ವರದಿ: ಚಿಕ್ಕತೇಕಹಳ್ಳಿ ಡಿ ಶಿವಕುಮಾರ್*
*ವಾರ್ತಾಜಾಲ,ಶಿಡ್ಲಘಟ್ಟ: ನಗರದ ಚಿಂತಾಮಣಿ ರಸ್ತೆಯ ಪಕ್ಕದಲ್ಲಿರುವ ಗೌಡನ ಕೆರೆಯಲ್ಲಿ ಜಾಲಿಮರಗಳು ಮತ್ತು ಒತ್ತುವರಿಯಾಗಿರುವಂತಹ ರಾಜಕಾಲುವೆಗಳನ್ನು ತೆರವುಗೊಳಿಸಬೇಕೆಂದು ಸಾಮೂಹಿಕ ನಾಯಕತ್ವದ ರೈತ ಸಂಘದ ಸದಸ್ಯರು ಜಿಲ್ಲಾಧಿಕಾರಿ ಎನ್ ಎಂ ನಾಗರಾಜ್ ರವರಿಗೆ ಮನವಿ ನೀಡಿದರು.
ಶಿಡ್ಲಘಟ್ಟದಿಂದ ಚಿಂತಾಮಣಿ, ಕೋಲಾರ, ಮತ್ತು ಹೊಸಕೋಟೆಗೆ ಸಂಚರಿಸುವ ರಸ್ತೆ ಮಾರ್ಗದಲ್ಲಿರುವ ಗೌಡನಕೆರೆಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದಾರೆ ಈ ಕೆರಯಲ್ಲಿ ಜಾಲಿ ಮರಗಳು ಬೆಳೆದಿದ್ದು, ಮರಗಳ ತೆರವುಗೊಳಿಸುವುದಕ್ಕೆ ಹಲವು ಬಾರಿ ತಾಲ್ಲೂಕು ಆಡಳಿತಕ್ಕೆ ಮನವಿ ನೀಡಿದರೂ ಇಲ್ಲಿಯವರೆಗೂ ತೆರವುಗೊಳಿಸಲಾಗಿಲ್ಲ.ರಾಜಕಾಲುವೆ ಒತ್ತುವರಿಯಾಗಿ ಮುಚ್ಚಿ ಹೋಗಿದ್ದು,ಮಳೆಯ ನೀರು ರೈತರ ತೋಟಗಳ ಮೇಲೆ ನುಗ್ಗಿ ಅಪಾರ ಬೆಳೆ ನಷ್ಟವಾಗಿವೆ.ಆದಷ್ಟು ಬೇಗ ರಾಜಕಾಲುವೆಗಳನ್ನು ತೆರವುಗೊಳಿಸಿ ಎಂದು ಮನವಿ ನೀಡಿದರು.
ಜಿಲ್ಲಾಧಿಕಾರಿ ಎನ್ ಎಮ್ ನಾಗರಾಜ್ ಮಾತನಾಡಿ ಜಾಲಿ ಮರಗಳನ್ನು ತೆಗೆಸಲು ಕಾನೂನಾತ್ಮಕವಾಗಿ ತೊಡಕು ಇದೆ.ರಾಜಕಾಲುವೆಗಳನ್ನು ತೆರವುಗೊಳಿಸಲಾಗುವುದು. ಜಾಲಿ ಮರಗಳನ್ನು ಹಂತ ಹಂತವಾಗಿ ತೆಗೆಸಲಾಗುವುದು ಎಂದು ತಿಳಿಸಿದರು.ನಂತರ ತಹಶೀಲ್ದಾರ್ ರಾಜೀವ್ ಅವರಿಗೆ ಕೆರೆಯಲ್ಲಿನ ತ್ಯಾಜ್ಯ ತೆಗೆಸಬೇಕು ಹಾಗೇಯೇ ಈ ವೃತ್ತದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಬೇಕೆಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ್ ಬಿಎಸ್ ರಾಜೀವ್ ,ನಗರಸಭಾ ಪೌರಾಯುಕ್ತ ಶ್ರೀಕಾಂತ್,ರೈತರ ಹಕ್ಕು ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಾಬು, ಸಾಮೂಹಿಕ ನಾಯಕತ್ವ ಜಿಲ್ಲಾಧ್ಯಕ್ಷರಾದ ಮನಿಕೆಂಪಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರತೀಶ್ , ಆಂಜಿನಪ್ಪ , ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಅಮರಮ್ಮ, ಕುಮಾರ್, ಅಶ್ವತಪ್ಪ, ಶಾರದಮ್ಮ ಸೇರಿದಂತೆ ಇನ್ನು ಮುಂತಾದವರು ಭಾಗವಹಿಸಿದ್ದರು.

0 Comments