Ticker

6/recent/ticker-posts

Ad Code

Responsive Advertisement

*ಶಿಡ್ಲಘಟ್ಟದಲ್ಲಿ ಓಂ ಶಕ್ತಿ ಅಮ್ಮನವರ ಗಂಜಿ ಉತ್ಸವ*

ವಾರ್ತಾಜಾಲ,ಶಿಡ್ಲಘಟ್ಟ*:ಓಂ ಶಕ್ತಿ ಅಮ್ಮನವರ ಗಂಜಿ ಉತ್ಸವ ವನ್ನು ನಗರದ ಗಂಗಮ್ಮ ದೇವಾಲಯದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಓಂ ಶಕ್ತಿ ಭಕ್ತಾಧಿಗಳು ಮೆರವಣಿಯ ಮೂಲಕ ವಿಜೃಂಭಣೆಯಿಂದ ಮಾಡಿದರು.



ಇನ್ನು ಈ ಕಾರ್ಯಕ್ರಮವನ್ನು ಭಗವತಿಜ್ಞಾನಾಕ್ಷಿ ಶ್ರೀ ರಾಜ ರಾಜೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿತ್ತು.

ನಗರದ ವಾಸವಿ ರಸ್ತೆಯಲ್ಲಿರುವ ಗಂಗಮ್ಮ ದೇವಿಯ ಗಂಜಿ ಉತ್ಸವವನ್ನು ಶಿಡ್ಲಘಟ್ಟದ ಪ್ರಮುಖ ಬೀದಿಗಳಲ್ಲಿ ಪ್ರಮುಖ ಕಲಾ ತಂಡಗಳಿಂದ ಕೋಲಾಟ, ತಮಟೆ ವಾದ್ಯ, ಮಂಗಳವಾದ್ಯ, ಪಂಬುವಾದ್ಯ, ಚಂಡೆವಾದ್ಯ, ಡೊಳ್ಳುಕುಣಿತ, ಪೂಜಾಕುಣಿತ, ಪಂಡರಿಭಜನೆ, ಚಕ್ಕೆಭಜನೆ, ವೀರಗಾಸೆಯಿಂದ ಭಕ್ತಾಧಿಗಳನ್ನು ಮನರಂಜಿಸಿದರು.ಈ ಕಲಾ ತಂಡಗಳ ನೃತ್ಯಕ್ಕೆ ಭಕ್ತಾದಿಗಳು ಹಾಗೂ ಸಾರ್ವಜನಿಕರು ಮನಸೋತರು.

ಈ ಕಾರ್ಯಕ್ರಮದಲ್ಲಿ ಭಗವತಿಜ್ಞಾನಾಕ್ಷಿ ಶ್ರೀ ರಾಜ ರಾಜೇಶ್ವರಿ ಸೇವಾ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಗಳು ಪಾಲ್ಗೊಂಡು ಯಶಸ್ವಿಯನ್ನಾಗಿಸಿದರು.

Post a Comment

0 Comments

Ad Code

Responsive Advertisement