Ticker

6/recent/ticker-posts

Ad Code

Responsive Advertisement

"ಕೋಮಲ ಕಂಠದ ಸಾನ್ವಿ ಗಾಯನ"

ಬೆಂಗಳೂರಿನ ಪ್ರಕಾಶನಗರದ ರಾಯರ ಮಠದ ನೂತನ ಕಟ್ಟಡ ನಿರ್ಮಾಣದ ನಿಧಿಗಾಗಿ ಆಗಸ್ಟ್ 20, ಶನಿವಾರ ಸಂಜೆ ಏರ್ಪಡಿಸಿದ್ದ ದಾಸವಾಣಿ ಕಾರ್ಯಕ್ರಮದಲ್ಲಿ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಎದೆತುಂಬಿ ಹಾಡುವೆನು' ಖ್ಯಾತಿಯ ಸಾಗರ ತಾಲೂಕಿನ ಹಾರೇಕೊಪ್ಪ ಗ್ರಾಮದ ಕು|| ಸಾನ್ವಿ ಜಿ ಭಟ್, ಶ್ರೀ  ಪುರಂದರದಾಸರ ರಚನೆಯಾದ "ಗಜವದನ ಬೇಡುವೆ" ಎಂಬ ವಿಘ್ನೇಶ್ವರನ ಕೃತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, "ರಾಯ ಬಾರೋ ರಾಘವೇಂದ್ರ ಬಾರೋ" (ಶ್ರೀದ ವಿಠಲ), "ತುಂಗಾ ತೀರದಿ ನಿಂತ", (ಅಭಿನವ ಜನಾರ್ಧನವಿಠಲ), "ರಾಘವೇಂದ್ರ ಗುರು ರಾಯರ ಸೇವಿಸಿರೋ" (ಶ್ರೀದ ವಿಠಲ), "ಧವಳ ಗಂಗೆಯ ಗಂಗಾಧರ ಮಹಾಲಿಂಗ" (ವಾದಿರಾಜರು),"ರಜತಾದ್ರಿ ನಿಲಯನ" (ಶ್ಯಾಮಸುಂದರ ದಾಸರು),

"ಪವಮಾನ ನಮ್ಮ ಗುರು ಪವಮಾನ"

(ಜಗನ್ನಾಥವಿಠಲ), "ಪವಮಾನ ಜಗದ ಪ್ರಾಣ" (ವಿಜಯದಾಸರು), "ಆರಿಗೆ ವಧುವಾದೆ" (ಪುರಂದರದಾಸರು), "ಒಲಿದೆ ಯಾತಕಮ್ಮಾ ಲಕುಮಿ" (ಶ್ರೀಪಾದರಾಜರು), "ಬಾರೇ ಭಾಗ್ಯದ ನಿಧಿಯೇ" (ಅನಂತಾದ್ರೀಶ), "ಕಂಡೆನಾ ಕನಸಿನಲಿ

 ಕನಸಿನಲಿ" (ಪುರಂದರದಾಸರು), "ನಿಮ್ಮನ್ಹೊರತು ಪೊರೆವರ ನಾಕಾಣೆ" (ಪ್ರಸನ್ನವೆಂಕಟದಾಸರು), "ಆನೆಯು ಕರೆದರೆ (ಉಗಾಭೋಗ, ಪುರಂದರದಾಸರು) ಹಾಗೂ ಶ್ರೀ ಕನಕದಾಸರ "ನೋಡು ನೋಡು ಗೋಪಿ" ಎಂಬ ಕನಕದಾಸರ ಕೃತಿಯೊಂದಿಗೆ ಅಂದಿನ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.

ಈ ಕಲಾವಿದೆ ಗಾಯನದಲ್ಲಿ ಮಾತ್ರವಲ್ಲದೆ, ವಿದ್ಯಾಭ್ಯಾಸದಲ್ಲಿ ಮತ್ತು ಯೋಗಾಸನದಲ್ಲಿ ಸದಾ ಯಾವಾಗಲೂ ಮುಂದಿರುತ್ತಾರೆ.

Post a Comment

0 Comments

Ad Code

Responsive Advertisement