ಸೆ. 02, ತಿರುಪತಿ: ಲಂಗ ದಾವಣಿಯಲ್ಲಿ ಮಿಂಚಿದ ಬಾಲಿವುಡ್ ಬೆಡಗಿ ಜಾನ್ವಿ ಕಪೂರ್. ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ರು. ಸದಾ ಜಿಮ್‌ಸೂಟ್ ನಲ್ಲಿ ಸುಂದರವಾಗಿ ಕಾಣುತ್ತಿದ್ದ ಜಾನ್ವಿ ಕಪೂರ್ ಇಂದು ಪಕ್ಕಾ ತೆಲುಗು ಹುಡುಗಿಯಂತೆ ಲಂಗಾ ದಾವಣಿ ಧರಿಸಿದ್ರು. ಟ್ರೆಡಿಷನಲ್ ಲುಕ್ನಲ್ಲಿ ಜಾನ್ವಿ ಸಖತ್ ಆಗಿ ಕಾಣ್ತಿದ್ರು.
ಮೊದಲ ಲೇಡಿ ಸೂಪರ್ ಸ್ಟಾರ್ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ತಿರುಪತಿ ತಿರುಮಲಕ್ಕೆ ಭೇಟಿ ನೀಡಿದ್ರು. ಸದಾ ಜಿಮ್ ಸೂಟ್ ನಲ್ಲಿ ಸುಂದರವಾಗಿ ಕಾಣುತ್ತಿದ್ದ ಜಾನ್ವಿ ಇಂದು ಪಕ್ಕಾ ತೆಲುಗು ಹುಡುಗಿಯಂತೆ ಲಂಗ ದಾವಣಿ ಧರಿಸಿದ್ರು. ಟ್ರೆಡಿಷನಲ್ ಲುಕ್ನಲ್ಲಿ ಜಾನ್ವಿ ಸಖತ್ ಆಗಿ ಕಾಣ್ತಿದ್ರು. ಶುಕ್ರವಾರ ಬೆಳಗ್ಗೆ ಶ್ರೀದೇವಿ ಪುತ್ರಿ ಹಾಗೂ ಬಾಲಿವುಡ್ನ ಜನಪ್ರಿಯ ನಟಿ ಜಾನ್ವಿ ಕಪೂರ್ ತಿರುಮಲದಲ್ಲಿ ಶ್ರೀ ವೆಂಕಟೇಶ್ವರನ ದರ್ಶನ ಪಡೆದರು. ಇಂದು ತಿರುಮಲಕ್ಕೆ ಆಗಮಿಸಿದ ಜಾನ್ವಿ ಕಪೂರ್, ಬೆಳಗ್ಗೆ ವಿಐಪಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ದರ್ಶನ ಪಡೆದ ನಂತರ ರಂಗನಾಯಕುಲ ಮಂಟಪದಲ್ಲಿ ವೇದ ವಿದ್ವಾಂಸರು ವೇದಾಶಿರ್ವಚನ ನೀಡಿ, ದೇವಸ್ಥಾನದ ಅಧಿಕಾರಿಗಳು ಶ್ರೀವಾರಿ ತೀರ್ಥ ಪ್ರಸಾದ ವಿತರಿಸಿದರು. ಲಂಗ ದಾವಣಿಯಲ್ಲಿ ಪಕ್ಕಾ ತೆಲುಗು ಹುಡುಗಿಯಂತೆ ತಿರುಮಲಕ್ಕೆ ಬಂದಿದ್ದ ಜಾನ್ವಿಯನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜಾನ್ವಿ ಕಪೂರ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಜಾನ್ವಿ ಕಪೂರ್ ದೇವಸ್ಥಾನದ ಹೊರಗೆ ಬಂದ ತಕ್ಷಣ ಕಾರು ಹತ್ತಿ ದೇಗುಲದಿಂದ ನೇರವಾಗಿ ಗೆಸ್ಟ್ ಹೌಸ್ ತಲುಪಿದ್ರು. ಮಾಡ್ರೆನ್ ಡ್ರೆಸ್ ಹಾಗೂ ಜಿಮ್ ಸೂಟ್ ನಲ್ಲಿ ಮಿಂಚುತ್ತಿದ ಬಾಲಿವುಡ್ ಬೆಡಗಿ ಈಗ ಸಾಂಪ್ರದಾಯಿಕ ಉಡುಗೆಯಲ್ಲಿ ಸಖತ್ ಬ್ಯುಟಿಫುಲ್ ಆಗಿ ಕಾಣ್ತಿದ್ರು. ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ ಶುಕ್ರವಾರ ಬೆಳಗ್ಗೆ ತಿರುಮಲದಲ್ಲಿ ವೆಂಕಟೇಶ್ವರನ ದರ್ಶನ ಪಡೆದು ವಾಪಸ್ ಆಗಿದ್ದಾರೆ.
Varthajala daily bilingual, Malleshwaram, Bengaluru
0 Comments