ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯ ಅಂಚೆ ಕಚೇರಿ ಹತ್ತಿರ ಇರುವ ಶ್ರೀರಾಮ ಮಂದಿರದಲ್ಲಿ ಸೆಪ್ಟೆಂಬರ್ 10 ರಿಂದ 15ರ ವರೆಗೆ ಪ್ರತಿದಿನ ಸಂಜೆ 6 ರಿಂದ 7 ವಿವಿಧ ಭಜನಾ ಮಂಡಳಿಗಳಿಂದ ಭಜನೆ, 7 ರಿಂದ 8 ಶ್ರೀ ಭೀಮಸೇನಾಚಾರ್ ಅತನೂರ ಇವರಿಂದ ಪ್ರವಚನ.
ವಿಷಯ : "ರಾಮಾಯಣದ ನಿರ್ಣಯಗಳು". ಸೆಪ್ಟೆಂಬರ್ 16, ಶುಕ್ರವಾರ ಸಂಜೆ 6-30ಕ್ಕೆ,
ವಿದುಷಿ ಶ್ರೀಮತಿ ರಜನಿ ಗುರುರಾಜ್ ಇವರಿಂದ "ಹರಿನಾಮ ಸಂಕೀರ್ತನೆ" ವಾದ್ಯ ಸಹಕಾರ : ವಿ|| ಶ್ರೀ ಶಶಿಧರ್ ಪಿಟೀಲು, ವಿ|| ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಮೃದಂಗ.
ಸರ್ವರಿಗೂ ಆದರದ ಸುಸ್ವಾಗತ

0 Comments