕೆನಿಸರಬಹುದು. ಹಾಗಾಗಿ ಜೊತೆಗಾರ ಬೇಕು ಎನ್ನುವ ಅರ್ಥದಲ್ಲಿ ಅವರು ಜಾಲತಾನದಲ್ಲಿ ಪೋಸ್ಟ್ ಮಾಡಿದ್ದಾರೆ.
ಪವನ್ ಕಲ್ಯಾಣ್ ಅವರನ್ನು ಮದುವೆಯಾದ ನಂತರ ರೇಣು ಸಿನಿಮಾ ರಂಗದಿAದ ದೂರ ಉಳಿದಿದ್ದರು. ಥೇಟ್ ಹೌಸ್ ವೈಫ್ ತರಹ ಬದುಕು ಸಾಗಿಸಲು ಶುರು ಮಾಡಿದ್ದರು. ಪವನ್ ಕಲ್ಯಾಣ್ ಅವರ ಇಷ್ಟ ಕಷ್ಟಗಳಿಗೆ ಜೊತೆಯಾಗಿ ಹೆಗಲು ಕೊಟ್ಟವರು. ಎರಡು ಮಕ್ಕಳು ಆದ ನಂತರ ಇಬ್ಬರ ನಡುವೆ ಹೊಂದಾಣಿಕೆ ಆಗದೇ ಇರುವ ಕಾರಣಕ್ಕಾಗಿ ಡಿವೋರ್ಸ್ ಪಡೆದಿದ್ದರು. ಆನಂತರ ತನ್ನ ತವರು ಮನೆಯಲ್ಲೇ ಅವರು ಮಕ್ಕಳೊಂದಿಗೆ ವಾಸವಿದ್ದಾರೆ.
ಈ ಕಡೆ ಪವನ್ ಕಲ್ಯಾಣ್ ಮತ್ತೊಂದು ಮದುವೆ ಆದರೂ, ರೇಣು ಆ ಕುರಿತು ಯೋಚಿಸಿರಲಿಲ್ಲ, ತುಟಿಕ್ ಪಿಟಿಕ್ ಎಂದಿರಲಿಲ್ಲ. ಕಳೆದ ವರ್ಷವಷ್ಟೇ ಎಂಗೇಜ್ ಮೆಂಟ್ ರಿಂಗ್ ತೋರಿಸುವ ಮೂಲಕ ಮತ್ತೊಂದು ಮದುವೆ ಆಗುವ ಕುರಿತು ಸೂಚನೆ ನೀಡಿದ್ದರು. ಆನಂತರ ಮತ್ತೆ ಅದು ಸುದ್ದಿ ಆಗಲಿಲ್ಲ. ಈ ಕುರಿತು ಅವರು ಸ್ಪಷ್ಟನೆಯನ್ನೂ ಕೊಡಲಿಲ್ಲ. ಹಾಗಾಗಿ ರೇಣು ಕದ್ದುಮುಚ್ಚಿ ಮದುವೆ ಆಗಿದ್ದಾರಾ ಎನ್ನುವ ಅನುಮಾನವೂ ಮೂಡಿತ್ತು. ಇದೀಗ ಮದುವೆ ಕಾರಣಕ್ಕೆ ಅವರು ಮತ್ತೆ ಸುದ್ದಿ ಆಗಿದ್ದಾರೆ.
ಸದ್ಯ ಮಕ್ಕಳ ಜೊತೆ ರಜೆ ಕಳೆಯಲು ರೇಣು ವಿದೇಶಕ್ಕೆ ಹಾರಿದ್ದರು. ಅಲ್ಲಿಂದಲೇ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಜೀವನದಲ್ಲಿ ಅಗತ್ಯವಿದ್ದಾಗ ಕೈ ಹಿಡಿದು ನಡೆಸುವ, ಕಷ್ಟನಷ್ಟಗಳಿಗೆ ಸ್ವಂದಿಸುವ, ಮಾರ್ಗದರ್ಶನ ಮಾಡುವಂತಹ ಜೊತೆಗಾರರು ಬೇಕು ಎಂದು ಅವರು ಪೋಸ್ಟ್ ಮಾಡಿದ್ದು, ಜೊತೆಗಾರ ಬೇಕು ಎನ್ನುವುದು ಮದುವೆ ಅರ್ಥವನ್ನು ಸೂಚಿಸುತ್ತಾ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ, ಜಾಲತಾನಗಳಲ್ಲಿ ರೇಣು ಬಗ್ಗೆ ಗುಸುಗುಸು.
Varthajala bilingual daily, Malleshwaram, Bengaluru

0 Comments