ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಬೆಂಗಳೂರು ಶ್ರೀ ಕಾಶೀ ಮಠ, ಮಲ್ಲೇಶ್ವರಂ ಇವುಗಳ ಸಂಯುಕ್ತಾಶ್ರಯದಲ್ಲಿ ಜುಲೈ 12 ರಿಂದ 15 ರ ವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಜುಲೈ 12, ಮಂಗಳವಾರ-ಸಂಜೆ 6 ಗಂಟೆಗೆ : ರಾಜಾಜಿನಗರದ ರುಕ್ಮಿಣಿ ಮಹಿಳಾ ಸಂಘ ದ ಸದಸ್ಯರಿಂದ ಭಜನೆ, ಸಂಜೆ 7 ಗಂಟೆಗೆ : ಶ್ರೀ ಕಲ್ಲಾಪುರ ಪವಮಾನಾಚಾರ್ ಇವರಿಂದ "ಭಾಗವತದಲ್ಲಿ ಶ್ರೀಕೃಷ್ಣನ ಮಹಿಮೆ" ಈ ವಿಷಯವಾಗಿ ಧಾರ್ಮಿಕ ಪ್ರವಚನ.
ಜುಲೈ 13, ಬುಧವಾರ- ಸಂಜೆ 6 ಗಂಟೆಗೆ : ಚಿಕ್ಕಲ್ಲಸಂದ್ರದ ಶ್ರೀ ಸರಸ್ವತಿ ಗಾನ ಮಂಡಲಿಯ ಸದಸ್ಯರಿಂದ ಭಜನೆ, ಸಂಜೆ 7 ಗಂಟೆಗೆ : ಶ್ರೀ ಕಲ್ಲಾಪುರ ಪವಮಾನಾಚಾರ್ ಇವರಿಂದ ಧಾರ್ಮಿಕ ಪ್ರವಚನ.
ಜುಲೈ 14, ಗುರುವಾರ- ಸಂಜೆ 6-30ಕ್ಕೆ : ಶ್ರೀಮತಿ ಮಾನಸಾ ಕುಲಕರ್ಣಿ ಇವರಿಂದ "ಹರಿನಾಮ ಸಂಕೀರ್ತನೆ".
ವಾದ್ಯ ಸಹಕಾರ : ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ), ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯).
ಜುಲೈ 15, ಶುಕ್ರವಾರ- ಸಂಜೆ 6-00 ಗಂಟೆಗೆ : ವಿದ್ಯಾರಣ್ಯಪುರದ ಶ್ರೀ ಹನುಮಾನ್ ಕೀ ಜೈ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಸಂಜೆ 7 ಗಂಟೆಗೆ : ಶ್ರೀ ಕಲ್ಲಾಪುರ ಪವಮಾನಾಚಾರ್ ಇವರಿಂದ ಧಾರ್ಮಿಕ ಪ್ರವಚನ. ಸ್ಥಳ : ಬೆಂಗಳೂರು ಶ್ರೀ ಕಾಶಿ ಮಠ, 8ನೇ ಮುಖ್ಯರಸ್ತೆ, 19ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003
ಸರ್ವರಿಗೂ ಆದರದ ಸುಸ್ವಾಗತ
.jpeg)

0 Comments