Ticker

6/recent/ticker-posts

Ad Code

Responsive Advertisement

ಸೇತುವೆ ದಾಟಲು ದುಸ್ಸಾಹಸ ಮಾಡಿದ ಚಾಲಕನ ನಿರ್ಲಕ್ಷ್ಯ: ಟ್ರಾಕ್ಟರ್ ಇಂಜಿನ್ ಮುಗ್ಗರಿಸಿ ಬಿದ್ದ ಚಾಲಕ

 ವಾರ್ತಾ ಜಾಲ ಸುದ್ದಿ ಮಧುಗಿರಿ: ಸೇತುವೆ ದಾಟಲು ದುಸ್ಸಾಹಸ ಮಾಡಿದ ಚಾಲಕನ ನಿರ್ಲಕ್ಷದಿಂದ ಟ್ರಾಕ್ಟರ್ ಇಂಜಿನ್ ಮುಗ್ಗರಿಸಿ ಬಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ.



ತಾಲೂಕಿನ ದೊಡ್ಡೇರಿ ಹೋಬಳಿಯ ಗುಟ್ಟೆ ಮತ್ತು ಚಂದ್ರಗಿರಿ ಮುಖ್ಯ ರಸ್ತೆಯಲ್ಲಿರುವ ಸೇತುವೆಯಲ್ಲಿ ರಾತ್ರಿಯಿಡಿ ಸುರಿದ ಮಳೆಯಿಂದಾಗಿ ಹೆಚ್ಚಿನ ಪ್ರಮಾಣದ ನೀರು ರಭಸವಾಗಿ ಹರಿಯುತ್ತಿತ್ತು. ಬೆಳಿಗ್ಗೆ ಹಾಲಿನ ಕ್ಯಾನ್ ತುಂಬಿಕೊಂಡ ಟ್ರಾಕ್ಟರ್ ಚಾಲಕ ಸೇತುವೆ ದಾಟಲು ಮುಂದಾಗಿದ್ದಾನೆ. ಆದರೆ ನೀರಿನ ಸೆಳೆತಕ್ಕೆ ಟ್ರಾಕ್ಟರ್ ಇಂಜಿನ್ ಪಲ್ಟಿಯಾಗಿ ಸ್ಪಲ್ಪ ಹೊತ್ತು ಚಾಲಕ ಕಾಣೆಯಾಗಿದ್ದನು. ಆತಂಕದಿಂದ ಹುಡುಕಾಡಿದಾಗ ಸ್ವಲ್ಪ ದೂರದಲ್ಲಿ ಬಚಾವಾಗಿ ಚಾಲಕ ಎದ್ದು ಬಂದಿದ್ದಾನೆ. ಚಾಲಕ‌ನನ್ನು ಗುಟ್ಟೆ ಗ್ರಾಮದ ಶಿವಣ್ಣ ಎಂದು ತಿಳಿದು ಬಂದಿದೆ.

ಟ್ರಾಕ್ಟರ್ ನಲ್ಲಿ ಮತ್ತೆ 4 ಜನ ಮಹಿಳೆಯರು ಪ್ರಯಾಣಿಸುತ್ತಿದ್ದು ಅವರೆಲ್ಲರು ಅಪಾಯದಿಂದ ಪಾರಾಗಿದ್ದಾರೆ. ಸ್ತಳಕ್ಕೆ ತುಮುಲ್ ನಿರ್ದೇಶಕ ಕೊಂಡವಾಡಿ ಚಂದರಶೇಖರ್, ಸಿಪಿಐ ಹನುಂತರಾಯಪ್ಪ ಭೇಟಿ ನೀಡಿದ್ದಾರೆ.

ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement