Ticker

6/recent/ticker-posts

Ad Code

Responsive Advertisement

ಮಧುಗಿರಿ ಶೈಕ್ಷಣಿಕ ಜಿಲ್ಲೆಯಲ್ಲೇ ದುರಸ್ತಿ ಕಾಣದ ಸರ್ಕಾರಿ ಶಾಲೆ

ವಾರ್ತಾಜಾಲ ಸುದ್ದಿ ಮಧುಗಿರಿ: ತಾಲೂಕಿನ ದೊಡ್ಡೇರಿ ಹೋಬಳಿಯ ರಂಗಾಪುರ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕೊನ್ನಹಳ್ಳಿಯಲ್ಲಿ ಕೊಠಡಿಗಳು ಇದ್ದರು ಕೂಡ ಇಲ್ಲದಂತಾಗಿರುವುದು ಇಲ್ಲಿ ಕಾಣಬಹುದು

ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಕುಳಿತುಕೊಂಡು  ಪಾಠ ಪ್ರವಚನ ಕೇಳಲು ಆಗುತ್ತಿಲ್ಲ. ಏಕೆಂದರೆ ಪ್ರತಿದಿನ ವರುಣನ ಆರ್ಭಟ ದಿನೇ ದಿನೇ ಹೆಚ್ಚುತ್ತಿದು ಎಲ್ಲ ಶಾಲಾ ಕೊಠಡಿಗಳು ಸೋರುತ್ತಿರುವುದರಿಂದ ಮಕ್ಕಳು ಕೊಠಡಿಗಳಲ್ಲಿ ಕುಳಿತುಕೊಳ್ಳಲು ಆಗದೆ ನಿಂತುಕೊಂಡೇ ಪಾಠ ಪ್ರವಚನ ಕೇಳುವ ಪರಿಸ್ಥಿತಿ ಉಂಟಾಗಿದೆ ಕಾರಣ ಕೊಠಡಿಗಳಲ್ಲಿ ನೀರಿದ್ದು ಮತ್ತು ಈ ಕೊಠಡಿಗಳು ತುಂಬಾ ಶಿಥಿಲ ವ್ಯವಸ್ಥೆಯಲ್ಲಿದೆ ಎಂದ ವಿದ್ಯಾರ್ಥಿಗಳು.


ತಕ್ಷಣ ನಮಗೆ ಈ ಕಟ್ಟಡಗಳನ್ನು ದುರಸ್ತಿ ಮಾಡಿಸಿಕೊಡಿ ಎಂದು ವಿದ್ಯಾರ್ಥಿಗಳು ಈ ಮೂಲಕ ಮನವಿ ಮಾಡಿದರು.




ಈ ವಿಚಾರವಾಗಿ ಎಸ್ ಡಿ ಎಂ ಸಿ ಅಧ್ಯಕ್ಷರಾದ  ಕಾಂತರಾಜು ನವರು ಇಲ್ಲಿ ಒಂದರಿಂದ ಏಳನೇ ತರಗತಿವರೆಗೆ ಶಾಲೆಯಿದು ವಿದ್ಯಾರ್ಥಿಗಳಿಗೆ ಐದು ಕೊಠಡಿಗಳು ಇದ್ದು ಅದರಲ್ಲಿ ಮೂರು ಕೂಠಡಿಗಳು ಸ್ವಲ್ಪವೇ ಸ್ವಲ್ಪ ಚೆನ್ನಾಗಿತ್ತು ಇನ್ನೆರಡು ಕೊಠಡಿಗಳು ತುಂಬಾ ದುಸ್ಥಿತಿಯಲ್ಲಿದೆ ಎಂದರು.

 ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಜ್ಯೋತಿರವರು ಮಾತನಾಡುತ್ತಾ ಮಕ್ಕಳಿಗೆ ಕೊಠಡಿ ಗಳಿಂದ ಯಾವುದೇ ತೊಂದರೆ ಆಗಬಾರದೆಂದು ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜನ ಪ್ರತಿನಿಧಿಗಳಿಗೆ ತಿಳಿಸಿ ತಮ್ಮ ಅನುದಾನದಲ್ಲಿ ಅನುದಾನವನ್ನು ಬಿಡುಗಡೆ ಮಾಡಿ  ಕೊಠಡಿ ಗಳನ್ನು ಮಾಡಿಕೊಡಬೇಕೆಂದು ಕೋರುತ್ತೇನೆ ಎಂದು ತಿಳಿಸಿದರು.

ಊರಿನ ವಿದ್ಯಾರ್ಥಿ ಪೋಷಕರಾದ ರಾಜಣ್ಣನವರು ಮಾತನಾಡುತ್ತಾ ಈ ಒಂದು ಶಾಲೆಯ ತುಂಬಾ ದೋಸ್ತಿತಿಯಲ್ಲಿದ್ದು ಮಕ್ಕಳು ವಿದ್ಯಾಭ್ಯಾಸ ಮಾಡಲು ತುಂಬಾ ಭಯಭೀತರಾಗಿರುತ್ತಾರೆ ಏಕೆಂದರೆ ಇರುವ  ಕೊಠಡಿಗಳು ತುಂಬಾ ಶಿಥಿಲವಾಗಿದ್ದು ಮಳೆ ಬಂದರೆ ನೀರು ಕೊಠಡಿಗಳಲ್ಲಿ ನಿಲ್ಲುತ್ತವೆ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಆಗುವುದಿಲ್ಲ ಆದ್ದರಿಂದ ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಯಾವುದಾದರೂ ಒಂದು ಅನುದಾನವನ್ನು ಶೀಘ್ರವಾಗಿ ಬಿಡುಗಡೆ ಮಾಡಿ ಮಕ್ಕಳ ಹಿತದೃಷ್ಟಿಯಿಂದ ಆದಷ್ಟು ಬೇಗನೆ ದುರಸ್ತಿ ಮಾಡಿ ಕೊಡಬೇಕೆಂದು ಜನಪ್ರತಿನಿಧಿಗಳಲ್ಲಿ ಮತ್ತು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿರುತ್ತಾರೆ. 

ವರದಿ:ನಾಗೇಶ್ ಜೀವಾ  ವಾರ್ತಾ ಜಾಲ 

Post a Comment

0 Comments

Ad Code

Responsive Advertisement