Ticker

6/recent/ticker-posts

Ad Code

Responsive Advertisement

ಕೃಷ್ಣರಾಜ ಕ್ಷೇತ್ರದಲ್ಲಿ ವಿಭಿನ್ನವಾಗಿರುವ ಅಭಿವೃದ್ಧಿ ಪರ್ವ: ಸಿಎಂ ಬೊಮ್ಮಾಯಿ

ಕೃಷ್ಣರಾಜ ಕ್ಷೇತ್ರದಲ್ಲಿ ವಿಭಿನ್ನವಾಗಿರುವ ಅಭಿವೃದ್ಧಿ ಪರ್ವ ಪ್ರಾರಂಭವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿದರು.

ಇಂದು ಮೈಸೂರಿನ ವಿದ್ಯಾರಣ್ಯಪುರ ಉದ್ಯಾನವನದಲ್ಲಿ ಆಯೋಜಿಸಿದ "ಮೋದಿ ಯುಗ್ ಉತ್ಸವ್ - 2022" ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸರ್ಕಾರ ರೂಪಿಸುವ ಅನೇಕ ಜನಪರ ಕಾರ್ಯಕ್ರಮಗಳನ್ನು ಜನಪ್ರತಿನಿಧಿಗಳು ಕೊನೆಯ ಹಂತದವರೆಗೂ ತೆಗೆದುಕೊಂಡು ಹೋಗಿ ಫಲಿತಾಂಶ ತಂದರೆ ಅಭಿವೃದ್ಧಿ ಬೇರೆಯದ್ದೇ ರೀತಿಯಲ್ಲಿ ಇರುತ್ತದೆ. ಮಧ್ಯವರ್ತಿಗಳಿಲ್ಲದೆ ಸರ್ಕಾರದ ಎಲ್ಲ ಯೋಜನೆಗಳನ್ನು ಕ್ಷೇತ್ರದ ಸುಮಾರು 70 ಸಾವಿರ ಮನೆಗಳಿಗೆ ಶಾಸಕ ರಾಮದಾಸ್ ಅವರು ತಲುಪಿಸಿರುವುದು ಭಾರತದಲ್ಲೇ ಒಂದು ದಾಖಲೆ ಎಂದರು. 

ಮೈಸೂರಿಗೆ ತನ್ನದೇ ಆದ ಒಂದು ಪರಂಪರೆ ಇದೆ. ಮೈಸೂರು ಇಂದು ಅಂತರಾಷ್ಟ್ರೀಯ ನಗರವಾಗಿದೆ. ಇದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಇಲ್ಲಿ ಪೈಪೋಟಿಯ ಮೇಲೆ ಅಭಿವೃದ್ಧಿ ಆಗುತ್ತಿದೆ.   ಪ್ರಧಾನಿ ನರೇಂದ್ರ ಮೋದಿ ಜಿ ಅವರ ಎಲ್ಲ ಯೋಜನೆಗಳು ಇಲ್ಲಿ ಸಾಕಾರಗೊಳ್ಳುತ್ತಿದೆ ಎಂದರು.

ಒಬ್ಬ ದಕ್ಷ ಪ್ರಾಮಾಣಿಕ ಪ್ರಧಾನಮಂತ್ರಿ ಏನೆಲ್ಲಾ ಮಾಡಲು ಸಾಧ್ಯ ಅನ್ನೊದಕ್ಕೆ ನರೇಂದ್ರ ಮೋದಿ ಉದಾಹರಣೆ. ಸರ್ಕಾರದ ಸೌಲಭ್ಯಗಳು ಬಡವರಿಗೆ ಹಾಗೂ ರೈತರಿಗೆ ಸಿಗಬೇಕಾದರೆ ಮಧ್ಯವರ್ತಿಗಳು ಇರಬಾರದು ಅನ್ನೋದು ನಮ್ಮ ಪ್ರಧಾನಮಂತ್ರಿ ಮೋದಿ ಅವರ ಉದ್ದೇಶ ಆಗಿದೆ. ಬಡವರಿಗೆ ತಲುಪಬೇಕಿರುವ ಎಲ್ಲಾ ಯೋಜನೆಗಳು ಡಿಜಿಟಲೀಕರಣ ಆಗಿದೆ. ಹಾಗಾಗಿ ಇಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲದೇ ಫಲಾನುಭವಿಗಳ ಖಾತೆಗೇ ಹಣ ಜಮಾ ಆಗುವಂತೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ವ್ಯವಸ್ಥೆಗಳನ್ನು ಬದಲಾವಣೆ ಮಾಡಿ ಸುಧಾರಣೆ ತಂದಿದ್ದಾರೆ. ಆ ಎಲ್ಲ ಸುಧಾರಣೆಗಳನ್ನು ಶಾಸಕ ರಾಮದಾಸ್ ಅವರು ತಮ್ಮ ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.

