ಬೆಂಗಳೂರು/ಚಿ0ತಾಮಣಿ: ವಾರ್ತಾಜಾಲ ದಿನಪತ್ರಿಕೆ, ಡಿಜಿಟೆಲ್ ಡೆಸ್ಕ್ ಹಾಗು ವೆಬ್ ಚಾನೆಲ್‌ನಲ್ಲಿ ಸತತವಾಗಿ ಪ್ರಕಟಿಸಿದ ಸುದ್ದಿಯ ಪರಿಣಾಮವಾಗಿ ಚಿಂತಾಮಣಿ ಪಟ್ಟಣದಿಂದ ಲೋಕೇಶ್ಪಲ್ಲಿ-ತಣ್ಕಲ್‌ಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಸಾರಿಗೆ ಬಸ್‌ನ್ನು ಓಡಿಸಲು ಮುಂದಾಗಿದೆ.
ಈ ಭಾಗದ ಸ್ಥಳೀಯ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಇದನ್ನರಿತ ವರ್ತಾಜಾಲ ಚಿಕ್ಕಬಳ್ಳಾಪುರ ಜಿಲ್ಲೆಯ ಮುಖ್ಯ ವರದಿಗಾರ ಚಾಕುವೇಲ್ ನಾಗರಾಜರವರು ಸತತವಾಗಿ ಇದರ ಬಗ್ಗೆ ಸುದ್ದಿ ಮಾಡಿ, ಸಂಬ0ಧಪಟ್ಟ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ಗಮನಕ್ಕೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿ, ಬಹುದಿನಗಳ ಬೇಡಿಕೆಯಾಗಿದ್ದ ಬಸ್ ಸಂಚಾರದ ವ್ಯವಸ್ಥೆಯನ್ನು ಸಂಬ0ಧಪಟ್ಟ ಅಧಿಕಾರಿಗಳಿಂದ ಜಾರಿಮಾಡಿಸುವಲ್ಲಿ ಚಾಕವೇಲ್ ನಾಗರಾಜವರು ಯಶಸ್ವಿ ಹಾಗು ಮೊದಲಿಗರಾಗಿದ್ದಾರೆಂಬುದು ಪತ್ರಿಕಾ ತಂಡಕ್ಕೆ ಹೆಮ್ಮಯ ವಿಚಾರ. ಚಿಂತಾಮಣಿಯಿ0ದ ಕಣ್ಕಲ್-ಲೋಕೇಶ್ಪಲ್ಲಿಗೆ ಸಾರಿಗೆ ಬಸ್ ಸಂಚಾರ ವ್ಯವಸ್ಥೆಯಾಗಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಹಾಗು ಸಾರ್ವಜನಿಕರು ಸಂಸ್ಥಯ ಸಂಚಾರ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬುದು ಸಾರಿಗೆ ಸಂಸ್ಥೆ ಹಾಗು ವಾರ್ತಾಜಾಲ ತಂಡದ ಬಯಕೆ.
ಅದೇ ರೀತಿಯಾಗಿ ನಮ್ಮ ಸುದ್ದಿ ಸಂಸ್ಥಯು ಪ್ರಕಟಿಸಿದ ಮೇಲಿನ ಸುದ್ದಿಗೆ ಸ್ಪಂದಿಸಿದ ಸಂಸ್ಥಯ ಹಿರಿಯ-ಕಿರಿಯ ಅಧಿಕಾರಿಗಳಿಗೆ-ಚಾಲಕರು-ನಿರ್ವಾಹಕರಿಗೆ ವಂದನೆಗಳು. ಇದೇ ರೀತಿಯಾಗಿ ವಾರ್ತಾಜಾಲ ತಂಡವು ರಾಜ್ಯದ ಮೂಲೆ ಮೂಲೆಯಲ್ಲು ಜನರ ಪರವಾಗಿ (ಮೂಲಭೂತ ವ್ಯವಸ್ಥಯ ಪರವಾಗಿ) ಹೋರಾಟ ಮಾಡಲು ಸಿದ್ದವಿದೆ ಎಂದು ಹೇಳಬಯಸುತ್ತದೆ. ಸಾರ್ವಜನಿಕರ ದೂರು ದುಮ್ಮಾಲು ಏನೇ ಇದ್ದರು ಪತ್ರಿಕಾ ತಂಡ ಅಥವ ಕಛೇರಿಗೆ ಕರೆ ಮಾಡಬಹುದು, ನಿಮ್ಮ ಪರವಾಗಿ ಸದಾ ನಾವು, ವಾರ್ತಾಜಾಲ ನಿಮ್ಮ ಧನಿಯ ಮಾರ್ಧನಿ.
Varthajala daily, Bengaluru

0 Comments