Ticker

6/recent/ticker-posts

Ad Code

Responsive Advertisement

*ಲಯನ್ಸ್ ಕ್ಲಬ್‌ ಆಫ್ ಬೆಂಗಳೂರು ಕಾವೇರಿಯ ಅಧ್ಯಕ್ಷರಾಗಿ ಎನ್.ಆರ್.ಪರಮೇಶ್ವರಯ್ಯನವರೇ ಮರು ಆಯ್ಕೆ*

ಬೆಂಗಳೂರು : ವಿಶ್ವ ಮಟ್ಟದಲ್ಲಿ,   ಸುಮಾರು 222 ದೇಶಗಳಲ್ಲಿ ಸೇವಾನಿರತವಾಗಿರುವ ಲಯನ್ಸ್ ಸಂಸ್ಥೆಯು, ತನ್ನ ಸಮಾಜ ಸೇವೆಯಿಂದ  ವಿಶೇಷ ಗೌರವಕ್ಕೆ ಪಾತ್ರವಾಗಿ, ಜನರ ಸಂಕಷ್ಟದ ಸಮಯದಲ್ಲಿ ಅವರಿಗೆ ಸಹಾಯದ ಹಸ್ತವನ್ನು ಚಾಚುವ ಮೂಲಕ ಅವರ ಮನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಲು ಮಾನವೀಯ ಮೌಲ್ಯಗಳನ್ನು  ಅಳವಡಿಸಿಕೊಂಡು ತಮ್ಮ ತಮ್ಮ  ಶ್ರಮದ ದುಡಿಮೆಯಲ್ಲಿ ಸಮಾಜಕ್ಕೂ ಒಂದು ಪಾಲನ್ನು ನಿಸ್ವಾರ್ಥ ಮನೋಭಾವದಿಂದ ಮುಕ್ತವಾಗಿ ಕೊಡುಗೆಯ ರೂಪದಲ್ಲಿ ನೀಡುವ ಲಯನ್ಸ್ ಸದಸ್ಯರೆಲ್ಲರೂ ಪ್ರಶಂಸನೀಯರು ಎಂಬ ಅಭಿಪ್ರಾಯವನ್ನು  ನಿಕಟಪೂರ್ವ ಜಿಲ್ಲಾ ಗವರ್ನರ್ ಲಯನ್ ಪಿ.ಆರ್.ಎಸ್.ಚೇತನ್ ಎಂಜೆಎಫ್ ರವರು ನಗರದಲ್ಲಿ ಇತ್ತೀಚೆಗೆ ನಡೆದ ಲಯನ್ಸ್ ಸಭೆಯಲ್ಲಿ ಪಾಲ್ಗೊಂಡು ಲಯನ್ಸ್ ಕ್ಲಬ್‌ ಆಪ್ ಬೆಂಗಳೂರು 317 ಎ ಕಾವೇರಿ ಕ್ಲಬ್‌ ಗೆ ಲಯನ್ ಎನ್.ಆರ್. ಪರಮೇಶ್ವರಯ್ಯನವರನ್ನು ಮತ್ತೊಂದು ಅವಧಿಗೆ ಅಧ್ಯಕ್ಷರನ್ನಾಗಿ ಮುಂದುವರೆಸಿ, ನಿಯುಕ್ತಿಗೊಳಿಸುವ ವೇಳೆ ವ್ಯಕ್ತಪಡಿಸಿದರು. 









   ಲಯನ್ ಎನ್.ಆರ್. ಪರಮೇಶ್ವರಯ್ಯನವರು ತಮಗೆ ಸಿಕ್ಕ ಅವಕಾಶವನ್ನು ಬಹಳ ಚೆನ್ನಾಗಿ ನಿರ್ವಹಿಸಿ, ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ತಾವೇ  ಮುಂದುವರೆಯಲು ಲಯನ್ಸ್  ಕಾವೇರಿ ಕ್ಲಬ್‌ ನ ಸ್ಥಪಕ ಅಧ್ಯಕ್ಷರಾದ ಹಾಲಿ ಜೋನ್ ಚೇರ್ ಪರ್ಸನ್  ಲಯನ್ ಡಾ. ಜಿ.ಎಸ್. ಚೌಧರಿ ಹಾಗೂ ತಮ್ಮ ತಂಡದ ಎಲ್ಲಾ ಸಹ ಸದಸ್ಯರ ಸಹಕಾರದೊಂದಿಗೆ ಮಾಡಿದ ಸೇವಾಸಾಧನೆಯೇ ಕಾರಣವಾಗಿದೆ ಎಂದು ಲಯನ್  ಪಿ.ಆರ್.ಎಸ್.ಚೇತನ್ ರವರು ಮೆಚ್ಚುಗೆ ವ್ಯಕ್ತಪಡಿಸಿದರು. 


   ಈ ಸಂದರ್ಭದಲ್ಲಿ ಇನ್ಸ್ಟಾಲೇಷನ್ ಚೇರ್ಮನ್ ಲಯನ್ ಡಾ. ಚೂಡಾಮಣಿ  ಎಂಜೆಎಫ್, ಕಾರ್ಯದರ್ಶಿ ಲಯನ್ ಪ್ರೋ. ಎ.ಬಿ.ನಾಗರಾಜ್, ರೀಜಿಯನ್ ಚೇರ್ ಪರ್ಸನ್  ಲಯನ್ ವೆಂಕಟೇಶ್ ಎಂಜೆಎಫ್, ಶ್ರೀಮತಿ ಶಿಲ್ಪಾ,  ಡಿಸಿ ಅಂಡ್ ಪಿ ಎಸ್ ಟಿ ಫೋರಮ್ ಲಯನ್ ಡಾ. ಜಿ. ಮೋಹನ್ ಎಂಜೆಎಫ್,  ಖಜಾಂಚಿ ಲಯನ್ ಎಂ.ಯಮುನಾ ಪಾಟೀಲ್ ಎಂಜೆಎಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಖ್ಯಾತ ಕಿರುತೆರೆ/ಸಿನಿಮಾ ನಟ ಹಾಗೂ ಬಿಜೆಪಿ ಮುಖಂಡರಾದ ಗಣೇಶ್ ರಾವ್ ಕೇಸರ್ಕರ್, ಲಯನ್ ಹನುಮಂತಯ್ಯ ಜಿ, ಕೆಪಿಟಿಎ ಅಧ್ಯಕ್ಷ ಕೆ.ಎನ್. ನಾಗರಾಜು, ಲಯನ್  ಸಿ.ಮಂಜುನಾಥ್, ಲಯನ್ ಕಿಶನ್, ಲಯನ್ ಹರಿ ರೆಡ್ಡಿ ಮುಂತಾದ ಪ್ರಮುಖರು ಭಾಗವಹಿಸಿದ್ದ ಈ ಸಭೆಯಲ್ಲಿ ಎಲ್ಲಾ ಪ್ರಮುಖರಿಗೂ ಗೌರವಸೂಚಕವಾಗಿ ಸನ್ಮಾನಿಸಿ, ಅಭಿನಂದಿಸಲಾಯಿತು. ಈ ವೇಳೆ  ಲಯನ್ಸ್  ಕ್ಲಬ್ ಕಾವೇರಿ ಹಾಗೂ ಶ್ರೀ ಜಗದ್ಗುರು ಫೌಂಡೇಷನ್ ವತಿಯಿಂದ "ಯಥಾರ್ಥ ಗೀತಾ" ಪುಸ್ತಕದ ಪ್ರತಿಗಳನ್ನು ಬಂದ ಎಲ್ಲರಿಗೂ ಕೊಡುಗೆಯಾಗಿ ನೀಡಲಾಯಿತು.

Post a Comment

0 Comments

Ad Code

Responsive Advertisement