*ಘೋಷಣೆಗಳಿಂದ ಬಡತನ ನಿರ್ಮೂಲನೆ ಆಗೋಲ್ಲ*

ಕೇವಲ ಘೋಷಣೆಗಳಿಂದ ಬಡತನ ನಿರ್ಮೂಲನೆ ಆಗೋಲ್ಲ, ಸಾಮಾಜಿಕ ನ್ಯಾಯ ಸಿಗೋಲ್ಲ. ಈ ಹಿಂದೆ ಒಂದು ರಾಜಕೀಯ ಪಕ್ಷ ಬರೀ ಘೋಷಣೆಗಳ ಮುಖಾಂತರ ದೇಶವನ್ನು ಆಳುವ ಪ್ರಯತ್ನ ಮಾಡಿದರು. ಗರೀಬಿ ಹಠಾವೋ  ಮಾಡಿ ಅದರ ಮೇಲೆ ಚುನಾವಣೆ ಗೆದ್ದರು. ಘೋಷಣೆ ಮೂಲಕ ಅಧಿಕಾರಕ್ಕೆ ಬಂದವರು ತಮ್ಮ ಬಡತನ ಹೋಗಲಾಡಿಸಿಕೊಂಡರು ಅಷ್ಟೇ ಹೊರತು ದೇಶದ ಬಡತನ ಹೋಗಿಲ್ಲ. ಇದು ಸಾಮಾಜಿಕ ನ್ಯಾಯ ಘೋಷಣೆಗೂ ಅನ್ವಯ ಆಗುತ್ತೆ. ಹಿಂದುಳಿದ ವರ್ಗದವರು ಇನ್ನೂ ಹಿಂದೆ ಇದ್ದಾರೆ. ಇದೆಲ್ಲವೂ ನಾವು‌ ನೋಡಿಕೊಂಡು ಬಂದಿರುವುದು ಎಂದು ಮುಖ್ಯಮಂತ್ರಿಗಳು ಹೇಳಿದರು.

ಜನ ಈಗ ಜಾಗೃತರಾಗಿದ್ದಾರೆ. ಯೋಜನೆಗಳು ತಮ್ಮನ್ನ ತಲುಪಿದೆಯೇ ಎಂಬುದು ಮೊಬೈಲ್ನಲ್ಲೇ ಗೊತ್ತು ಮಾಡಿಕೊಳ್ಳುತ್ತಾರೆ. ಯುವಕರು ಮತ್ತು ಮಹಿಳೆಯರ ವರ್ಗಕ್ಕೆ ಶಕ್ತಿ ತುಂಬಿದರೆ ಇಡೀ ದೇಶಕ್ಕೆ ಶಕ್ತಿ ತುಂಬಿದ ಹಾಗೆ ಆಗುತ್ತೆ. ಅದಕ್ಕಾಗಿ ಸ್ತ್ರೀಶಕ್ತಿ ಸಂಘಗಳು ಮತ್ತು ವಿವೇಕಾನಂದ ಯುವಕ ಸಂಘಗಳಿಗೆ ಯೋಜನೆಗಳನ್ನು ರೂಪಿಸಿ ಕೊಟ್ಟಿದ್ದೇವೆ. ಯುವಕರಲ್ಲಿ ಸಾಮರ್ಥ್ಯ ಇದೆ. ಮಹಿಳೆಯರು ಅವಕಾಶ ವಂಚಿತರಾಗಿದ್ದಾರೆ. ಅವರಿಗೆ ಅವಕಾಶ ಕೊಟ್ಟರೆ ಸ್ವಾವಲಂಬಿಗಳಾಗುತ್ತಾರೆ. ಈ ಮೂಲಕ ತಲವಾರು ಆದಾಯ ಹೆಚ್ಚಾದರೆ ರಾಜ್ಯದ ಜಿಡಿಪಿಯು ಉತ್ತಮಗೊಳ್ಳುತ್ತದೆ ಎಂದು ಮುಖ್ಯಮಂತ್ರಿಗಳು ಹೇಳಿದರು. 

*ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವುದು ಯಾವ ಶೂರತನ*

ಇದೇ ಸಂದರ್ಭದಲ್ಲಿ ಪ್ರತಿಪಕ್ಷಗಳ ಅಭಿಯಾನದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಮಾತನಾಡದೆ ಗೋಡೆಗಳ ಮೇಲೆ ಪೋಸ್ಟರ್ ಅಂಟಿಸುವುದು ಯಾವ ಶೂರತನ ಎಂದು ಕಿಡಿ ಕಾರಿದರು. ಕನ್ನಡ ನಾಡಿನ ಜನತೆ ಇದನ್ನ ಸ್ವೀಕಾರ ಮಾಡಲ್ಲ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಒಳ್ಳೆತನಕ್ಕೆ ಮಾತ್ರ ಇರುತ್ತದೆ. ಆ ತಾಯಿ ಶಿಷ್ಟರ ರಕ್ಷಿಸಿ ದುಷ್ಟರ ಸಂಹಾರ ಮಾಡುತ್ತಾಳೆ‌ ಎಂದು ಮುಖ್ಯಮಂತ್ರಿಗಳು ಹೇಳಿದರು. 

ಕಾರ್ಯಕ್ರಮದಲ್ಲಿ ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ಸೇರಿದಂತೆ ಅನೇಕ‌ ಗಣ್ಯರು ಉಪಸಿತರಿದ್ದರು.

Post a Comment

0 Comments

Ad Code

Responsive Advertisement