Ticker

6/recent/ticker-posts

Ad Code

Responsive Advertisement

ಮಧುಗಿರಿ:ವರುಣನ ಆರ್ಭಟಕ್ಕೆ ತತ್ತರಿಸಿದ ಜನತೆ.

ವಾರ್ತಾ ಜಾಲ ಸುದ್ದಿ ಮಧುಗಿರಿ: ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸುತ್ತಮುತ್ತಲಿನ ಕೆರೆ ಕುಂಟೆ ಬಾವಿಗಳು ತುಂಬಿ ಹರಿಯುತ್ತಿವೆ. ವರುಣನ ಆರ್ಭಟ ದಿನೇ ದಿನೇ ಹೆಚ್ಚಾಗುತ್ತಿದೆ. ಇದರಿಂದಾಗಿ ಕುಗ್ರಾಮಗಳಲ್ಲಿರುವ ಸಾರ್ವಜನಿಕರು ಹಳ್ಳಗಳನ್ನು ದಾಟಿ ರಸ್ತೆ ಸಂಪರ್ಕಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಆದರೆ ಕೆಲವೊಂದು ಕುಗ್ರಾಮಗಳ ಹಳ್ಳಗಳು ಜೋರಾಗಿ ಹರಿಯುತ್ತಿರುವ ಕಾರಣ ಹಳ್ಳಗಳನ್ನು ದಾಟಲಾಗದೆ ತಮ್ಮ-ತಮ್ಮ ಹಳ್ಳಿಗಳಲ್ಲಿಯೇ ಉಳಿದುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ. 

ಮಧುಗಿರಿ ತಾಲೂಕಿನ ಪುರವರ ಹೋಬಳಿಯ ಕೊಡ್ಲಾಪುರ ಮತ್ತು ಪುರವರ ಮುಖ್ಯ ರಸ್ತೆಯ ಮೇಲೆ ಹರಿಯುವ  ಹುಲಿ ಹಳ್ಳ ಮತ್ತು ದೊಡ್ಡ ಹಳ್ಳಗಳು ರಸ್ತೆಯನ್ನು ಸಂಪೂರ್ಣವಾಗಿ ಆವರಿಸಿಕೊಂಡಿದ್ದು, ಈ ಹಳ್ಳದ ಸುತ್ತ ಮುತ್ತಲಿನ ಸುಮಾರು 8ರಿಂದ10 ಹಳ್ಳಿಗಳು ಇದ್ದು ಈ ಹಳ್ಳ ಹರಿಯುವಷ್ಟು ದಿನ ಗ್ರಾಮಸ್ಥರು ತಮ್ಮ ತಮ್ಮ ಹಳ್ಳಿಗಳಲ್ಲಿಯೇ ಇರಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ . ನೀರಿನ ಒಳಹರಿವು ಹೆಚ್ಚಿರುವ ಕಾರಣ ರಸ್ತೆಯನ್ನು ದಾಟಲಾಗದೆ ಸಾರ್ವಜನಿಕರು ಹಳ್ಳಗಳ ದಂಡೆಗಳಲ್ಲಿ ಉಳಿದುಕೊಂಡು, ತುಂಬಿಹರಿಯುತ್ತಿರುವ ಹಳ್ಳವನ್ನು ವೀಕ್ಷಿಸುತ್ತಿದ್ದಾರೆ. ಭೂತಾಯಿ ತಂಪು ಗೊಂಡಿದ್ದು ವರುಣನ ಕೃಪಾಕಟಾಕ್ಷ ಜನರಲ್ಲಿ ಹರ್ಷವನ್ನುಂಟು ಮಾಡಿದೆ. ಇದರಿಂದಾಗಿ ಕೆಲವೆಡೆ ಈಗ ತಾನೆ ಇಟ್ಟಿರುವ ಬೆಳೆ ಹಾನಿಯಾದರೂ ಕೂಡ ,ಮೂರು ನಾಲ್ಕು ವರ್ಷಗಳವರೆಗೆ ವ್ಯವಸಾಯ ಮಾಡಲು ಅನುಕೂಲವಾಗಿದೆ ಎಂದು ಕೆಲ ರೈತರು ತಿಳಿಸಿದ್ದಾರೆ.

ವರದಿ:ನಾಗೇಶ್ ಜೀವಾ ಮಧುಗಿರಿ.

ವಾರ್ತಾಜಾಲ.

Post a Comment

0 Comments

Ad Code

Responsive Advertisement