"ಶ್ರೀ ಅನಂತ ಪದ್ಮನಾಭ ವ್ರತ ಪೂಜೆ -108 ದಂಪತಿಗಳಿಂದ ಶ್ರೀಗುರುರಾಯರ ಸನ್ನಿಧಿಯಲ್ಲಿ" ಬೆಂಗಳೂರಿನ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ108 ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದಂಗಳವರ ಆದೇಶ ಅನುಗ್ರಹದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕ ರಾದ ಆರ್ ಕೆ ವಾದಿಂದ್ರ ಆಚಾರ್ಯರ ನೇತೃತ್ವದಲ್ಲಿ ಶ್ರೀ "ಅನಂತ ಪದ್ಮನಾಭ ವ್ರತ"ಕಲಶ ದೋರ ಗ್ರಂಥಿ ಪೂಜೆಯೊಂದಿಗೆ ಪೂಜೆಯನ್ನು ಶ್ರೀ ಕೃಷ್ಣ ಗುಂಡಾ- ಚಾರ್ಯರು ನೆರವೇರಿಸಿದರು.
ರಾಜಾ ಬಂಡಿ ಆಚಾರ್ಯರು ಹಾಗೂ ನೂರಾರು ಭಕ್ತರಿಂದ ಕಳಶಗಳಲ್ಲಿ ಶ್ರೀ ಅನಂತ ಪದ್ಮನಾಭ ವ್ರತ ಪೂಜೆಯನ್ನು ಸಾಮೂಹಿಕವಾಗಿ ಪೂಜಿಸಿ ಶ್ರೀ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು ಎಂದು ಶ್ರೀ ನಂದಕಿಶೋರ್ ಆಚಾರ್ಯರು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀಪಾದ ಆಚಾರ್ಯ, ರಾಮಚಂದ್ರ ಆಚಾರ್ಯ, ಕೃಷ್ಣ ಆಚಾರ್ಯ, ಪ್ರಮೋದ ಆಚಾರ್ಯ, ಹಾಗೂ ಶ್ರೀಮಠದ ಸಿಬ್ಬಂದಿ ಮತ್ತು ಭಕ್ತರು ಭಾಗವಹಿಸಿದ್ದರು.

0 Comments