ಪ್ರಣವಾಂಜಲಿ ನೃತ್ಯ ಸಂಸ್ಥೆಯು ತನ್ನ ಹದಿಮೂರನೇ ವರ್ಷದ ವಾರ್ಷಿಕೋತ್ಸವವನ್ನು ಆಗಸ್ಟ್ 27, ಶನಿವಾರ ಸಂಜೆ 5-30ಕ್ಕೆ ಬನಶಂಕರಿ ಬಡಾವಣೆಯಲ್ಲಿರುವ ಪರಂಪರಾ ಆಡಿಟೋರಿಯಂ ನಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಶ್ರೀಮತಿ ಪವಿತ್ರ ಪ್ರಶಾಂತ್ ರವರ ನಿರ್ದೇಶನದಲ್ಲಿ ನವದುರ್ಗಾ ನೃತ್ಯ ನಾಟಕವನ್ನು ಪ್ರದರ್ಶಿಸುತ್ತಿದ್ದಾರೆ.
ಮುಖ್ಯ ಅತಿಥಿಗಳಾಗಿ ಎಸ್ ಕೆ ಇ ಐ ನ ಉಪಾಧ್ಯಕ್ಷರಾದ ಶ್ರೀ ಶ್ರೀನಿವಾಸ ಕುಪ್ಪ ರವರು, ಒನ್ ಇಂಡಿಯಾ ಆನ್ಲೈನ್ ನ್ಯೂಸ್ ಪೋರ್ಟಲ್ ನ ಮುಖ್ಯ ಆಡಳಿತ ಅಧಿಕಾರಿಯಾದ ಶ್ರೀ ಬಾಲರಾಜ್ ತಂತ್ರಿ ರವರು ಹಾಗೂ ಕಾದಂಬರಿ ಒಡ್ಡಿಸಿ ನೃತ್ಯ ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ಕರಿಷ್ಮಾ ಅಹುಜಾ ರವರು ಆಗಮಿಸುತ್ತಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕರಾದ ವಿದುಷಿ ಶ್ರೀಮತಿ ಪವಿತ್ರಾ ಪ್ರಶಾಂತ್ ಅವರು ತಿಳಿಸಿದ್ದಾರೆ.
ಕಾರ್ಯಕ್ರಮ ನಡೆಯುವ ಸ್ಥಳ :
ಪರಂಪರ ಆಡಿಟೋರಿಯಂ
# 1259, ಚೆನ್ನಮನ ಕೆರೆ ಅಚ್ಚುಕಟ್ಟು, 3 ನೇ ಮುಖ್ಯರಸ್ತೆ, ಕತ್ರಿಗುಪ್ಪೆ, ಬನಶಂಕರಿ ಮೂರನೇ ಹಂತ, ಬೆಂಗಳೂರು-85
ಸರ್ವರಿಗೂ ಆದರದ ಸುಸ್ವಾಗತ

0 Comments