Ticker

6/recent/ticker-posts

Ad Code

Responsive Advertisement

ಸಾವರ್ಕರ್ ಭಾರತ ಕಂಡ ಅತ್ಯಂತ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ

ವರದಿ: ಚಿಕ್ಕತೇಕಹಳ್ಳಿ ಡಿ ಶಿವಕುಮಾರ್

*ವಾರ್ತಾಜಾಲ,ಶಿಡ್ಲಘಟ್ಟ:

ವೀರ ಸಾವರ್ಕರ್ ಭಾರತ ಕಂಡ ಅತ್ಯಂತ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ.ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟ ಮಾಡಿದವರು.ಹತ್ತು ವರ್ಷಗಳ ಕಾಲ ಜೈಲಿನಲ್ಲಿದ್ದು ಚಿತ್ರಹಿಂಸೆ ಅನುಭವಿಸಿದವರು. ಅವರ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡಲಾಗುತ್ತಿದೆ. ಇದು ಸರಿಯಲ್ಲ ಈಗಲೂ ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಆಂಜನೇಯಗೌಡ ಹೇಳಿದರು. 



ನಗರದ ವೆಂಕಟೇಶ್ವರ ಚಿತ್ರಮಂದಿರದ ಮುಂಭಾಗ ಬಿಜೆಪಿ ವತಿಯಿಂದ ಗೌರಿ ಗಣೇಶೋತ್ಸವ ಅಂಗವಾಗಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ ಸಂಘ ಸಂಸ್ಥೆಗಳಿಗೆ ಧನಸಹಾಯ ವಿತರಿಸಿ 'ವೀರ ಸಾವರ್ಕರ್' ಫೋಟೋ ಬ್ಯಾನರ್ ನೀಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಹೋರಾಟಗಾರರನ್ನು ಸ್ಮರಿಸುವುದು ಪ್ರತಿಯೊಬ್ಬರ ಕರ್ತವ್ಯ. ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ ಮಾಡುವುದು, ಕೆಟ್ಟದಾಗಿ ಹೇಳುವುದು, ಇತಿಹಾಸ ತಿರುಚುವ ಕೆಲಸ ಮಾಡಲಾಗುತ್ತಿದೆ. ವೀರ ಸಾವರ್ಕರ್ ಎಂದರೆ ದೊಡ್ಡ ಶಕ್ತಿ. ಅವರೊಬ್ಬ ದೇಶಪ್ರೇಮಿ.ಅಟಲ್ ಬಿಹಾರ್ ವಾಜಪೇಯಿ ಅವರು ವೀರ ಸಾವರ್ಕರ್ ಬಗ್ಗೆ ಮಾತನಾಡಿರುವ ಮಾತುಗಳು ಇಂದಿಗೂ ಸ್ಫೂರ್ತಿದಾಯಕ. ಆ ಮಾತು ಕೇಳುತ್ತಿದ್ದರೆ ಸಾವರ್ಕರ್ ವ್ಯಕ್ತಿತ್ವ, ಹೋರಾಟದ ಬದುಕು ತಿಳಿಯುತ್ತದೆ ಎಂದು ಹೇಳಿದರು. 

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರ ಗೌಡ ಮಾತನಾಡಿ ಸಾವರ್ಕರ್ ಅವರನ್ನು ಸ್ಮರಿಸಿಕೊಳ್ಳುವ, ತ್ಯಾಗ, ಬಲಿದಾನದ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಸಂಘ ಸಂಸ್ಥೆಗಳಿಗೆ, ಯುವಕರಿಗೆ ಬಿಜೆಪಿ ವತಿಯಿಂದ ಧನಸಹಾಯ ಹಾಗೂ ಸಾವರ್ಕರ್ ನೀಡುವ  ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಾತಂತ್ರ್ಯ ವೀರ ವೀರ ಸಾವರ್ಕರ್ ಹೋರಾಟ ಯಾವ ರೀತಿಯಲ್ಲಿ ಇತ್ತು. ಸುಭಾಷ್ ಚಂದ್ರ ಭೋಸ್ ಅವರಿಗೂ ಪ್ರೇರಣೆ ಆಗಿದ್ದರು. ಬಾಲಗಂಗಾಧರ ತಿಲಕ್ ಅವರು ಗಣೇಶೋತ್ಸವ ಶುರು ಮಾಡಿದರು.ಸಾವರ್ಕರ್ ಅವರ ಭಾವಚಿತ್ರಗಳನ್ನು ಮನೆಯಲ್ಲಿ ಇಡಲು ಇಷ್ಟಪಟ್ಟರೆ  ಉಚಿತವಾಗಿ ನೀಡುತ್ತೇವೆ. ನಾಡಿನ ಯುವಕರಿಗೆ ಸ್ಫೂರ್ತಿ ಎಂದರು. 

ಗಣಪತಿ ಮೂರ್ತಿ ಪ್ರತಿಷ್ಠಾಪಿಸುವ 20ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿಗೆ ಹಾಗೂ ಯುವಕರಿಗೆ ಸಹಾಯಧನ ನೀಡಿದರು. 

ಈ ಸಂದರ್ಭದಲ್ಲಿ ನಗರ ಪ್ರಾಧಿಕಾರದ ಅಧ್ಯಕ್ಷ ಬಿಸಿ ನಂದೀಶ್, ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ಅರಿಕೆರೆ  ಮುನಿರಾಜು,ಬಜರಂಗದಳ ತಾಲ್ಲೂಕು ಸಮಾಜಕ ವೆಂಕಟೇಶ್, ಬಜರಂಗದಳ ಸಹ ಸಂಯೋಜಕ ರಂಜಿತ್,ಇನ್ನು ಹಲವಾರು ಬಿಜೆಪಿ ಮುಖಂಡರುಗಳು ಹಾಜರಿದ್ದರು.

Post a Comment

0 Comments

Ad Code

Responsive Advertisement