Ticker

6/recent/ticker-posts

Ad Code

Responsive Advertisement

ಭಜರಂಗಿ ಬಾಯ್ಸ್ ಬಳಗದಿಂದ ಗಣಪತಿ ವಿಸರ್ಜನೆ

 ಭಜರಂಗಿ ಬಾಯ್ಸ್ ಬಳಗದಿಂದ ಗಣಪತಿ ವಿಸರ್ಜನೆ


ವಾರ್ತಾ ಜಾಲ ಸುದ್ದಿ ಮಧುಗಿರಿ: ತಾಲೂಕಿನ ಪುರವರ ಹೋಬಳಿಯ ಹಳೆ ತಿಮ್ಮನಹಳ್ಳಿ ಗ್ರಾಮದಲ್ಲಿ ಭಜರಂಗಿ ಬಾಯ್ಸ್  ಬಳಗದಿಂದ ಆಯೋಜಿಸಿದ್ದ, ಗಣೇಶ ವಿಶೇಷ ಹಬ್ಬವನ್ನು ಸುಮಾರು ಐದು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸಿ ಪ್ರತಿದಿನ ಒಂದೊಂದು ಕಾರ್ಯಕ್ರಮವನ್ನು ಕೂಡ ಏರ್ಪಡಿಸಿದ್ದು ಸಾಂಸ್ಕೃತಿಕ ಕಾರ್ಯಕ್ರಮ ರಂಗೋಲಿ ಸ್ಪರ್ಧೆ ಕಾರ್ಯಕ್ರಮ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಪ್ರತಿದಿನವೂ ಕೂಡ ಅನ್ನ ಸಮರ್ಪಣೆ ಇದ್ದು ಕೊನೆ ದಿನ ವಿಶೇಷ  ಮೆರವಣಿಗೆಯೊಂದಿಗೆ ಗ್ರಾಮದ ಯುವಕರು ಹಾಗೂ ಗ್ರಾಮಸ್ಥರು  ವಿನಾಯಕನನ್ನು ಪೂಜಿಸಿ ನಂತರ, ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಊರಿನ ಗ್ರಾಮಸ್ಥರು ಹಾಗೂ ಪಕ್ಕದೂರಿನ ಗ್ರಾಮಸ್ಥರು ಗಣೇಶನಿಗೆ ವಿಶೇಷ ಪೂಜಾರತಿಗಳನ್ನು

ಮಾಡಿಸುವುದರ ಮೂಲಕ ಸ್ವಾಗತಿಸಿ, ಶ್ರದ್ಧಭಕ್ತಿಯಿಂದ ಬೀಳ್ಕೊಟ್ಟರು. ಅದ್ದೂರಿ ಮೆರವಣಿಗೆಯಲ್ಲಿ ನಾಸಿಕ್ ಡೋಲ್ ಸದ್ದಿಗೆ ಮಕ್ಕಳು,ಯುವಕರು ಹಾಗೂ ಯುವತಿಯರು  ಸಂಭ್ರಮದಿಂದ ಕುಣಿದು  ಕುಪ್ಪಳಿಸಿದರು. ತದನಂತರ ಪಕ್ಕದ ಗ್ರಾಮದ ಕೆರೆಯ ಹೊಂಡದಲ್ಲಿ ಗಣೇಶನನ್ನು ಶ್ರದ್ದಾ ಭಕ್ತಿಯಿಂದ ವಿಸರ್ಜನೆ ಮಾಡಲಾಯಿತು. ಈ ವೇಳೆಯಲ್ಲಿ ಪೂಜಾರಾದ ಪ್ರಸನ್ನ ಕುಮಾರ್ ಭಜರಂಗಿ ಬಾಯ್ಸ್ ಬಳಗದ ಆನಂದ್, ಪತ್ರಕರ್ತರಾದ ನಾಗೇಶ್ ಜೀವಾ, ಶಿಕ್ಷಕರಾದ ಸಾನಂದ ಕುಮಾರ್, ಮಂಜುನಾಥ್, ಮಲೆರಂಗ, ವಸಂತ, ಉದಯ, ದಿಲೀಪ್, ಗಜೇಂದ್ರ, ಕಿರಣ್, ರಮೇಶ್, ಶಿವಕುಮಾರ್ ರವಿಕುಮಾರ್, ಶಿವಣ್ಣ, ದುಶಾಂತ, ಅಪ್ಪು, ಹಾಗೂ ಬಳಗದ ಎಲ್ಲಾ ಸ್ನೇಹಿತರು ಗ್ರಾಮಸ್ಥರು ಮತ್ತಿತರರಿದ್ದರು.

ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement