ವಾರ್ತಾ ಜಾಲ ಸುದ್ದಿ ಮಧುಗಿರಿ. ಪಟ್ಟಣದ ಪಾವಗಡ ಸರ್ಕಲ್ ನಲ್ಲಿರುವ ಡಾ. ಬಿಆರ್ ಅಂಬೇಡ್ಕರ್ ಅವರ ಪುತ್ತಳಿಗೆ ದಿನಾಂಕ 17- 08-2022 ರಂದು.ಅಸ್ಪೃಶ್ಯ ಸಮುದಾಯಗಳಿಗೆ ನೈಜ ಸ್ವಾತಂತ್ರ್ಯ ತಂದುಕೊಟ್ಟ 9ನೇ ವರ್ಷದ ವಿಜಯೋತ್ಸವ ಸಂಭ್ರಮಾಚರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
90ನೇ ವರ್ಷದ ನೈಜ ಸ್ವತಂತ್ರ ವಿಜಯೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಡಾ. ಬಿಆರ್ ಅಂಬೇಡ್ಕರ್ ರವರ ಪುತ್ತಳಿಗೆಮಾಲಾರ್ಪಣೆ ಮಾಡಿದರು.
ನಂತರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕೆಯನ್ನು ಉದ್ದೇಶಿಸಿ ಮಾತನಾಡಿದ ಡಾ ಬಿ ಆರ್ ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ರಾಜ್ಯ ಉಪಾಧ್ಯಕ್ಷರಾದ ಬಿಎಸ್ ಪ್ರಸನ್ ಕುಮಾರ್ ಮಾತನಾಡಿ ದೇಶದಲ್ಲಿ ಅಸ್ಪೃಶ್ಯರಿಗೆ ಮತದಾನದ ಹಕ್ಕನ್ನು ಕೊಟ್ಟ ಮೇಲೆ ನಮಗೆ ಬದುಕಿನಲ್ಲಿ ಭರವಸೆಯ ಬೆಳಕು ಕಂಡಿದ್ದು. ಹಿಂದೆ ನಮ್ಮಗಳಿಗೆ ಸ್ವಾತಂತ್ರ್ಯ ಬಂದ ದಿನವಾಗಿದೆ ಎಂದರು. ಅಂಬೇಡ್ಕರ್ ಅವರು ಅನುಭವಿಸಿದ ಅಸ್ಪೃಶ್ಯತಾ ನೋವನ್ನು ಯಾರು ಅನುಭವಿಸಲಾರರು ಇಂತಹ ಮಹಾ ನೀಯನಿಂದಾಗಿ ದೇಶದ ಅಸಹಾಯಕರು ಮತದಾನದ ಹಕ್ಕನ್ನು ಪಡೆದ ಈ ದಿನವನ್ನು ದೇಶದ ನೈಜ ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ.
1932 ಆಗಸ್ಟ್ 17ರಂದು ಬ್ರಿಟಿಷರ ಅನುಮತಿ ಪಡೆದು ಅಸ್ಪೃಶ್ಯ ಸಮುದಾಯ ಗಳಿಗೆ ಮತ ಹಾಕುವ ಹಕ್ಕನ್ನು ಪಡೆಯಲಾಯಿತು. ಈ ಹೋರಾಟ 1917 ರಿಂದ 1932ರವರೆಗೆ ನಿರಂತರವಾಗಿ ನಡೆದಿದೆ ಇಂದು ನಾವೆಲ್ಲರೂ ಮತ ಚಲಾಯಿಸುತ್ತಿದ್ದೇವೆ ಎಂದರು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷರಾದ ಲಕ್ಷ್ಮೀನಾರಾಯಣ್ ಮಧುಗಿರಿ ಉಪ ವಿಭಾಗದ ಅಧ್ಯಕ್ಷರಾದ ದೊಡ್ಡ ಎಲ್ಕೂರ್ ಲಕ್ಷ್ಮಿಪತಿ, ಉಪಾಧ್ಯಕ್ಷರಾದ ಬಾಲಕೃಷ್ಣ, ಛಲವಾದಿ ಮಹಾಸಭಾ ಅಧ್ಯಕ್ಷರಾದ ಕೆವಿ ವೆಂಕಟೇಶ್, ವಕೀಲರಾದ ಶಿವಕುಮಾರ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷರಾದ ಶಿವಲಿಂಗಪ್ಪ, ಆರ್ ಕೆ ದೃವ ಕುಮಾರ್, ಎನ್ಆರ್ ಅಂಬೇಡ್ಕರ್, ಸದಾಶಿವಯ್ಯ, ಸುರೇಶ್, ರಂಗನಾಥ್ ಸ್ಫೂರ್ತಿ ಡ್ರೈವಿಂಗ್ ಸ್ಕೂಲ್, ಮಹಾಲಿಂಗಯ್ಯ, ಗೋವಿಂದರಾಜು ಹೊಸಕೆರೆ, ಮಂಜುನಾಥ್ ಜೀವಿಕ, ಅರಳಾಪುರ ರಮೇಶ್, ರಾಮಚಂದ್ರಪ್ಪ, ಗೋಪಾಲ್, ಐಡಿ ಹಳ್ಳಿ ದಾಸಪ್ಪ ಇನ್ನೂ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ:ನಾಗೇಶ್ ಜೀವಾ ಮಧುಗಿರಿ.

0 Comments