ಹೊಸದಿಲ್ಲಿ: ಭಾರತದ ಪತ್ರಿಕೆಗಳಿಗೆ ಇ-ಫೈಲಿಂಗ್ ಮಾಡಲು ಆರ್‌ಎನೈ 2022ರ ಜುಲೈ 31 ರವರೆಗೆ ಕಾಲಾವಕಾಶ ವಿಸ್ತರಿಸಲಾಗಿದೆ. ಆರ್ಥಿಕ ವರ್ಷ 2021-22 ಇ-ಫೈಲಿಂಗ್ ಮಾಡುವ ಕೊನೆಯ ದಿನಾಂಕವನ್ನು ಮೇಲೆ ಹೇಳಿದಂತೆ ವಿಸ್ತರಿಸಲಾಗಿದೆ. ಎಲ್ಲಾ ಪ್ರಕಾಶಕರು www.egov.rni.nic.in ಮೂಲಕ ವಾರ್ಷಿಕ ವರದಿ/ಹೇಳಿಕೆಯನ್ನು ಸಲ್ಲಿಸಬಹುದು. 31 ಜುಲೈ 2022ರ ನಂತರ ಯಾವುದೇ ವಿಸ್ತರಣೆಯನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
2021-22ರ ವಾರ್ಷಿಕ ವರದಿ/ಹೇಳಿಕೆಯನ್ನು ಪ್ರಕಾಶಕರಿಗೆ ಈ ವಿಸ್ತರಣೆ ಮೂಲಕ ಸಲ್ಲಿಸಲು ಅವಕಾಶವನ್ನು/ಸೌಲಭ್ಯವನ್ನು ಒದಗಿಸಲಾಗಿದೆ. ಅದೇ ರೀತಿಯಾಗಿ ಸಲ್ಲಸಿದ ವರದಿಯನ್ನು ಪುನರ್ಪರಿಷ್ಕರಿಸಲು 1 ಆಗಸ್ಟ್ 2022 ರಿಂದ 15 ಆಗಸ್ಟ್ 2022 ರವರೆಗೆ ಅವಕಾಶ ನೀಡಲಾಗಿದೆ. 15 ಆಗಸ್ಟ್ 2022ರ ನಂತರ ವರದಿ/ಹೇಳಿಕೆ ಸಲ್ಲಿಸಲ್ಲು ಅವಕಾಶವಿಲ್ಲವೆಂದು ಆರ್‌ಎನೈ ತಿಳಿಸಿದೆ.
ಹೆಚ್ಚಿನ ತಾಂತ್ರಿಕ ವಿಚಾರಣೆಗಳಿಗಾಗಿ ಕೆಲಸದ ದಿನಗಳಲಿ ಬೆಳಗ್ಗೆ 10:00 ಇಂದ ಸಂಜೆ 5:00 ಘಂಟೆವರೆಗು ಈ ದೂರವಾಣಿ ಸಂಖ್ಯೆ 011-24363241 ಮೂಲಕ ಸಂಪರ್ಕಿಸಬಹುದು ಮತ್ತು ಇ-ಮೇಲ್ ಮೂಲಕ it-helpdesk@nic.in/annualstatement.rni@gmail.com ಮಾಹಿತಿ ಅಥವ ವಿಚಾರಣೆ ಮಾಡಿಕೊಳ್ಳಬಹದೆಂದು ಆರ್‌ಎನೈ ತಿಳಿಸಿದೆ. ವಾರ್ಷಿಕ ವರದಿ ಸಲ್ಲಿಸದಿರುವವರು ಜುಲೈ 2022ರೊಳಗೆ ಸಲ್ಲಿಸಬಹುದು ಎಂದು ತಿಳಿಸಿದೆ.
-Varthajala bilingual daily, Bengaluru
0 Comments