ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮಮಂದಿರದ ಶತಮಾನೋತ್ಸವ ಸಮಾರಂಭವು ಸೆಪ್ಟೆಂಬರ್ 26, ಸೋಮವಾರ ಸಂಜೆ ಜರುಗಿತು.
ಈ ಸಮಾರಂಭವು ಉದ್ಘಾಟನೆಯನ್ನು ಶ್ರೀ ಶ್ರೀ ಯತಿರಾಜ ನಾರಾಯಣ ರಾಮಾನುಜಂ ಜೀಯರ್ ಹಾಗೂ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿಗಳು ಇವರ ಅಮೃತ ಹಸ್ತದಿಂದ ನೆರವೇರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀ ಜಿ. ಮಂಜುನಾಥರಾಜು (ಮಾಜಿ ಸದಸ್ಯರು, ಬೃ.ಬೆಂ.ಮ.ಪಾಲಿಕೆ) ಇವರು ಆಗಮಿಸಿದ್ದರು. ಶತಮಾನೋತ್ಸವ ಸಂದರ್ಭದಲ್ಲೇ ಈ ವರ್ಷದ ಶರನ್ನವರಾತ್ರಿ ಮಹೋತ್ಸವವೂ ಸೇರಿರುವುದರಿಂದ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 5ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಮೊದಲ ದಿನವಾದ ಇಂದು ವಿ|| ಶ್ರೀಧರ್ ಸಾಗರ್ ಮತ್ತು ಸಂಗಡಿಗರಿಂದ "ಸ್ಯಾಕ್ಸೋಫೋನ್" ವಾದನ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.


0 Comments