ಬೆಂಗಳೂರು : ಪ್ರಪಂಚಾದ್ಯಂತ ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತಿರುವ ಗೌರಿ ಗಣೇಶ ಹಬ್ಬದ ಈ ಶುಭ ಸಂದರ್ಭದಲ್ಲಿ, ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಸರ್ಕಾರಿ ಶಾಲೆಯಲ್ಲಿ ಸಚಿವರು ಹಾಗೂ ಸ್ಥಳೀಯ ಶಾಸಕರು ಆಗಿರುವ ಡಾ. ಸಿ.ಎನ್. ಅಶ್ವತ್ಥನಾರಾಯಣರವರ ನಿರ್ದೇಶಾನುಸಾರ, ಸಮಾಜ ಸೇವಕರಾದ ಸುರೇಶ್ ಗೌಡರವರ ಸಹಕಾರದೊಂದಿಗೆ, ಬಿಜೆಪಿ ಬೆಂಗಳೂರು ನಗರ ಉತ್ತರ ಜಿಲ್ಲಾ ಉಪಾಧ್ಯಕ್ಷ ಡಾ. ವಾಸುದೇವ್ ಅವರ ಮಾರ್ಗದರ್ಶನದಲ್ಲಿ, ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಧ್ಯಕ್ಷರಾಗಿರುವ ಕಾವೇರಿ ಕೇದಾರನಾಥರವರ ಸಹಕಾರದೊಂದಿಗೆ, ಬೆಂಗಳೂರು ನಗರ ಬಿಜೆಪಿ ಉತ್ತರ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ಲಯನ್ಸ್ ಕ್ಲಬ್ ಕಾವೇರಿ ಅಧ್ಯಕ್ಷರಾದ ಲಯನ್ ಎನ್.ಆರ್. ಪರಮೇಶ್ವರಯ್ಯನವರು ಹಾಗೂ ಲಯನ್ ಡಾ. ಜಿ.ಎಸ್.ಚೌಧರಿರವರ ಉಪಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಕಾವೇರಿ ಹಾಗೂ ಶ್ರೀ ಜಗದ್ಗುರು ಫೌಂಡೇಷನ್ ವತಿಯಿಂದ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಬಗ್ಗೆ ಹೆಚ್ಚಿನ ಅರಿವು ಹಾಗೂ ನಿರ್ಮಲ ಪರಿಸರವನ್ನು ಕಾಪಾಡುವ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ಸಂಬಂಧವಾಗಿ, ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಅಗತ್ಯ ಜೇಡಿ ಮಣ್ಣು ಹಾಗೂ ಇತರೆ ಸಾಮಗ್ರಿಗಳನ್ನು ಸಂಸ್ಥೆಯ ವತಿಯಿಂದ ಉಚಿತವಾಗಿ ಒದಗಿಸಿ, ಸ್ಥಳದಲ್ಲೇ ಗಣಪನ ಮೂರ್ತಿಗಳನ್ನು ನಿರ್ಮಿಸುವ ಸ್ಪರ್ಧೆಯನ್ನು ಸಹ ಏರ್ಪಡಿಸಲಾಗಿತ್ತು,
ಉತ್ಸಾಹದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ತಮ್ಮಲ್ಲಿರುವ ಕೌಶಲ್ಯತೆ ಹಾಗೂ ಪ್ರತಿಭೆಯನ್ನು ಒರೆಗಚ್ಚಲು
ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು. ಅತ್ಯುತ್ತಮ ವಿಗ್ರಹಗಳನ್ನು ನಿರ್ಮಿಸಿದ ಮಕ್ಕಳಿಗೆ ಈ ವೇಳೆ ಬಹುಮಾನವನ್ನು ಸಹ ನೀಡುವುದರೊಂದಿಗೆ, ಭಾಗವಹಿಸಿದವರೆಲ್ಲರಿಗೂ ಸಿಹಿ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಲಯನ್ ಸಿ.ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.






0 Comments