ಸೆ. 06, ನವದೆಹಲಿ: ಸರಿಯಾದ ರೀತಿಯಲ್ಲಿ ವೈಜ್ಙಾನಿಕವಾಗಿ ಚರಂಡಿಗಳನ್ನು ನಿರ್ಮಿಸಿ, ಮಳೆ ನೀರು ನಿಲ್ಲದಂತೆ ನೋಡಿಕೊಳ್ಳುವುದು ಮುನ್ಸಿಪಲ್ ಕಾರ್ಪೊರೇಷನ್ನ ಕರ್ತವ್ಯ. ಮಳೆ ನೀರು ಮನೆಗಳಿಗೆ ನುಗ್ಗಿ ನಷ್ಟವಾದರೆ ಅದಕ್ಕೆ ಕಾರ್ಪೊರೇಷನ್ ಹೊಣೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. 12 ವರ್ಷ ಹಳೆಯ ಪ್ರಕರಣಕ್ಕೆ ಸಂಬ0ಧಿಸಿದ0ತೆ ಮಂಗಳವಾರ ಆದೇಶ ನೀಡಿದ ಹೈಕೋರ್ಟ್, ಅಧಿಕಾರಿಗಳ ವಿರುದ್ಧ ಬಿಸಿಬಿಸಿ ಚಾಟಿ ಬೀಸಿ 9 ಲಕ್ಷ ರೂ. ಪರಿಹಾರ ನೀಡುವಂತೆ ಸೂಚಿಸಿದೆ.
2010 ರಲ್ಲಿ ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದ ಚರಂಡಿ ನೀರು ಮನೆಗಳಿಗೆ ನುಗ್ಗಿ ಅಪಾರ ನಷ್ಟವಾಗಿತ್ತು. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳ ಕರ್ತವ್ಯ ಲೋಪ ಪ್ರಶ್ನಿಸಿ ಲೀಲಾ ಮಾಥುರ್ ಅವರು ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಪಶ್ಚಿಮ ದೆಹಲಿಯಲ್ಲಿ ತಮ್ಮ ಮನೆ ನಿರ್ಮಿಸಿದಾಗ ಅದು ರಸ್ತೆಯ ಮಟ್ಟದಲ್ಲಿತ್ತು. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಹಲವು ಬಾರಿ ರಸ್ತೆ ಪುನರ್ನಿರ್ಮಾಣದ ನಂತರ ರಸ್ತೆಯ ಮಟ್ಟವು ಏರಿ, ಮನೆ ತಗ್ಗು ಪ್ರದೇಶದಲ್ಲಿ ಉಳಿಯುವಂತೆ ಅಧಿಕಾರಿಗಳು ಮಾಡಿದ್ದಾರೆ. ಇದರಿಂದ ಮಾನ್ಸೂನ್ ಮಳೆಯ ವೇಳೆ ಮನೆಗೆ ನೀರು ನುಗ್ಗಿದೆ. ಸಮಸ್ಯೆಯನ್ನು ಪರಿಹರಿಸಲು ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನ ಹರಿಸಲಿಲ್ಲ, ಸಮಸ್ಯೆ ಹೇಳಲು ಹೋದರೆ ಉಡಾಫೆ ಉತ್ತರ ಅವರಿಂದ ಬರುತಿತ್ತು ಎಂದು ಅವರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಇದಕ್ಕೆ ಪ್ರತಿವಾದ ಮಂಡಿಸಿದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್, ನೀರಿನ ಚರಂಡಿಗಳು ಮುಚ್ಚಿಹೋಗಿರುವುದರಿಂದ ಎಂಸಿಡಿಯಿ0ದ ಏನನ್ನೂ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕರ್ತವ್ಯ ನಿರ್ವಹಿಸುವಲ್ಲಿ ಶೋಚನೀಯವಾಗಿ ಸಂಸ್ಥೆ ವಿಫಲವಾಗಿದೆ ತನ್ನ ಸಂಸ್ಥೆ ಬಗ್ಗೆ ತಾನು ಮಾನ ಹರಣಮಾಡಿಕೊಂಡಿದೆ. ಒಂದರ ಮೇಲೊಂದರ0ತೆ ರಸ್ತೆಗಳನ್ನು ಹಾಕಿದ್ದು, ಇದು ರಸ್ತೆಗಳ ಎತ್ತರವನ್ನು ಹೆಚ್ಚಿಸಿದೆ. ಎಂಸಿಡಿಯು ಈ ಪ್ರದೇಶದಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಮಳೆ ನೀರಿನ ಚರಂಡಿಗಳಿವೆ ಎಂದು ಖಚಿತಪಡಿಸಿಲ್ಲ ಎಂದು ಕೋರ್ಟ್ ಗಮನಕ್ಕೆ ತಂದಿದೆ.
ಪ್ರಕರಣ ವಿಚಾರಣೆ ಬಳಿಕ ಆದೇಶ ನೀಡಿದ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ನೇತೃತ್ವದ ದ್ವಿ ಸದಸ್ಯ ಪೀಠ, ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಖರ ಉದ್ದೇಶಕ್ಕಾಗಿ ರಚಿತವಾದ ಮುನ್ಸಿಪಲ್ ಕಾರ್ಪೊರೇಷನ್ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಖಾರವಾಗಿ ಎಚ್ಚರಿಕೆ ನೀಡಿದೆ. ಎಂಸಿಡಿ ತನ್ನ ಕಾರ್ಯವೈಖರಿಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವುದರಿಂದ, ಮೇಲ್ಮನವಿದಾರರಿಗೆ ಸಂಪೂರ್ಣ ನ್ಯಾಯ ಒದಗಿಸಬೇಕು.
ಹೀಗಾಗಿ ಪರಿಹಾರ ಹಣವನ್ನು 3 ಲಕ್ಷದಿಂದ 9 ಲಕ್ಷ ರೂ.ಗೆ ಏರಿಸಬೇಕು ಎಂದು ಕೋರ್ಟ್ ಆದೇಶ ನೀಡಿತು. ಈ ರೀತಿಯ ಕಟು ಆದೇಶ ಕೇವಲ ದೆಹಲಿಗೆ ಮಾತ್ರ ಉದಾಹರಣೆಯಲ್ಲ ಬೆಂಗಳೂರಿಗು ಸಹ ಮುಂದಿನ ದಿನಗಳಲ್ಲಿ ರಾಜ್ಯ ಹೃಕೋರ್ಟ್ ಇದೇ ರೀತಿಯ ತೀರ್ಪು ಕೊಟ್ಟರೆ ಆಶ್ಚರ್ಯ ಪಟಬೇಕಾಗಿಲ್ಲ. ನಗರಗಳಲ್ಲಿ ಕಾರ್ಪೋರೇಷನ್ ಎಂಬ ಹೆಸರಿನಿಂದ ಕರೆಸಿಕೊಳ್ಳುವ ಪಾಲಿಕೆಗಳಿಗೆ ಇದು ಮುಂಬರುವ ದಿನಗಳ ಎಚ್ಚರಿಕೆ ಎಂದರು ತಪ್ಪಾಗದು.
Varthajala bilingual daily, Malleshwaram, Bengaluru
0 Comments