ಬೆಂಗಳೂರು : ನಗರದ ಸದಾಶಿವನಗರದ ನಾಗಸೇನಾ ವಿದ್ಯಾಲಯದ ವತಿಯಿಂದ ಶಾಲಾ ಆವರಣದಲ್ಲಿ ಏರ್ಪಡಿಸಲಾಗಿದ್ದ 'ಭಾರತೀಯ ಬೌದ್ಧರು ಎದುರಿಸುತ್ತಿರುವ ಸವಾಲುಗಳು'
ಎಂಬ ವಿಷಯದ ಕುರಿತಾದ ಅರ್ಥಪೂರ್ಣವಾದ ಸಂವಾದ ಕಾರ್ಯಕ್ರಮವು ಪೂಜ್ಯ ಭಿಕ್ಕುಣಿ ಬುದ್ಧಮ್ಮರವರ ಘನ ಉಪಸ್ಥಿತಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ರವರ ಮೊಮ್ಮಗಳಾಗಿರುವ ರಮಾಬಾಯಿ ಡಾ. ಆನಂದ್ ತೇಲ್ತುಂಬ್ಡೆರವರು ಪಾಲ್ಗೊಂಡು, ಸಭಿಕರ ಪ್ರಶ್ನೆಗಳು ಹಾಗೂ ಸಂದೇಹಗಳಿಗೆ ಉತ್ತರಿಸಿ, ಬಾಬಾ ಸಾಹೇಬರ ಆದರ್ಶ, ವಿಚಾರ, ಸಂಕಲ್ಪಗಳ ಮಹತ್ವವನ್ನು ಸರಳ ಮಾತುಗಳೊಂದಿಗೆ ಅವರ ಸ್ವಅನುಭವ ಹಾಗೂ ಅನಿಸಿಕೆಗಳು ಅನೇಕ ವಿಚಾರಗಳ ಬಗ್ಗೆ ಬೆಳಕು ಚೆಲ್ಲಿದರು. ಈ ಸಂದರ್ಭದಲ್ಲಿ ನಾಗಸೇನಾ ವಿದ್ಯಾಲಯದ ಅಧ್ಯಕ್ಷರಾದ ಡಾ. ಎಂ.ವೆಂಕಟಸ್ವಾಮಿ, ಶಹಪುರ ಬೌದ್ಧ ವಿಹಾರ ಧಮ್ಮಾಚಾರಿ ದೇವೇಂದ್ರ ಹೆಗಡೆ ಬೌದ್ಧ್, ಡಿಸಿಪಿ ಡಾ.ಸಿದ್ಧರಾಜುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೆ.ಟಿ. ವಿಜಯಕುಮಾರ್, ಶಶಿಕಿರಣ್, ಮುನಿರಾಮು ಪಿ ನಾಗರಾಜ್ ರವರು ಪಾಲ್ಗೊಂಡಿದ್ದ ಈ ಸಂವಾದ ಕಾರ್ಯಕ್ರಮದಲ್ಲಿ, ರಾಜ್ಯದ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದ ಬೌದ್ಧ ಅನುಯಾಯಿಗಳು ಭಾಗವಹಿಸಿದ್ದರು.



0 Comments