Ticker

6/recent/ticker-posts

Ad Code

Responsive Advertisement

ಗೊರೂರು ಪಂಕಜ ಅವರಿಗೆ "ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿ"

 ಅಕ್ಷರದ ದೀಪಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಶಿರಸಿಯ ನಯನ ಸಭಾಂಗಣದಲ್ಲಿ ನಿನ್ನೆ  ನಡೆದ ರಾಷ್ಟ್ರೀಯ ಕವಿ ಕಾವ್ಯ ಸಂಗಮ ಕಾರ್ಯಕ್ರಮದಲ್ಲಿ ಬೆಂಗಳೂರಿನ ಗೊರೂರು ಪಂಕಜ ಅವರಿಗೆ "ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿ" ನೀಡಿ ಪುರಸ್ಕರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಪ್ರವೀಣ ಕುಮಾರ ಕನ್ಯಾಳ, ನಯನ ಫೌಂಡೇಶನ್ ಟ್ರಸ್ಟಿ ಡಾ. ತನುಶ್ರೀ ಹೆಗಡೆ, ಸಾಹಿತಿ ಡಾ.ಪಂಚಯ್ಯ ಹಿರೇಮಠ ಸಮಾಜ ಸೇವಕಿ ಶುಭಾ ವಿಷ್ಣು ಸಭಾಹಿತ, ಡಾ. ರಮೇಶ ಸಿದ್ದಪ್ಪ, ಕುಮುಟಾ ಡಯಟ್ನ ಅಧಿಕ್ಷಕರಾದ ಜ್ಯೋತಿಹೆಬ್ಬಾ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಂಕರ ಸಿ ಪಾಟೀಲ, ನಾಗರಾಜ ತಂಬ್ರಹಳ್ಳಿ, ವಂದನಾ ಆರ್ ಕರಾಳೆ,  ನಬಿಸಾಬ ಸುಂಕದ ಅವರುಗಳಿಗೂ ಸಾಧಕರತ್ನ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಯಿತು.


ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಂಚಯ್ಯ ಹಿರೇಮಠ ಅವರು, ಪ್ರತಿಯೊಬ್ಬರೂ ಸಮಾಜ ಮುಖಿಯಾದ ಚಿಂತನೆಗಳನ್ನ ಇಟ್ಟುಕೊಂಡು ಉತ್ತಮ ಕೆಲಸಗಳನ್ನು ಮಾಡಬೇಕಾಗಿದೆ. ಒಳ್ಳೆಯ ಕೆಲಸಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಬೇಕು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಗಳಾದ ಶುಭಾ ವಿಷ್ಣು ಸಭಾಹಿತ ಅವರು ಮಾತನಾಡಿ, ಸಂಸ್ಕೃತಿಕ ಸಂಘಟನೆಗಳು ಉತ್ತಮ ಕೆಲಸಗಳನ್ನು ಮಾಡುತ್ತಿವೆ ಪ್ರಶಂಸೆ ವ್ಯಕ್ತಪಡಿಸಿದರು.

ಗಂಗಾವತಿಯ ಟಿಎಂಎಇ ಶಿಕ್ಷಣ ಮಹಾವಿದ್ಯಾಲಯದ ಸಹಪ್ರಾಧ್ಯಾಪಕರಾದ ಡಾ. ರಮೇಶ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕವಿಗಳು ತಮ್ಮ ಕವನ ವಾಚನ ಮಾಡಿದರು. ಮೇಘನಾ ಶಿವಾನಂದ್ ಸ್ವಾಗತಿಸಿದರು, ಸುಜಾತಾ ಹೆಗಡೆ ವಂದಿಸಿದರು.

Post a Comment

0 Comments

Ad Code

Responsive Advertisement